ಲೋಕಸಭಾ ಚುನಾವಣೆಯ ಎರಡನೇ ಹಂತದ ಚುನಾವಣೆಗೆ ಇನ್ನು ಎರಡು ದಿನಗಳು ಬಾಕಿ ಇದೆ ಎನ್ನುವಾಗ, ಸಾರ್ವಜನಿಕವಾಗಿ ವ್ಯಕ್ತಿಯೊಬ್ಬನನ್ನು ನೇಣು ಹಾಕುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅನೇಕರು ತಮ್ಮ ಖಾತೆಯಲ್ಲಿ ಇದನ್ನು ಹಂಚಿಕೊಂಡು “ಕಲ್ಕತ್ತಾದಲ್ಲಿ, ತಾಲಿಬಾನಿ ಐಸಿಸ್ ಶೈಲಿಯಲ್ಲಿ ಬಹಿರಂಗವಾಗಿ ಹಿಂದೂ ಬಿಜೆಪಿ ಕಾರ್ಯಕರ್ತನನ್ನು ಗೊಂಡರು ನೇಣು ಹಾಕಿದ ಘಟನೆ ನಡೆದಿದೆ. ಮನೆಯಲ್ಲಿ ಕೂತಿರಿ, ಇಲ್ಲಿ ಸಹ ಅದೇ ಚಿತ್ರ ಪುನರಾವರ್ತನೆ ಆಗುತ್ತದೆ, ಜೂನ್ 4ರ ನಂತರ ನೋಡುತ್ತೀರಿ ಓಟಕ್ಕೆ ಮೈದಾನ ತಯಾರಾಗಿದ್ದನ್ನು, ಈಗಲಾದರೂ ಎಚ್ಚೆತ್ತು” ಎಂಬ ಸಂದೇಶದೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಎಕ್ಸ್ ನಲ್ಲಿ ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ.
ಫ್ಯಾಕ್ಟ್‌ಚೆಕ್: ಈ ಕುರಿತು ಹುಡುಕಿದಾಗ ಕಲ್ಕತ್ತಾದಲ್ಲಿ ಏ.27, 2024ರಂದು ದೀನಬಂಧು ಮಿದ್ಯಾ ಎಂಬ ಬಿಜೆಪಿ ಬೆಂಬಲಿಗನೊಬ್ಬನನ್ನು ನೇಣು ಹಾಕಿ ಹತ್ಯೆ ಮಾಡಲಾಗಿದೆ. ಆದರೆ ಆತನ ಕೊಲೆಗೂ ವೈರಲ್ ವಿಡಿಯೋವಿಗೂ ಯಾವುದೇ ಸಂಬಂಧವಿಲ್ಲ.
ಇದೇ ವಿಡಿಯೋವನ್ನು ರಾಜಸ್ತಾನದಲ್ಲಿ ದೇವರ ಮೂರ್ತಿಯನ್ನು ಅಪವಿತ್ರಗೊಳಿಸಿದ ಎಂದು ದಲಿತ ಬಾಲಕನನ್ನು ಮನುವಾದಿಗಳು ಹತ್ಯೆ ಮಾಡಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿದೆ.
ಆದರೆ ಇದಕ್ಕೆ ಪ್ರತಿಕ್ರಯಿಸಿರುವ ರಾಜಸ್ಥಾನ ಪೊಲೀಸರು ಈ ವಿಡಿಯೋ ಸಂಪೂರ್ಣ ನಕಲಿಯಾಗಿದ್ದು, ರಾಜಸ್ಥಾನದಲ್ಲಿ ಇಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇಂತಹ ಆಧಾರವಿಲ್ಲದ ವಿಡಿಯೋಗಳನ್ನು ಪೋಸ್ಟ್ ಮಾಡುವವರ ವಿರುದ್ಧ ತನಿಖೆ ನಡೆಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇಂಸ್ಟಾಗ್ರಾಮ್ ನಲ್ಲಿ ಇದೇ ವಿಡಿಯೋ ಹರಿದಾಡುತ್ತಿದೆ. ಅನೇಕರು ಈ ವಿಡಿಯೋ ನಕಲಿ. ಯಾರೋ ಉದ್ದೇಶಪೂರ್ವಕವಾಗಿ ಹೀಗೆ ವಿಡಿಯೋ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ. ಈ ಕುರಿತು ನಮ್ಮ ತಂಡ ಹುಡುಕಿದರೂ ಸಹ ಎಲ್ಲಿಯೂ ಇಂತಹ ಘಟನೆ ನಡೆದಿರುವುದು ವರದಿಯಾಗಿಲ್ಲ. ಆದ್ದರಿಂದ ಸಧ್ಯ ಈ ವೈರಲ್ ವಿಡಿಯೋ ಕಲ್ಕತ್ತಾದ ಬಿಜೆಪಿ ಕಾರ್ಯಕರ್ತನನ್ನು ಸಾರ್ವಜನಿಕವಾಗಿ ಹತ್ಯೆ ಮಾಡಿರುವ ವಿಡಿಯೋ ಎಂಬುದು ಸುಳ್ಳು.
ಇದನ್ನು ಓದಿ: ಅದಾನಿ ಬಂದರಿನಿಂದ ಗೋಮಾಂಸ ರಪ್ತು ಮಾಡಲಾಗುತ್ತಿದೆ ಎಂಬುದು ಸುಳ್ಳು
ವಿಡಿಯೋ ನೋಡಿ: ನೇಹಾ ಹಿರೇಮಠ್ ಮನೆಗೆ ಕಾಂಗ್ರೆಸ್‌ನ ಒಬ್ಬ ವ್ಯಕ್ತಿಯೂ ಭೇಟಿ ನೀಡಿಲ್ಲ ಎಂಬುದು ಸಂಪೂರ್ಣ ಸುಳ್ಳು
ನಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ