Fact Check: ಎರಡು ಬೇರೆ ಘಟನೆಗಳ ವಿಡಿಯೋ ಜೋಡಿಸಿ ಕೇರಳದಲ್ಲಿ RSS ಕಾರ್ಯಕರ್ತನ ತಲೆ ಕಡಿಯಲಾಗಿದೆ ಎಂದು ಸುಳ್ಳು ಹಂಚಿಕೆ

RSS

ಇತ್ತೀಚೆಗೆ ವ್ಯವಸ್ತಿತವಾಗಿ ಕೋಮವಾದವನ್ನು ಹುಟ್ಟುಹಾಕಲು ಭಾರತದಾದ್ಯಂತ ಸಂಚು ರೂಪಿಸಲಾಗುತ್ತಿದ್ದು ಇದರ ಭಾಗವಾಗಿ ಕೆಲವು ಬಲಪಂಥೀಯ ಸಂಘಟನೆಗಳು ದೇಶದಲ್ಲಿ ಬೇರೆ ಬೇರೆ ಕಡೆ ನಡೆದ ಜಗಳಗಳು ಮತ್ತು ಕೊಲೆಗಳಿಗೆ ಕೋಮು ಬಣ್ಣ ಬಳಿದು ಮುಸ್ಲಿಮರು ಹಿಂದುಗಳಲ್ಲು ಕೊಲ್ಲುತ್ತಿದ್ದಾರೆ ಎಚ್ಚೆತ್ತುಕೊಳ್ಳಿ ಎಂದು ಹಿಂದುಗಳಲ್ಲಿ ಮುಸ್ಲಿಮರ ಕುರಿತು ದ್ವೇಷ ಮತ್ತು ಭಯವನ್ನು ಹುಟ್ಟುಹಾಕುತ್ತಿದ್ದಾರೆ. ಮತ್ತು ಈ ಮೂಲಕ ನೀವು ಸಹ ಇದೇ ರೀತಿ ಮುಸ್ಲಿಮರನ್ನು ನಡೆಸಿಕೊಳ್ಳಿ ಎಂಬ ಸಂದೇಶವನ್ನು ಸಹ ರವಾನಿಸಲಾಗುತ್ತಿದೆ.

ಈಗ, ಆರೆಸ್ಸೆಸ್ ಕಾರ್ಯಕರ್ತನನ್ನು ಮಸೀದಿಗೆ ಕರೆದೊಯ್ದು ತಲೆ ಕಡಿದ ಕೇರಳದ ಮುಸಲ್ಮಾನರು. ಇವರು ಬಹುಸಂಖ್ಯಾತರಾದರೆ ಇಡೀ ದೇಶವೇ ಹೀಗೆ, ನ್ಯಾಯಾಲಯ, ಸಂವಿಧಾನ, ಪೋಲೀಸ್ ಯಾವುದೂ ನಿಮ್ಮನ್ನು ರಕ್ಷಿಸುವುದಿಲ್ಲ ಎಂದು ಪ್ರತಿಪಾದಿಸಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ.

ವಾಟ್ಸಾಪ್‌ನಲ್ಲಿ ಸಹ ಈ ವಿಡಿಯೋವನ್ನು ವ್ಯಪಕವಾಗಿ ಹಂಚಿಕೊಳ್ಳಲಾಗುತ್ತಿದೆ. 

ಫ್ಯಾಕ್ಟ್‌ಚೆಕ್‌: ವೈರಲ್ ವಿಡಿಯೋವನ್ನು ಎರಡು ಬೇರೆ ಬೇರೆ ಘಟನೆಗಳ ವಿಡಿಯೋ ಜೋಡಿಸಿ ಎಡಿಟ್‌ ಮಾಡಲಾಗಿದೆ. ಈ ವಿಡಿಯೋವಿಗೂ ಕೇರಳದ ಮುಸ್ಲಿಮರಿಗೂ ಯಾವುದೇ ಸಂಬಂಧವಿಲ್ಲ. ವಿಡಿಯೋ ಆರಂಭದಲ್ಲಿ ವ್ಯಕ್ತಿಯೊಬ್ಬನಿಗೆ ತಳಿಸುವ ಘಟನೆ ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯ ಸಿಕ್ರಿಯಲ್ಲಿ ನಡೆದಿದೆ. ಅನುಜ್ ಎಂಬ ಲೈನ್‌ಮ್ಯಾನ್ ಮತ್ತು ಅಲ್ಲಿನ ಸ್ಥಳಿಯರ ಜೊತೆಗೆ ಕೆಲಸದ ವಿಚಾರಕ್ಕೆ ಜಗಳ ನಡೆದಿದೆ.

ಮೇ 5, 2021 ರಂದು ಅಮರ್ ಉಜಾಲಾ ಎಂಬ ಸುದ್ದಿ ಮಾಧ್ಯಮದಲ್ಲಿ ಪ್ರಕಟವಾದ ವರದಿಯ ಪ್ರಕಾರ, ವಿದ್ಯುತ್ ಲೈನ್‌ನಲ್ಲಿನ ದೋಷವನ್ನು ಸರಿಪಡಿಸಲು ಅನುಜ್ ಸಿಕ್ರಿಗೆ ಹೋಗಿದ್ದರು. “ಹಳ್ಳಿಯಿಂದ ಒಬ್ಬ ಸಲ್ಮಾನ್ ತನ್ನ ಸಹೋದರ ಅಯಾಜ್ ಜೊತೆ ಬಂದು, ಇಬ್ಬರೂ ತಮ್ಮ ಕೇಬಲ್ ಬದಲಾಯಿಸಲು ಅನುಜ್ ಅವರನ್ನು ಕೇಳಿದರು. ಅನುಜ್ ಅವರು ನಿರಾಕರಿಸಿದರು ಮತ್ತು ಮೊದಲು ಜೆಇಯಿಂದ ಅನುಮತಿ ಕೊಡಿಸಿ ಎಂದು ಹೇಳಿದರು. ಆರೋಪಿಗಳು ತಮ್ಮ ಸ್ನೇಹಿತರಾದ ರಫಿ, ಖಾಲಿದ್, ನಾಜ್, ಆಸ್ ಮೊಹಮ್ಮದ್, ಅಬಿದ್ ಮತ್ತು ಒಬ್ಬ ಅನಾಮಧೇಯ ವ್ಯಕ್ತಿಗೆ ಕರೆ ಮಾಡಿ ಅನುಜ್ ನಿಂದಿಸಲು ಆರಂಭಿಸಿದ್ದಾರೆ ನಂತರ ಹಲ್ಲೆ ನಡೆಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಅನುಜ್ ಜೊತೆ ಬಂದಿದ್ದ ಇನ್ನಿಬ್ಬರು ಕಾರ್ಮಿಕರು ತಪ್ಪಿಸಿಕೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಎಂಟು ಜನರ ವಿರುದ್ಧ ದೂರು ದಾಖಲಿಸಲಾಗಿತ್ತು. ಇದೇ ವಿಡಿಯೋವನ್ನು ಪಶ್ಚಿಮ ಬಂಗಾಳದಲ್ಲಿ ಹಿಂದು ಕಾರ್ಯಕರ್ತನನ್ನು ಮುಸ್ಲೀಮರು ತಳಿಸಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿತ್ತು, “ಇದು ಕೋಮು ಜಗಳ ಅಲ್ಲ. ಆರೋಪಿಗಳನ್ನು ಬಂದಿಸಲಾಗಿದೆ ಎಂದು ಉತ್ತರ ಪ್ರದೇಶದ ಮುಜಾಫರ್‌ನಗರದ ಪೋಲೀಸರು ಟ್ವಿಟ್‌ ಮೂಲಕ ಸ್ಪಷ್ಟಪಡಿಸಿದ್ದಾರೆ.

ವಿಡಿಯೋ ಕೊನೆಗೆ ಬರುವ ತಲೆಕಡೆಯುವ ಘಟನೆ ಪರಾಗ್ವೆಯ ಸ್ಯಾನ್ ಪೆಡ್ರೊ ಡಿ ಕ್ವಾಮಂಡಿಯೊ ಪ್ರಾದೇಶಿಕ ಜೈಲ್ ಪೆಡ್ರೊದಲ್ಲಿ ನಡೆದಿದೆ. ಬ್ರೆಜಿಲ್ ಮೂಲದ ಕ್ರಿಮಿನಲ್ ಸಂಘಟನೆಯಾದ ಪ್ರೈಮರ್ ಕಮಾಂಡೋ ಡ ಕ್ಯಾಪಿಟಲ್‌ನ ಸದಸ್ಯರು ಪರಾಗ್ವೆಯ ಜೈಲು ಕೋಣೆಯಲ್ಲಿ ಮತ್ತೊಂದು ಗುಂಪಿನ ಸಹಚರನನ್ನು ಕೊಲೆ ಮಾಡಿದ ವೀಡಿಯೊ ಇದಾಗಿದೆ. ಇದನ್ನು ಯುಕೆ ಮೂಲದ ಡೈಲಿ ಮೇಲ್ ಮತ್ತು ಸ್ಪೇನ್ ಮೂಲದ ಪೆರಿಯೊಡಿಸ್ಟಾ ಡಿಜಿಟಲ್ 2019 ರಲ್ಲಿ ವರದಿ ಮಾಡಿದೆ.


ಆದ್ದರಿಂದ ಆರೆಸ್ಸೆಸ್ ಕಾರ್ಯಕರ್ತನನ್ನು ಮಸೀದಿಗೆ ಕರೆದೊಯ್ದು ಕೇರಳದ ಮುಸಲ್ಮಾನರು ತಲೆ ಕಡಿದಿದ್ದಾರೆ ಎಂಬುದು ಸಂಪೂರ್ಣ ಸುಳ್ಳು. ಕೋಮು ದ್ವೇಷ ಹರಡಲು ಈ ರೀತಿ ಪ್ರತಿಪಾದಿಸಿ ವಿಡಿಯೋ ಹರಿಬಿಡಲಾಗಿದೆ.


ಇದನ್ನು ಓದಿ: ಅದಾನಿ ಬಂದರಿನಿಂದ ಗೋಮಾಂಸ ರಪ್ತು ಮಾಡಲಾಗುತ್ತಿದೆ ಎಂಬುದು ಸುಳ್ಳು


ವಿಡಿಯೋ ನೋಡಿ: ಯುವಕನನ್ನು ಸಾರ್ವಜನಿಕವಾಗಿ ನೇಣುಹಾಕಿರುವ ಕುರಿತು ಇತ್ತೀಚಿನ ಯಾವುದೇ ವರದಿಗಳಿಲ್ಲ


ನಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *