ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ಹೆಚ್ಚಾಗುತ್ತಿದ್ದಂತೆ ಸುಳ್ಳು ಸುದ್ದಿಗಳು ಕೂಡ ಹೆಚ್ಚು ಹೆಚ್ಚು ಹರಡಲು ಆರಂಭವಾಗುತ್ತಿದೆ. ಅದರಲ್ಲೂ ಪ್ರಮುಖವಾಗಿ ಮುಸ್ಲಿಂ ದೇಶಗಳಲ್ಲಿ ಇಸ್ರೇಲ್‌ಗೆ ಸಂಬಂಧಿಸಿದ ವಿಚಾರಗಳಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ ಮತ್ತು ಮುಸ್ಲಿಂ ದೇಶಗಳಲ್ಲಿ ಇಸ್ರೇಲ್‌ಗೆ ಸಂಬಂಧ ಪಟ್ಟವರು ಜೀವ ಭಯದಿಂದ ಬದುಕುವಂತಾಗಿದೆ ಎಂಬ ರೀತಿಯ ಸುಳ್ಳು ಸುದ್ದಿಗಳು ವ್ಯಾಪಕವಾಗಿ ಹರಿದಾಡುತ್ತಿದೆ.
ಇದಕ್ಕೆ ಪೂರಕ ಎಂಬಂತೆ ಟರ್ಕಿಯಲ್ಲಿನ ಒಂದು ಘಟನೆಯನ್ನ ಇದೀಗೆ ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧಕ್ಕೆ ಥಳಕು ಹಾಕುವ ಮೂಲಕ ಟರ್ಕಿಯಲ್ಲೂ ಕೂಡ ಇಸ್ರೇಲ್‌ನ ಅಧಿಕಾರಿಗಳು ಜೀವ ಭಯದಿಂದ ಬದುಕುವಂತಾಗಿದೆ ಎಂಬ ರೀತಿಯಲ್ಲಿ ಸುಳ್ಳನ್ನ ಹರಡಲಾಗುತ್ತಿದೆ. ಆ ಸುಳ್ಳಿನಲ್ಲಿ ಪ್ರಮುಖವಾಗಿ ಟರ್ಕಿಯ ಜನರೇ ಇಸ್ರೇಲ್ ವಿರುದ್ಧ ತಿರುಗಿ ಬಿದ್ದಿದ್ದಾರೆ ಎಂಬ ರೀತಿಯಲ್ಲಿ ಸುಳ್ಳನ್ನು ಹರಡಲಾಗುತ್ತಿದೆ.
“ಟರ್ಕಿಯ ಇಸ್ತಾನ್‌ಬುಲ್‌ನಲ್ಲಿ ಜನರು ಬೃಹತ್ ಪ್ರತಿಭಟನೆ ನಡೆಸಿ ಇಸ್ರೇಲ್‌ನ ಕಾನ್ಸೂಲೇಟ್ ಕಚೇರಿಯ ಮೇಲೆ ಪಟಾಕಿ ರೀತಿಯ ಸಿಡಿಮದ್ದಿನೊಂದಿಗೆ ದಾಳಿ ನಡೆಸಲು ಪ್ರಯತ್ನಿಸಿದ್ದಾರೆ” ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ವಿಡಿಯೋವೊಂದರ ಸತ್ಯಾಸತ್ಯತೆಯನ್ನ ತಿಳಿಯದೆ ಸಾಕಷ್ಟು ಮಂದಿ ವ್ಯಾಪಕವಾಗಿ ಶೇರ್ ಮಾಡುತ್ತಿದ್ದಾರೆ.
ಆದರೆ ಆ ವಿಡಿಯೋ ಕುರಿತು ಫ್ಯಾಕ್ಟ್‌ಚೆಕ್ ನಡೆಸಿದಾಗ ಇದೇ ವಿಡಿಯೋ 30 ಮೇ 2023 ರಂದು ಆಸ್ಟ್ರೇಲಿಯಾದ ಸ್ಕೈ ನ್ಯೂಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. “ಟರ್ಕಿ ಚುನಾವಣೆ ವಿಜಯೋತ್ಸವದಲ್ಲಿ ಜನರು ಪಟಾಕಿ ಸಿಡಿಸುತ್ತಿದ್ದಾರೆ” ಎಂದು ತಲೆ ಬರಹ ನೀಡಿ ವಿಡಿಯೋ ಅಪ್‌ಲೋಡ್ ಮಾಡಲಾಗಿದೆ.
ಹಾಗಾಗಿ ಈ ವಿಡಿಯೋ ಹಳೆಯದಾಗಿದೆ ಎಂದು ತಿಳಿದು ಬಂದಿದೆ. ಮತ್ತು ಇದೇ ವರ್ಷ ಟರ್ಕಿ ಚುನಾವಣೆಯಲ್ಲಿ ಅಲ್ಲಿನ ಅಧ್ಯಕ್ಷರಾಗಿ ತೈಪ್ ಎರ್ಡೋಗನ್ ಅಧ್ಯಯಕ್ಷರಾಗಿ ಮರು ಆಯ್ಕೆಯಾದ ಹಿನ್ನೆಲೆ ಅಲ್ಲಿನ ಜನ ಸಂಭ್ರಮಿಸುತ್ತಿರುವ ವಿಡಿಯೋವಾಗಿದೆ ಎಂದು ತಿಳಿದು ಬಂದಿದೆ. ಹಾಗಾಗಿ ಟರ್ಕಿಯ ಇಸ್ರೇಲ್ ಕಾನ್ಸೂಲೇಟ್ ಕಚೇರಿಯ ಮೇಲೆ ಟರ್ಕಿ ಜನರು ದಾಳಿ ನಡೆಸಲು ಮುಂದಾಗಿದ್ದರು ಎಂಬುದು ಸುಳ್ಳು ಆಪಾದನೆಯಾಗಿದೆ.
ಈ ಸುದ್ದಿಯನ್ನೂ ಓದಿ : ಪಾಕಿಸ್ತಾನದ ಹಿಂದೂ ಸಂಸದರೊಬ್ಬರು ಸಂಸತ್ತಿನಲ್ಲಿ ಕ್ಷಮೆ ಕೇಳಿದ್ದಾರೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.