ಬಿಜೆಪಿ ಸರ್ಕಾರದ ವಿರುದ್ಧ ಮಾತನಾಡಿದರೆ ಅವರು ಎಂತಹ ಹಿಂದೂವೇ ಆಗಲಿ ಅಥವಾ ಹಿಂದುತ್ವವಾದಿಯೇ ಆಗಲಿ ಅವರನ್ನು ಬಿಜೆಪಿ ಹಿಂದೂ ವಿರೋಧಿಯನ್ನಾಗಿ ಮಾಡಿಬಿಡುತ್ತದೆ. ಈಗ ಈ ಸರದಿ ಸ್ವಾಮಿ ಅವಿಮುಕೇಶ್ವರಾನಂದ ಅವರದ್ದಾಗಿದೆ. ಬಿಜೆಪಿಯ ವಿರುದ್ಧ ಮಾತನಾಡಿದರು ಎಂಬ ಕಾರಣಕ್ಕೆ ಅವರ ಮೇಲೆ ಪ್ರಯಾಗ್ರಾಜ್ನ ಮಹಾಕುಂಭಮೇಳದಲ್ಲಿ ಪೊಲೀಸರಿಂದ ಲಾಠಿಚಾರ್ಜ್ ಮಾಡಿಸಲಾಗಿದೆ ಎಂದು ವಿಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ.
शंकराचार्य पर बर्बर लाठीचार्ज।
हिन्दुओं की आस्था पर करारी चोटहिन्दू-मुस्लिम गाली-गलौज करने वाले बेशर्म सनातन विरोधी सराकार का हिन्दू विरोधी विकराल चेहरा बेनकाब हो रहा है।
कहां है प्रपंची RSS?
कहां है बजरंग दल?
कहां है सडे गले बदबूदार कपडो से पहचान करने वाले किडे!@RahulGandhi pic.twitter.com/c8WVUWfV9x— Rakesh Bhardwaj (@RakeshB27403698) February 11, 2025
ವಿಡಿಯೋದಲ್ಲಿ ಸ್ವಾಮಿ ಅವಿಮುಕ್ತೇಶ್ವರಾನಂದ ಅವರು ಪೊಲೀಸರು ಮತ್ತು ಸಾರ್ವಜನಿಕರೊಂದಿಗೆ ವಾಗ್ವಾದ ನಡೆಸುತ್ತಿರುವುದು ಕಂಡುಬಂದಿದ್ದು, ಅದರಲ್ಲಿ ಪೊಲೀಸರು ಅವಿಮುಕೇಶ್ವರನಂದ ಅವರನ್ನು ತಳ್ಳುತ್ತಿರುವುದು ಮತ್ತು ಲಾಠಿಯಿಂದ ಹಲ್ಲೆ ಮಾಡಲು ಮುಂದಾಗುವುದು ಕಂಡುಬರುತ್ತದೆ. ಬಳಿಕ ಅವಿಮುಕ್ತೇಶ್ವರನಂದ ಅವರೇ ʼನನಗೆ ಹೊಡೆಯುವುದಾದರೆ ಹೊಡೆಯಿರಿʼ ಎಂದು ಹೇಳುತ್ತಾರೆ. ಈ ವಿಡಿಯೋ ನೋಡಿದ ಹಲವು ಮಂದಿ ಇದು ಇತ್ತೀಚೆಗೆ ಪ್ರಯಾಗ್ರಾಜ್ನಲ್ಲಿ ನಡೆದಿರುವುದು ನಿಜವೆಂದು ಭಾವಿಸಿ, ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವೈರಲ್ ಆಗುತ್ತಿರುವ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ
https://twitter.com/singhritesh641/status/1889125773128376571
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್ಗಳನ್ನು ಬಳಸಿಕೊಂಡು ಅವಿಮುಕ್ತೇಶ್ವೆರನಂದರ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡಿರುವ ಕುರಿತು ಯಾವುದಾದರೂ ವರದಿಗಳು ಇವೆಯೇ ಎಂದು ಹುಡುಕಾಟವನ್ನು ನಡೆಸಿದೆವು. ನಮಗೆ ಇತ್ತೀಚೆಗಿನ ಯಾವುದೇ ವರದಿಗಳು ಕಂಡು ಬಂದಿಲ್ಲ. ಆದರೆ 2015ರಲ್ಲಿ ಪ್ರಕಟಗೊಂಡ ಕೆಲವೊಂದು ವರದಿಗಳು ಕಂಡು ಬಂದವು.

ಈ ವರದಿಗಳನ್ನು ಪರಿಶೀಲನೆ ನಡೆಸಿದಾಗ 2015ರ ಸೆಪ್ಟೆಂಬರ್ನಲ್ಲಿ ಗಂಗಾ ಮತ್ತು ಯಮುನಾ ನದಿಗಳಲ್ಲಿ ಗಣೇಶ ವಿಸರ್ಜನೆಯನ್ನು ನಿಷೇಧಿಸುವ ಅಲಹಾಬಾದ್ ಹೈಕೋರ್ಟ್ ತೀರ್ಪಿನ ನಂತರ, ಗಂಗಾ ನದಿಯಲ್ಲಿ ಗಣೇಶ ವಿಗ್ರಹವನ್ನು ನಿಷೇಧಿಸುವ ಆಡಳಿತದ ನಿರ್ಧಾರವನ್ನು ವಿರೋಧಿಸಿ ಸ್ವಾಮಿ ಅವಿಮುಕ್ತೇಶ್ವರಾನಂದರು ಹಲವಾರು ಸಂತರು ಮತ್ತು ಸ್ಥಳೀಯರೊಂದಿಗೆ ಪ್ರತಿಭಟಿಸುತ್ತಿದ್ದರು. ಈ ವೇಳೆ ಘರ್ಷಣೆ, ನೂಕು ನುಗ್ಗಲು ಉಂಟಾದ ಕಾರಣ ಮತ್ತು ಅಹಿತಕರ ಘಟನೆಯನ್ನು ತಪ್ಪಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ ಎಂದು ಉಲ್ಲೇಖಿಸಿರುವುದು ಕಂಡು ಬಂದಿದೆ.

ಈ ಲಾಠಿ ಚಾರ್ಜ್ ಸಮಯದಲ್ಲಿ, ಸ್ವಾಮಿ ಅವಿಮುಕ್ತೇಶ್ವರಾನಂದ್ ಮತ್ತು ಇತರ 30 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಹೆಚ್ಚಿನ ಹುಡುಕಾಟಗಳು ಈ ಘಟನೆಯನ್ನು ದಾಖಲಿಸುವ 2015 ರ ಹಲವು ವೀಡಿಯೊ ವರದಿಗಳು ನಮಗೆ ಕಂಡು ಬಂದಿವೆ. ಈ ಎಲ್ಲಾ ವರದಿಗಳನ್ನು ಗಮನಿಸಿದಾಗ ವೈರಲ್ ವಿಡಿಯೋ 2015ರದ್ದಾಗಿದೆ ಎಂಬುದು ನಮಗೆ ಸ್ಪಷ್ಟವಾಗಿದೆ. ಹಾಗೆಯೇ ಇತ್ತೀಚೆಗೆ ಅವಿಮುಕ್ತೇಶ್ವರಾನಂದ ಅವರ ಮೇಲೆ ಯಾವುದೇ ಲಾಠಿಚಾರ್ಜ್ ಆಗಿಲ್ಲ ಎಂಬುದು ಕೂಡ ಖಚಿತವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿಯಲ್ಲಿ ಸ್ವಾಮಿ ಅವಿಮುಕ್ತೇಶ್ವರಾನಂದ ಅವರ ಮೇಲೆ ಮಹಾ ಕುಂಭಮೇಳದಲ್ಲಿ ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ ಎಂಬುದು ಸುಳ್ಳಾಗಿದೆ. ವೈರಲ್ ವಿಡಿಯೋ 2015ರದ್ದಾಗಿದೆ. ಹಾಗಾಗಿ ಈ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಪ್ರಧಾನಿ ನರೇಂದ್ರ ಮೋದಿ ಸಾಯಿಬಾಬಾ ಚಿತ್ರ ಹಿಡಿದಿರುವ ಫೋಟೋ ಎಡಿಟೆಡ್ ಆಗಿದೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

