Fact Check | ಖ್ಯಾತ ಕ್ರಿಕೆಟಿಗ ಡೇವಿಡ್‌ ಮಿಲ್ಲರ್‌ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದಾರೆ ಎಂಬುದು ಸುಳ್ಳು

” ಇತ್ತೀಚೆಗೆ ಮುಕ್ತಾಯಗೊಂಡ ಐಸಿಸಿ ಟಿ-20 ಟ್ರೋಫಿಯಲ್ಲಿ ಭಾರತದ ವಿರುದ್ಧ ದಕ್ಷಿಣ ಆಫ್ರಿಕಾ ಸೋತ ನಂತರ ದಕ್ಷಿಣ ಆಫ್ರಿಕಾದ ಖ್ಯಾತ ಕ್ರಿಕೆಟಿಗ ಡೇವಿಡ್‌ ಮಿಲ್ಲರ್‌ ಅವರು ಸನಾತನ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ನಿಮಗೆ ನಂಬಿಕೆ ಇಲ್ಲದಿದ್ದರೆ ಈ ನ್ಯೂಸ್‌ ನೋಡಿ, ಇದು ಬಿಬಿಸಿಯ ಅಧಿಕೃತ ವರದಿಯಾಗಿದೆ. ಇದರಲ್ಲಿ ಡೇವಿಡ್‌ ಮಿಲ್ಲರ್‌ ಅವರು ಮತಾಂತರಗೊಂಡ ವರದಿಯನ್ನು ಪ್ರಕಟಗೊಳಿಸಲಾಗಿದೆ.” ಎಂದು ಬಿಬಿಸಿ ಬಂಗಾಳದ ವರದಿಯೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಈ ವರದಿಯನ್ನು ನೋಡಿದ ಹಲವು ಬಿಬಿಸಿಯೇ ಈ ವರದಿ ಮಾಡಿದ್ದಾಗ ಇದು ನಿಜವಿರಬಹುದು ಎಂದು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಇನ್ನು ಇ ವರದಿಯ ಚಿತ್ರದಲ್ಲೂ ಬಿಬಿಸಿಯ ಅಧಿಕೃತ ಲೋಗೋ ಇರುವುದನ್ನು ಕಾಣಬಹುದಾಗಿದ್ದು, ಇದರಲ್ಲಿ ಡೇವಿಡ್‌ ಮಿಲ್ಲರ್‌ ಅವರು ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದಾರೆ ಎಂದೇ ಉಲ್ಲೇಖಿಸಲಾಗಿದೆ. ಆದರೆ ಈ ಕುರಿತು ಬೇರೆ ಯಾವ ಮಾಧ್ಯಮಗಳ ವರದಿ ಕಂಡು ಬಾರದ ಕಾರಣ ಈ ವರದಿ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಹಾಗಾಗಿ ವೈರಲ್‌ ಸುದ್ದಿಯ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ಈ ಸುದ್ದಿಯ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ವೈರಲ್‌ ವಿಡಿಯೋದಲ್ಲಿ ಹಂಚಿಕೊಳ್ಳಲಾದ ಬಿಬಿಸಿ ವರದಿಯನ್ನು ಸೂಕ್ಷ್ಮವಾಗಿ ಪರಿಶೀಲನೆ ನಡೆಸಿದೆವು. ಈ ವೇಳೆ ಇದು ಬಿಬಿಸಿ ಬಂಗಾಳದ ವರದಿಯಂತೆ ಬಿಂಬಿಸಲಾಗಿರುವುದು ತಿಳಿದು ಬಂದಿದೆ. ಬಳಿಕ ನಾವು ಬಿಬಿಸಿ ಬಂಗಾಳ ವೆಬ್‌ಸೈಟ್‌ ಅನ್ನು ಪರಿಶೀಲನೆ ನಡೆಸಿದೆವು. ಆದರೆ ನಮಗೆ ಅಲ್ಲಿ ಡೇವಿಡ್‌ ಮಿಲ್ಲರ್‌ ಅವರು ಹಿಂದೂ ಧರ್ಮಕ್ಕೆ ಮತಾಂತರಗೊಂಡ ಕುರಿತು ಯಾವುದೇ ವರದಿಗಳು ಪತ್ತೆಯಾಗಿಲ್ಲ.

ಬಳಿಕ ಹೆಚ್ಚಿನ ಮಾಹಿತಿಗಾಗಿ ಕೆಲವೊಂದು ಕೀ ವರ್ಡ್ಸ್‌ಗಳನ್ನು ಬಲಸಿ ಅಂತರ್ಜಾಲದಲ್ಲಿ ಈ ಬಗೆಗಿನ ವರದಿಗಳಿಗಾಗಿ ಪರಿಶೀಲನೆ ನಡೆಸಿದೆವು. ಆದರೆ ಡೇವಿಡ್‌ ಮಿಲ್ಲರ್‌ ಅವರು ಹಿಂದೂ ಧರ್ಮಕ್ಕೆ ಮತಾಂತರಗೊಂಡ ಕುರಿತು ಯಾವುದೇ ವರದಿಗಳು ಪತ್ತೆಯಾಗಿಲ್ಲ. ಇಲ್ಲಿ ಡೇವಿಡ್‌ ಮಿಲ್ಲರ್‌ ಅವರು ಒಬ್ಬ ಅಂತರಾಷ್ಟ್ರೀಯ ಕ್ರಿಕೆಟ್‌ ಆಟಗಾರ. ಒಂದು ವೇಳೆ ಅವರು ಮತಾಂತರಗೊಂಡಿದ್ದು ನಿಜವೇ ಆದರೆ ಆ ಕುರಿತು ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ಸುದ್ದಿ ವಾಹಿನಿಗಳು ವರದಿ ಮಾಡಬೇಕಿತ್ತು. ಆದರೆ ಆ ರೀತಿಯ ಯಾವುದೇ ವರದಿಗಳು ಕಂಡು ಬಂದಿಲ್ಲ.

ಈ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಹುಡುಕಾಟವನ್ನು ನಡೆಸಿದಾಗ,  4 ಮೇ 2016ರಂದು ಪಿಎಲ್ ಸಮಯದಲ್ಲಿ ಡೇವಿಡ್ ಮಿಲ್ಲರ್ ಅವರನ್ನು ದಿ ಟೆಲಿಗ್ರಾಫ್‌ ಸುದ್ದಿಸಂಸ್ಥೆ ಸಂದರ್ಶನವನ್ನು ನಡೆಸಿತ್ತು. ಈ ವೇಳೆ ಅವರು ತಾನು ಕ್ರಿಶ್ಚಿಯನ್‌ ಮತವನ್ನು ಅನುಸರಿಸುತ್ತಿರುವುದಾಗಿ ಹೇಳಿಕೊಂಡಿರುವುದಾಗಿ ತಿಳಿದುಬಂದಿದೆ. ಇನ್ನು ಡೇವಿಡ್‌ ಮಿಲ್ಲರ್‌ ಅವರ ಸಾಮಾಜಿಕ ಜಾಲತಾಣದ ಖಾತೆಗಳನ್ನು ಕೂಡ ಪರಿಶೀಲನೆ ನಡೆಸದಾಗಲೂ  ಈ ಬಗ್ಗೆ ಯಾವುದೇ ರೀತಿಯ ಮಾಹಿತಿ ಲಭ್ಯವಾಗಿಲ್ಲ. ಒಂದು ವೇಳೆ ಅವರು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದರೆ, ಆ ಕುರಿತು ಅವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಕೂಡ ಹಂಚಿಕೊಳ್ಳುತ್ತಿದ್ದರು.

ಒಟ್ಟಾರೆಯಾಗಿ ಹೇಳುವುದಾದರೆ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಡೇವಿಡ್‌ ಮಿಲ್ಲರ್‌ ಅವರು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂಬುದು ಸುಳ್ಳಾಗಿದೆ. ಹಾಗೂ ಈ ಕುರಿತು ಕಂಡು ಬಂದ ಬಿಬಿಸಿ ಬಂಗಾಳ ಸುದ್ದಿ ಸಂಸ್ಥೆಯ ಪೋಸ್ಟರ್‌ ಎಡಿಟೆಡ್‌ ಆಗಿರುವುದು ಖಚಿತವಾಗಿದೆ. ಹಾಗಾಗಿ ಇಂತಹ ಸುದ್ದಿಗಳನ್ನು ನಂಬುವ ಮುನ್ನ ಹಾಗೂ ಶೇರ್‌ ಮಾಡುವ ಮುನ್ನ ಎಚ್ಚರಿಕೆ.


ಇದನ್ನೂ ಓದಿ : Fact Check | ಪ್ರಾಂಶುಪಾಲೆಯರ ಜಗಳದ ವಿಡಿಯೋವನ್ನು ಸುಳ್ಳು ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *