Fact Check | ಈ ಬಾರಿ ಸಂಸತ್‌ಗೆ 98 ಮುಸ್ಲಿಂ ಸಂಸದರು ಪ್ರವೇಶಿಸಿದ್ದಾರೆ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ “ಆತ್ಮ ತನ್ನ ಭವಿಷ್ಯದ ಬಗ್ಗೆ ಯೋಚಿಸುತ್ತಾ ನಡುಗುತ್ತದೆ..” ಎಂದು ಶೀರ್ಷಿಕೆಯನ್ನು ನೀಡಿ, ಆ ಶೀರ್ಷಿಕೆಯ ಕೆಳಗೆ 98 ಮುಸ್ಲಿಂ ಹೆಸರುಗಳನ್ನು ಬರೆದು, ಈ ಎಲ್ಲಾ ಮುಸ್ಲಿಂ ಹೆಸರುಗಳು ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ವಿಜಯ ಸಾಧಿಸಿದವರು ಎಂದು ಬಿಂಬಿಸಲಾಗಿದೆ. ಈ ಬರಹದ ಕೊನೆಯಲ್ಲಿ “ಈ ಸಂಪೂರ್ಣ ಪಟ್ಟಿಯನ್ನು ಓದಿದ ನಂತರ ನಿಮಗೆ ಭವಿಷ್ಯದ ಬಗ್ಗೆ ಚಿಂತೆ ಇಲ್ಲದಿದ್ದರೆ, ಬಹುಶಃ ನೀವೂ ಹಿಂದೂಗಳ ನಡುವೆ ಅಡಗಿರುವ ತೋಳ ಅಥವಾ ನಿಧಾನ ಹಿಂದೂ .. ಪಾರಿವಾಳ ಕಣ್ಣು ಮುಚ್ಚಿದರೆ ಬೆಕ್ಕು ಓಡಿಹೋಗುವುದಿಲ್ಲ.. ಹಿಂದೂಗಳೇ ಎದ್ದೇಳಿ, ಎದ್ದೇಳಿ..ರಾಷ್ಟ್ರ ಸೇವಾ ಫೌಂಡೇಶನ್‌ಗೆ ಸೇರಿ ಮತ್ತು ಸಂಪರ್ಕ ಸಾಧಿಸಿ” ಎಂದು ಬರೆಯಲಾಗಿದ್ದು. ಈ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಾಗುತ್ತಿದೆ.


ಈ ಸಂದೇಶದಲ್ಲಿ ಎಲ್ಲಾ ಹೆಸರುಗಳು ಮುಸ್ಲಿಂರದ್ದಾಗಿದ್ದು, ಇದರಲ್ಲಿದ್ದ ಹಲವು ಹೆಸರುಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದರ ಕುರಿತು ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ. ಹೀಗಾಗಿ ವೈರಲ್‌ ಸಂದೇಶ ಹಲವು ಅನುಮಾಗಳನ್ನು ಸಾರ್ವಜನಿಕ ವಲಯದಲ್ಲಿ ಹುಟ್ಟು ಹಾಕಿದೆ. ಹಾಗಾಗಿ ವ್ಯಾಪಕವಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ಈ ಸಂದೇಶದ ಸತ್ಯಾಸತ್ಯತೆ ಏನು ಎಂಬುದನ್ನು ಈ ಅಂಕಣದಲ್ಲಿ ಪರಿಶೀಲನೆ ನಡೆಸೋಣ.

ಫ್ಯಾಕ್ಟ್‌ಚೆಕ್‌

ವಾಟ್ಸ್‌ಆಪ್‌ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಈ ಸಂದೇಶದ ಕುರಿತು ಕನ್ನಡ ಪ್ಯಾಕ್ಟ್‌ಚೆಕ್‌ ತಂಡ ಪರಿಶೀಲನೆ ನಡೆಸಲು ಮುಂದಾಯಿತು ಇದಕ್ಕಾಗಿ ವೈರಲ್‌ ಸಂದೇಶದಿಂದ ಕೆಲವೊಂದು ಕೀ ವರ್ಡ್ಸ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲನೆ ನಡೆಸಿತು ಈ ವೇಳೆ ನಮಗೆ “Minority Report Card: Of 78 Muslims contesting Lok Sabha polls, 24 go past the winning line” ಎಂಬ ಶೀರ್ಷಿಕೆಯಡಿಯಲ್ಲಿ ದ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿಯೊಂದು ಕಂಡು ಬಂದಿದೆ.

ಆ ವರದಿಯಲ್ಲಿ 78 ಮಂದಿ ಮುಸ್ಲಿಂ ಅಭ್ಯರ್ಥಿಯಲ್ಲಿ 24 ಮುಸ್ಲಿಂ ಅಭ್ಯರ್ಥಿಗಳು ಸಂಸತ್‌ ಸದಸ್ಯರಾಗಿ ಆಯ್ಕೆಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಇದೇ ವರದಿಯಲ್ಲಿ ಲೋಕಸಭೆ ಪ್ರವೇಶಿಸಿದ ಮುಸ್ಲಿಂ ಸಂಸದರ ಸಂಖ್ಯೆಯಲ್ಲಿ ಇಳಿಕೆಯಾಗಿದೆ ಎಂಬುದನ್ನು ಉಲ್ಲೇಖಿಸಲಾಗಿದ್ದು 2019ರಲ್ಲಿ 26 ಮಂದಿ ಮುಸ್ಲಿಂ ಸಂಸದರು ಆಯ್ಕೆಯಾಗಿದ್ದರು, ಆದರೆ ಈ ಬಾರಿ ಕೇವಲ 24 ಮಂದಿ ಮುಸ್ಲಿಂ ಸಂಸದರು ಆಯ್ಕೆಯಾಗಿದ್ದಾರೆ ಎಂಬ ಮಾಹಿತಿಯನ್ನು ಕೂಡ ನೀಡಲಾಗಿದೆ. ಇನ್ನು ವೈರಲ್‌ ವಿಡಿಯೋದಲ್ಲಿ ಯೂಸುಫ್ ಪಠಾಣ್, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೆಸರುಗಳು ಇಲ್ಲದಿರುವುದನ್ನು ಕೂಡ ಗಮನಿಸಬಹುದಾಗಿದೆ. ಈ ಬಗ್ಗೆ ABP ನ್ಯೂಸ್‌ ಕೂಡ ವರದಿಯನ್ನು ಮಾಡಿದೆ.

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ 98 ಮುಸ್ಲಿಂ ಸಂಸದರು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸಂಸದರಾಗಿ ಆಯ್ಕೆಯಾಗಿದ್ದಾರೆ ಎಂಬುದು ಸುಳ್ಳಾಗಿದೆ. ಹಾಗೂ ಈ ಬಾರಿ ಸ್ಪರ್ಧಿಸಿರುವುದು ಕೇವಲ 78 ಮಂದಿ ಮುಸ್ಲಿಂ ಅಭ್ಯರ್ಥಿಗಳು ಮಾತ್ರ ಮತ್ತು ಇದರಲ್ಲಿ ಸಂಸದರಾಗಿ ಆಯ್ಕೆಯಾಗಿರುವವರು ಕೇವಲ 24 ಮುಸ್ಲಿಂ ಅಭ್ಯರ್ಥಿಗಳು. ಇನ್ನು ಈ ಸಂದೇಶದಲ್ಲಿ ಹಂಚಿಕೊಳ್ಳಲಾಗುತ್ತಿರುವ ಬಹುತೇಕ ಅಭ್ಯರ್ಥಿಗಳ ಹೆಸರು ನಕಲಿಯಾಗಿದೆ ಹಾಗಾಗಿ ವೈರಲ್‌ ಆಗುತ್ತಿರುವ ಸಂದೇಶ ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದೆ.


ಇದನ್ನೂ ಓದಿ : 3ನೇ ಅವಧಿಗೆ ಬಿಜೆಪಿಯಿಂದ ಸರ್ಕಾರ ರಚನೆ ಹಿನ್ನೆಲೆ ಉಚಿತ ರೀಚಾರ್ಜ್‌ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *