Fact Check: ರಾಹುಲ್ ಗಾಂಧಿ ಪ್ರಧಾನಿ ಮೋದಿ ಪ್ರಮಾಣ ವಚನ ಸ್ವೀಕರಿಸುತ್ತಿರುವುದನ್ನು ನೋಡುತ್ತಿದ್ದಾರೆ ಎಂದು ಎಡಿಟ್ ವೀಡಿಯೋ ಹಂಚಿಕೆ

ನೆನ್ನೆಯಷ್ಟೇ ನರೇಂದ್ರ ಮೋದಿಯವರು ಭಾರತದ ಪ್ರಧಾನ ಮಂತ್ರಿಗಳಾಗಿ ಮೂರನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ದೇಶದ ಹಲವು ಗಣ್ಯರು ಮತ್ತು ರಾಜಕೀಯ ಮುಖಂಡರುಗಳಿಗೆ ಆಹ್ವಾನ ನೀಡಲಾಗಿತ್ತು. ಅನೇಕರು ಭಾಗವಹಿಸಿ ಮೂರನೇ ಬಾರಿಗೆ ಪ್ರಧಾನಿಯಾಗುತ್ತಿರುವ ಮೋದಿಯವರಿಗೆ ಶುಭಾಷಯ ಕೋರಿದ್ದಾರೆ.

ಆದರೆ ಇಂದು, “ಪ್ರಧಾನಿ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವುದನ್ನು ವೀಕ್ಷಿಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ” ಎಂದು ವೀಡಿಯೋವೊಂದು ವೈರಲ್ ಆಗಿದ್ದು ಅದರಲ್ಲಿ ರಾಹುಲ್ ಗಾಂಧಿಯವರು ಮೋದಿಯವರ ಪ್ರಮಾಣವಚನದ ಕಾರ್ಯಕ್ರಮವನ್ನು ತಮ್ಮ ಮೊಬೈಲ್‌ನಲ್ಲಿ ವೀಕ್ಷಿಸುತ್ತಿದ್ದಾರೆ. ಈ ಚಿತ್ರ ನಿಜವಾದ ಚಿತ್ರವೇ ಎಂದು ಈ ಲೇಖನದ ಮೂಲಕ ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್: ವೈರಲ್ ವೀಡಿಯೋವನ್ನು ಸೂಕ್ಮವಾಗಿ ವಿಶ್ಲೇಷಿಸಿದಾಗ, ರಾಹುಲ್ ಗಾಂಧಿಯವರ ಮುಂದೆ ಪರದೆಯ(ಸ್ಕ್ರೀನ್) ಮೇಲೆ ಪ್ರದರ್ಶಿಸಲಾದ ಪ್ರಧಾನಿ ಮೋದಿ ಅವರ ದೃಶ್ಯಗಳು 2019 ರ ಪ್ರಮಾಣವಚನ ಸಮಾರಂಭದವು ಎಂದು ನಾವು ಗಮನಿಸಿದ್ದೇವೆ.

ರಾಹುಲ್ ಗಾಂಧಿಯವರ ವೈರಲ್ ವಿಡಿಯೋವನ್ನು ಗೂಗಲ್ ಲೆನ್ಸ್ ಮೂಲಕ ಹುಡುಕಾಟ ನಡೆಸಿದಾಗ 6 ಮೇ 2024 ರ ‘ರಿಪಬ್ಲಿಕ್ ದುನಿಯಾ’ದ ಯೂಟ್ಯೂಬ್ ವೀಡಿಯೊ ಒಂದು ನಮಗೆ ಲಭ್ಯವಾಗಿದ್ದು. ಅದರಲ್ಲಿ ವೈರಲ್ ಆಗಿರುವ ರಾಹುಲ್ ಅವರ ವೀಡಿಯೊ ಬಳಸಲಾಗಿದೆ , ಮೂಲ ವಿಡಿಯೋದಲ್ಲಿ ರಾಹುಲ್ ಗಾಂಧಿ ಅವರ ಮೊಬೈಲ್ ಪರದೆಯನ್ನು ಆಫ್ ಮಾಡಲಾಗಿದೆ.

ಇದಲ್ಲದೆ, ಮೂಲ ವೀಡಿಯೊವನ್ನು ಏಪ್ರಿಲ್ 17, 2024 ರಂದು ರಾಹುಲ್ ಗಾಂಧಿಯವರ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ, “ಭಾರತದ ಬಗ್ಗೆ ಯೋಚಿಸುವುದು, ಭಾರತವನ್ನು ಹುಡುಕುವುದು! (ಹಿಂದಿಯಿಂದ ಅನುವಾದಿಸಲಾಗಿದೆ)” ಅದನ್ನೇ ಅವರ ಫೇಸ್‌ಬುಕ್ ಖಾತೆಗೂ ಅಪ್‌ಲೋಡ್ ಮಾಡಲಾಗಿದೆ.

ವೈರಲ್ ವಿಡಿಯೋದಲ್ಲಿ “@ಅಮರಪ್ರಸಾದ್‌ರೆಡ್ಡಿ” ಎಂಬ ವಾಟರ್‌ಮಾರ್ಕ್ ಅನ್ನು ಸಹ ನಾವು ಗಮನಿಸಿದ್ದೇವೆ. ಈ ಸುಳಿವನ್ನು ತೆಗೆದುಕೊಂಡು, ನಾವು ಬಿಜೆಪಿಯ ಪದಾಧಿಕಾರಿ ಎಂದು ಗುರುತಿಸಿಕೊಂಡಿರುವ ಅಮರ್ ಪ್ರಸಾದ್ ರೆಡ್ಡಿ (@ಅಮರಪ್ರಸಾದ್‌ರೆಡ್ಡಿ) ಅವರ X ಖಾತೆಯ ಮೂಲಕ ಸ್ಕ್ಯಾನ್ ಮಾಡಿದಾಗ ಈ ವೀಡಿಯೊವನ್ನು ಜೂನ್ 9 ರಂದು ಮಧ್ಯಾಹ್ನ 1:39 ಕ್ಕೆ ಹಂಚಿಕೊಳ್ಳಲಾಗಿದೆ ಎಂದು ಕಂಡುಬಂದಿದೆ. “ಇಂದು ಸಂಜೆಯ ದೃಶ್ಯಗಳು,” ಎಂದು ಶೀರ್ಷಿಕೆ ನೀಡಲಾಗಿದೆ.

ಹಾಗಾಗಿ, ರಾಹುಲ್ ಗಾಂಧಿ ಪ್ರಧಾನಿ ಮೋದಿ ಪ್ರಮಾಣ ವಚನ ಸ್ವೀಕರಿಸುತ್ತಿರುವುದನ್ನು ತೋರಿಸುವ ವೈರಲ್ ದೃಶ್ಯಗಳನ್ನು ಡಿಜಿಟಲ್ ಎಡಿಟ್ ಮಾಡಲಾಗಿದೆ. ಲೋಕಸಭೆ ಚುನಾವಣೆಯ ಚುನಾವಣಾ ಫಲಿತಾಂಶಗಳ ಬಗ್ಗೆ ಕಾಂಗ್ರೆಸ್ ನಾಯಕರನ್ನು ಅಣಕಿಸುವ ವ್ಯಂಗ್ಯವಾಗಿ ಇದನ್ನು ಹಂಚಿಕೊಳ್ಳಲಾಗಿದೆ.


ಇದನ್ನು ಓದಿ: ಗೂಳಿಹಟ್ಟಿ ಶೇಖರ್‌ ತಮ್ಮ ಆರೋಪ ನಿರಾಧಾರ ಎಂದು ಒಪ್ಪಿಕೊಂಡಿದ್ದಾರೆ ಎಂಬುದು ಸುಳ್ಳು!


ವೀಡಿಯೋ ನೋಡಿ: ಬೆಂಗಳೂರಿನಲ್ಲಿ ಲಿಂಗಾಯತ ಕ್ಯಾಥೋಲಿಕ್ ಚರ್ಚ್ ಸ್ಥಾಪಿಸಲಾಗಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *