Fact Check: ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ 2000 ರೂ. ಮತ್ತು 5 ಗ್ಯಾರಂಟಿಗಳು ನಿಲ್ಲಲಿವೆ ಎಂಬುದು ಸುಳ್ಳು

ಗ್ಯಾರಂಟಿ

ಕೇವಲ ಎರಡು ದಿನಗಳ ಹಿಂದೆಯಷ್ಟೇ ಲೋಕಸಭಾ ಚುನಾವಣಾ ಫಲಿತಾಂಶಗಳು ಹೊರಬಿದ್ದಿವಿ. ಎನ್‌ಡಿಎ ಒಕ್ಕುಟವೂ ಸರ್ಕಾರ ರಚಿಸಲು ಇತರ ಮೈತ್ರಿ ಪಕ್ಷಗಳ ಜೊತೆಗೆ ಸಂಧಾನಕ್ಕೆ ಇಳಿದಿದೆ. ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್‌ ನಿರೀಕ್ಷಿಸಿದಂತೆ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಾಗಿಲ್ಲ, ಆದ್ದರಿಂದ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲು ಕಾಂಗ್ರೆಸ್‌ ಪಕ್ಷ ನಿರ್ಧರಿಸಿದೆ ಎಂದು ಪ್ರತಿಪಾದಿಸಿ ಅನೇಕರು ಗಾಳಿ ಸುದ್ದಿಗಳನ್ನು ಹರಿಬಿಡುತ್ತಿದ್ದಾರೆ. ಸಧ್ಯ ಈಗ ಜನಗಳ ಮಧ್ಯೆ ಈ ಚರ್ಚೆ ಬಹಳಷ್ಟು ನಡೆಯುತ್ತಿದೆ.

ಸರ್ಕಾರಿ ಯೋಜನೆ ಎಂಬ ಸುದ್ದಿ ಮಾಧ್ಯಮವೊಂದು “Gruhalakshmi Yojana Latest Update: ಗೃಹಲಕ್ಷ್ಮಿ 11ನೇ ಕಂತಿನ ಹಣ 2000 ರೂ. ಇನ್ನೂ ಮುಂದೆ ಬರಲ್ಲ ಮತ್ತು 5 ಗ್ಯಾರಂಟಿಗಳು ಬಂದ್” ಎಂಬ ಶೀರ್ಷಿಕೆ ಅಡಿಯಲ್ಲಿ ಸುದ್ದಿಯೊಂದನ್ನು ಪ್ರಕಟಿಸಿದೆ.  ಅನೇಕರು ಲೋಕಸಭಾ ಚುನಾವಣೆಯ ನಂತರ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಗಳು ಬಂದ್ ಆಗಲಿವೆ ಎಂಬ ಆತಂಕದಲ್ಲಿದ್ದಾರೆ. ಈ ಲೇಖನದಲ್ಲಿ ನಾವು ಈ ಮಾಹಿತಿ ನಿಜವೇ ಎಂದು ತಿಳಿಯೋಣ ಬನ್ನಿ.

ಫ್ಯಾಕ್ಟ್‌ಚೆಕ್: ಈ ಕುರಿತು ಹುಡುಕಿದಾಗ, ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳ್ಳಲಿದೆ ಎಂದು ಯಾವ ಕಾಂಗ್ರೆಸ್‌ ಮುಖಂಡರು ಸಹ ಹೇಳಿಕೆ ನೀಡಿಲ್ಲ. ಗ್ಯಾರಂಟಿ ಯೋಜನೆಯ ಬಂದ್ ಕುರಿತಂತೆ ಕಳೆದ ವರ್ಷವೇ ಹರಡುತ್ತಿದ್ದ ಸುಳ್ಳಿಗೆ ಪ್ರತಿಕ್ರಯಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳ ನಿಲ್ಲಿಸುವ ಪ್ರಮೇಯವೇ ಇಲ್ಲ ಇನ್ನೂ ನಾಲ್ಕು ವರ್ಷ(ಕಾಂಗ್ರೆಸ್‌ ಅಧಿಕಾರವಧಿ)ದ ವರೆಗೂ ಈ ಯೋಜನೆಗಳು ಮುಂದುವರೆಯಲಿವೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಸರ್ಕಾರಿ ಯೋಜನೆಯವರು ಸಹ ತಾವು ಪ್ರಕಟಿಸಿರುವ ಲೇಖನದಲ್ಲಿ ಗ್ಯಾರಂಟಿ ಯೋಜನೆಗಳನ್ನು ಬಂದ್ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗ್ಯಾರಂಟಿ ನೀಡಿದ್ದಾರೆ ಎಂದೇ ವರದಿ ಮಾಡಿದ್ದಾರೆ. ಆದರೆ ಅವರ ಲೇಖನದ ಶೀರ್ಷಿಕೆ ಗೊಂದಲ ಉಂಟುಮಾಡುವಂತಿದೆ ಮತ್ತು ತಪ್ಪು ಅರ್ಥವನ್ನು ನೀಡುವಂತಿದೆ. ಇದೇ ರೀತಿ ಇನ್ನೂ ಹಲವು ಯೂಟೂಬರ್ ಗಳು “ಗೃಹಲಕ್ಷ್ಮಿ 11ನೇ ಕಂತಿನ ಹಣ 2000 ರೂ. ಇನ್ನೂ ಮುಂದೆ ಬರಲ್ಲ ಮತ್ತು 5 ಗ್ಯಾರಂಟಿಗಳು ಬಂದ್” ಎಂಬ ಇದೇ ಶೀರ್ಷಿಕೆಯೊಂದಿಗೆ ವಿಡಿಯೋ ಹಂಚಿಕೊಂಡು(ಇಲ್ಲಿ ಮತ್ತು ಇಲ್ಲಿ) ವಿಡಿಯೋ ಕೊನೆಗೆ ಯಾವ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ ಎಂದು ಹೇಳಿದ್ದಾರೆ.

ಸರ್ಕಾರಿ ಯೋಜನೆ ಎಂಬ ಸುದ್ದಿ ಮಾಧ್ಯಮದವರು ಇಂದು ಇನ್ನೊಂದು ವರದಿಯನ್ನು ಪ್ರಕಟಿಸಿದ್ದು ಅದರಲ್ಲಿ “Gruhalakshmi Yojana Payment: ಗೃಹಲಕ್ಷ್ಮಿ 11ನೇ ಕಂತಿನ ಹಣ ನಾಳೆ ಈ ಜಿಲ್ಲೆಗಳಿಗೆ 2000 ಜಮಾ!! ಮೊಬೈಲ್ ನಲ್ಲಿ ಹೀಗೆ ಚೆಕ್ ಮಾಡಿ ಇಲ್ಲಿದೆ ಲಿಂಕ್?” ಎಂದು “ಸರ್ಕಾರವು ಮೊದಲನೆಯದಾಗಿ ಧಾರವಾಡ, ತುಮಕೂರು, ಯಾದಗಿರಿ, ಬಾಗಲಕೋಟೆ, ಬೆಂಗಳೂರು ನಗರ, ಹಾವೇರಿ, ಮಂಡ್ಯ, ಮೈಸೂರು, ಇಲ್ಲಿ ನೀಡಿರುವ ಜಿಲ್ಲೆಗಳಿಗೆ ಗೃಹಲಕ್ಷ್ಮಿ 11ನೇ ಕಂತಿನ ಹಣ ಮೊದಲು ಜಮಾ ಮಾಡುತ್ತದೆ ಎಂದು ಸರ್ಕಾರ ತಿಳಿಸಿದೆ.” ಎಂದು ವರದಿಯಲ್ಲಿ ತಿಳಿಸಿದ್ದಾರೆ.

ಗೃಹಲಕ್ಷಿ

ಆದ್ದರಿಂದ ಗ್ಯಾರಂಟಿ ಯೋಜನೆಗಳು ಮತ್ತು ಗೃಹಲಕ್ಷ್ಮಿ 11ನೇ ಕಂತಿನ ಹಣ ಬಂದ್ ಆಗಲಿವೆ ಎಂಬ ವದಂತಿ ಸುಳ್ಳು. ಈ ಕುರಿತು ಯಾವ ಕಾಂಗ್ರೆಸ್‌ ನಾಯಕರೂ ಅಧಿಕೃತವಾಗಿ ಹೇಳಿಕೆ ನೀಡಿಲ್ಲ.


ಇದನ್ನು ಓದಿ: ಸಾರವರ್ಧಿತ ಅಕ್ಕಿಯನ್ನು ಪ್ಲಾಸ್ಟಿಕ್‌ ಅಕ್ಕಿ ಎಂದು ಸುಳ್ಳು ಮಾಹಿತಿ ನೀಡಿದ ಟಿವಿ ವಿಕ್ರಮ


ವಿಡಿಯೋ ನೋಡಿ: ಸ್ನಾನ ಮಾಡುವಾಗ ಮೊದಲು ತಲೆಗೆ ನೀರು ಹಾಕಿಕೊಂಡರೆ ಸ್ಟ್ರೋಕ್ ಹೊಡೆಯುವ ಸಾಧ್ಯತೆಯಿದೆ ಎಂಬುದಕ್ಕೆ ಆಧಾರಗಳಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *