Fact Check | ಮಣಿಪುರದಲ್ಲಿ ನಡೆದ ಗಲಾಟೆ ನಕಲಿ ಮತದಾನಕ್ಕೆ ಸಂಬಂಧಿಸಿದ್ದಾಗಿದೆ

“ಈ ವಿಡಿಯೋ ನೋಡಿ ಮಣಿಪುರದ ಮಹಿಳೆಯರು ಯಾವುದೇ ಬಟನ್ ಒತ್ತಿದರೂ ಕಮಲದ ಚಿಹ್ನೆಯನ್ನು ಮಾತ್ರ ಮುದ್ರಿಸಿರುವುದನ್ನು ಗಮನಿಸಿದ್ದಾರೆ. ಇದಕ್ಕೆ ಆಕ್ರೋಶಗೊಂಡ ಜನ ಇವಿಎಂಗಳನ್ನು ಒಡೆದು ಹಾಕಿದ್ದಾರೆ.”  ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಮೂಲಕ ವಿವಿ ಪ್ಯಾಟ್‌ನಲ್ಲಿ ಹಲವು ದೋಷಗಳು ಇವೆ ಎಂದು ಹಂಚಿಕೊಳ್ಳಲಾಗುತ್ತದೆ.

ವಿಡಿಯೋ ನೋಡಿದ ಸಾಕಷ್ಟು ಮಂದಿ ಇದು ನಿಜವಾದ ವಿಡಿಯೋ ಎಂದು ನಂಬಿಕೊಂಡು ವಿವಿಧ ಬರಹಗಳೊಂದಿಗೆ ಇದೇ ವಿಡಿಯೋವನ್ನು ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆದರೆ ಈ ವಿಡಿಯೋ ಕುರಿತು ಸಂಪೂರ್ಣವಾಗಿ ಪರಿಶೀಲನೆ ನಡೆಸಿದಾಗ ಅಸಲಿ ವಿಚಾರ ಸಂಪೂರ್ಣವಾಗಿ ಬಹಿರಂಗಗೊಂಡಿದೆ.

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ಕುರಿತು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಪರಿಶೀಲನೆ ನಡೆಸಿದೆ. ಇದಕ್ಕಾಗಿ ವೈರಲ್‌ ವಿಡಿಯೋದ ಕೀ ಫ್ರೇಮ್‌ಗಳನ್ನು ಬಳಸಿ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲನೆಯನ್ನ ನಡೆಸಲಾಯಿತು. ಈ ವೇಳೆ ಈ ವಿಡಿಯೋಗೆ ಸಂಬಂಧಿಸಿದಂತೆ ರಾಷ್ಟ್ರೀಯ ಸುದ್ದಿ ಮಾಧ್ಯಮಗಳಲ್ಲಿ ಹಲವು ವರದಿಗಳು ಕಂಡು ಬಂದಿದ್ದು, ಈ ವೈರಲ್‌ ವಿಡಿಯೋದ ಕುರಿತು ಬೇರೆಯದ್ದೇ ಮಾಹಿತಿಯನ್ನ ನೀಡಿವೆ.

ಹೌದು.. ವೈರಲ್‌ ವಿಡಿಯೋ ಎನ್‌ಡಿಟಿವಿಯ ಯುಟ್ಯುಬ್‌ ಚಾನಲ್‌ನಲ್ಲಿ 19 ಏಪ್ರಿಲ್‌ 2024ರಂದು ಕಂಡು ಬಂದಿದೆ. ಈ ವರದಿಯಲ್ಲಿ ನಕಲಿ ಮತದಾನದ ವಿಚಾರದ ಕುರಿತು ಗಲಾಟೆ ನಡೆದಿರುವ ಮಾಹಿತಿ ಇದೆ. ಇನ್ನು 27 ಏಪ್ರಿಲ್‌ 2024ರಂದು ಘಟನೆಯ ಕುರಿತು ಮಣಿಪುರದ ಸಿಇಒ ಮಾಹಿತಿ ನೀಡಿದ್ದು, ಈ ಘಟನೆ ಇಂಫಾಲ್ ಪೂರ್ವದ ಮತಗಟ್ಟೆಯಲ್ಲಿ (3/21 ಖುರೈ ಅಸೆಂಬ್ಲಿ ವಿಭಾಗ) ಗುಂಪು ಹಿಂಸಾಚಾರದ ಪ್ರಕರಣವಾಗಿದೆ ಎಂದು ಮಾಹಿತಿ ನೀಡಿದ್ದರು.

ಈ ಪ್ರದೇಶದಲ್ಲಿ ಇದೇ ಏಪ್ರಿಲ್‌ 22ರಂದು  ಮರು ಮತದಾನ ಮಾಡಲಾಗಿದೆ. VVPAT ಮೂಲಕ ರಚಿಸಲಾದ ಬ್ಯಾಲೆಟ್ ಯೂನಿಟ್ ಮತ್ತು ಪೇಪರ್ ಸ್ಲಿಪ್‌ನಲ್ಲಿ ಯಾವುದೇ ಹೊಂದಿಕೆಯಾಗದ ಮತಗಳು ಕಂಡು ಬಂದಿಲ್ಲ ಹಾಗೂ ಈ ಕಾರಣಕ್ಕಾಗಿ ಗಲಾಟೆ ನಡೆದಿಲ್ಲ. ಇದೊಂದು ಸುಳ್ಳು ಸುದ್ದಿಯಾಗಿದೆ,  ಎಂದು ಸ್ಪಷ್ಟ ಪಡಿಸಿದ್ದಾರೆ. ಹಾಗಾಗಿ ವೈರಲ್‌ ವಿಡಿಯೋದಲ್ಲಿನ ಆರೋಪ ಸುಳ್ಳಾಗಿದೆ.


ಇದನ್ನೂ ಓದಿ : ರಾಹುಲ್‌ ಗಾಂಧಿ ರಹಸ್ಯ ವಿವಾಹ ಎಂಬುದು ಸುಳ್ಳು | @rahulgandhi | Congress | INC | Kannada Fact check


ಈ ವಿಡಿಯೋ ನೋಡಿ :ರಾಹುಲ್‌ ಗಾಂಧಿ ರಹಸ್ಯ ವಿವಾಹ ಎಂಬುದು ಸುಳ್ಳು | @rahulgandhi | Congress | INC | Kannada Fact check


ನಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *