ಗುರುಕುಲ ಶಿಕ್ಷಕ ವಿದ್ಯಾರ್ಥಿಯನ್ನು ನೆಲಕ್ಕೆ ಬಡಿದು ಥಳಿಸುವ ಅಮಾನವೀಯ ಘಟನೆಯ ವಿಡಿಯೋ ಉತ್ತರ ಪ್ರದೇಶದ್ದು

RSS ಟ್ರೈನಿಂಗ್ ಕ್ಯಾಂಪ್‌ನಲ್ಲಿ ಮಕ್ಕಳಿಗೆ ಚಿತ್ರ ಹಿಂಸೆ ನೀಡುತ್ತಿರುವ ಭಯಾನಕ ದೃಶ್ಯ ಬಹಿರಂಗ, RSS ಉಗ್ರಗಾಮಿಗಳ ಸ್ಪೋಟಕ ಸುದ್ದಿ ಎಂಬ ವಿದ್ಯಾರ್ಥಿಯನ್ನು ಹಿಂಸಿಸುವ ಅಮಾನವೀಯ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ ಕುರಿತು ಫ್ಯಾಕ್ಟ್ ಚೆಕ್ ನಡೆಸುವಂತೆ ಹಲವು ಮನವಿಗಳು ಬಂದಿದ್ದವು. ಈ ಕುರಿತು ಪರಿಶೀಲಿಸಿದಾಗ ಇದು ಉತ್ತರ ಪ್ರದೇಶದ ಸೀತಾಪುರದಲ್ಲಿರುವ ಗುರುಕುಲದಲ್ಲಿ ನಡೆದ ಘಟನೆ ಎಂದು ತಿಳಿದು ಬಂದಿದೆ. 2.12 ನಿಮಿಷದ ಈ ವಿಡಿಯೋದಲ್ಲಿ ಶಿಕ್ಷಕ ಸತೀಶ್ ಕುಮಾರ್ ಜೋಶಿ ಎಂಬಾತ ದೀಪಕ್ ಎಂಬ ವಿದ್ಯಾರ್ಥಿಗೆ ಮನಸೋ ಇಚ್ಚೇ ಥಳಿಸಿರುವುದು ದಾಖಲಾಗಿದೆ. ವಿಡಿಯೋ ವೈರಲ್ ಆದ ನಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಉತ್ತರ ಪ್ರದೇಶದ ಸೀತಾಪುರದ ಸಿಧೌಲಿಯಲ್ಲಿರುವ ಗುರುಕುಲ ಎಂಬ ಸಂಸ್ಕೃತ ಪಾಠಶಾಲೆಯೊಂದರ ಶಿಕ್ಷಕ ಸತೀಶ್ ಕುಮಾರ್ ಜೋಶಿ ದೀಪಕ್ ಎಂಬ ವಿದ್ಯಾರ್ಥಿಗೆ ಥಳಿಸಿದ್ದಾರೆ. ಉಳಿದ ವಿದ್ಯಾರ್ಥಿಗಳಿಗೂ ಬೆದರಿಸಿದ ಕಾರಣ ಅವರು ತಡೆಯಲು ಧೈರ್ಯ ತೋರಿಸಿಲ್ಲ. ಆನಂತರ ವಿದ್ಯಾರ್ಥಿಯೊಬ್ಬ ವಿಡಿಯೋ ಮಾಡಿದ್ದರಿಂದ ಅದು ಎಲ್ಲೆಡೆ ಹರಿದಾಡಿದೆ. ಅದರ ಆಧಾರಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಲೈವ್ ಹಿಂದೂಸ್ತಾನ್ ಮತ್ತು ಆಜತಕ್ ಹಿಂದಿ ಮಾಧ್ಯಮಗಳು ವರದಿ ಮಾಡಿವೆ.

ಈ ಘಟನೆಯು ಸಿತಾಪುರದ ಸಿಧೌಲಿಯಲ್ಲಿರುವ ಗುರುಕುಲದಲ್ಲಿ (ಸಂಸ್ಕೃತ ಶಾಲೆ) ನಡೆದಿದೆ. ಇಲ್ಲಿ ಪಾಠ ಮಾಡುತ್ತಿದ್ದ ಆಚಾರ್ಯ ಸತೀಶ್ ಕ್ಷುಲ್ಲಕ ವಿಚಾರಕ್ಕೆ ವಿದ್ಯಾರ್ಥಿ ದೀಪಕ್ ಗೆ ಬರ್ಬರವಾಗಿ ಥಳಿಸಿದ್ದಾರೆ. ಈ ವಿಡಿಯೋ ನೋಡಿದ ಜನರು ಪೊಲೀಸರಿಗೆ ತಲುಪಿಸಿದ್ದಾರೆ ಎಂದು ವರದಿ ಮಾಡಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ನೋಡಿದ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಈ ವಿಡಿಯೋ ಸುಮಾರು 3 ತಿಂಗಳ ಹಳೆಯದು ಎನ್ನಲಾಗಿದೆ. ಈ ಬಗ್ಗೆ ತನಿಖೆ ಆರಂಭಿಸಲಾಗಿದೆ, ಆನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಸಿಧೌಲಿ ಪೊಲೀಸ್ ಠಾಣಾ ಮುಖ್ಯಸ್ಥ ರಾಕೇಶ್ ಕುಮಾರ್ ತಿಳಿಸಿದ್ದಾರೆ.

ಗುರುಕುಲ ಹೆಸರಿನಲ್ಲಿ ಈ ರೀತಿಯ ದೌರ್ಜನ್ಯ ಎಸಗುವುದನ್ನು ತಡೆಯಬೇಕು ಎಂದು ಹಲವರು ಒತ್ತಾಯಿಸಿದ್ದಾರೆ.


ಇದನ್ನೂ ಓದಿ; ಅಮರ್ತ್ಯ ಸೆನ್ ನಿಧನದ ಸುದ್ದಿ ಫೇಕ್ ಎಂದ ಮಗಳು ನಂದನ ದೇವ್ ಸೆನ್


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *