ಪಾಕಿಸ್ತಾನದ ಹಿಂದೂ ಸಂಸದರೊಬ್ಬರು ಸಂಸತ್ತಿನಲ್ಲಿ ಕ್ಷಮೆ ಕೇಳಿದ್ದಾರೆ ಎಂಬುದು ಸುಳ್ಳು

Hindu

ಪಾಕಿಸ್ತಾನದ ಹಿಂದೂ ಸಂಸದರೊಬ್ಬರು ಪಾಕಿಸ್ತಾನ ಸಂಸತ್ತಿನಲ್ಲಿ ಕೈಮುಗಿದು ಕ್ಷಮಾದಾನಕ್ಕಾಗಿ ಭಿಕ್ಷೆ ಬೇಡುತ್ತಿದ್ದಾರೆ, ದಯವಿಟ್ಟು ನಮ್ಮ ಮೇಲೆ ಕರುಣೆ ತೋರಿ ಮತ್ತು ನಮ್ಮ ಹೆಣ್ಣುಮಕ್ಕಳನ್ನು ಬಿಡಿ.. ಈ ವೀಡಿಯೊವನ್ನು ಭಾರತದ ಜಾತ್ಯತೀತ ಜನರಿಗೆ ಅರ್ಪಿಸಲಾಗಿದೆ ಎಂಬ ತಲೆಬರಹದ ವಿಡಿಯೋ ಒಂದು ಎಲ್ಲೆಡೆ ವೈರಲ್ ಆಗುತ್ತಿದೆ.

ಫ್ಯಾಕ್ಟ್‌ಚೆಕ್: ಇದು ಪಂಜಾಬ್ ಪ್ರಾಂತೀಯ ಅಸೆಂಬ್ಲಿಯಿಂದ ಆಯ್ಕೆಯಾಗಿರುವ ಕ್ರಿಶ್ಚಿಯನ್ ಎಂಪಿಎ ತಾರಿಕ್ ಮಶಿಲ್ ಗಿಲ್‌ರವರು 20 ಆಗಸ್ಟ್ 2022ರಲ್ಲಿ ನ್ಯಾಷನಲ್ ಅಸೆಂಬ್ಲಿ ಆಫ್ ಪಾಕಿಸ್ತಾನ್‌ ಸಂಸತ್ತಿನಲ್ಲಿ ಮಾಡಿದ ಮನವಿಯಾಗಿದೆ. ಗಿಲ್‌ರವರು ಪಾಕಿಸ್ತಾನ ಸರ್ಕಾರದ ಸಹಾಯ ಮತ್ತು ಬೆಂಬಲದೊಂದಿಗೆ ನಡೆದ 12 ವರ್ಷದ ಕ್ರಿಶ್ಚಿಯನ್ ಬಾಲಕಿಯ ಅಪಹರಣ ಮತ್ತು ಬಲವಂತದ ಮತಾಂತರದ ಬಗ್ಗೆ ಮಾತನಾಡಿ, ಅಲ್ಪಸಂಖ್ಯಾತರ ಮೇಲೆ ಕರುಣೆ ತೋರುವಂತೆ ಬೇಡಿಕೊಂಡಿದ್ದಾರೆ.

ಪಂಜಾಬ್ ಪ್ರಾಂತೀಯ ಅಸೆಂಬ್ಲಿಯ ಅಧಿಕೃತ ವೆಬ್ಸೈಟ್ ಪ್ರಕಾರ, ಕ್ರಿಶ್ಚಿಯನ್ ತಾರಿಕ್ ಮಾಸಿಹ್ ಗಿಲ್ 2018 ರಲ್ಲಿ ಸತತ ಎರಡನೇ ಬಾರಿಗೆ ಪಂಜಾಬ್ ಪ್ರಾಂತೀಯ ಅಸೆಂಬ್ಲಿಯ ಸದಸ್ಯರಾಗಿ ಮರು ಆಯ್ಕೆಯಾದರು. ತಾರಿಕ್ ಮಶಿಲ್ ಗಿಲ್‌ ರವರು ಪಾಕಿಸ್ತಾನದ ಸಂಸತ್ತಿನಲ್ಲಿ ಮಾತನಾಡಿರುವ ಮೂಲ ವಿಡಿಯೋ ಯೂಟೂಬ್ ನಲ್ಲಿ ಲಭ್ಯವಿದ್ದು NY ನ್ಯೂಸ್‌ ನವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಆದ್ದರಿಂದ ವಿಡಿಯೋದಲ್ಲಿರುವವರು ಹಿಂದು ಸಂಸದ ಎಂಬ ಪ್ರತಿಪಾದನೆ ಸುಳ್ಳು.

ಪಂಜಾಬ್ ಪ್ರಾಂತ್ಯದ ರಾವಲ್ಪಿಂಡಿಯಲ್ಲಿ ನಡೆದ 13 ವರ್ಷದ ಕ್ರಿಶ್ಚಿಯನ್ ಬಾಲಕಿ ಝರಿಯಾ ಪರ್ವೇಜ್ ಅಪಹರಣ ಮತ್ತು ಬಲವಂತದ ಮತಾಂತರ ಪ್ರಕರಣದ ವಿರುದ್ಧ ಈ ನಿರ್ದಿಷ್ಟ ಶಾಸಕ ಗಿಲ್ ಧ್ವನಿ ಎತ್ತುತ್ತಿದ್ದಾರೆ ಎಂದು ಪಾಕಿಸ್ತಾನ ಮೂಲದ ಮಾಧ್ಯಮ ಸಂಸ್ಥೆ ಜರ್ನಲಿಸಂ ಫಾರ್ ಹ್ಯೂಮನ್ ರೈಟ್ಸ್‌ ಸೆಪ್ಟೆಂಬರ್ 23, 2022 ರ ವರದಿಯನ್ನು ಮಾಡಿದೆ. ಆಗಸ್ಟ್ 17, ಆಗಸ್ಟ್ 18 ಮತ್ತು ಆಗಸ್ಟ್ 21 ರ ಅನೇಕ ಮಾಧ್ಯಮ ವರದಿಗಳ ಮೂಲಕ ಈ ಪ್ರಕರಣವನ್ನು ದೃಢಪಡಿಸಲಾಗಿದೆ. ಸುದ್ದಿ ವರದಿಗಳು ಮತ್ತು ಅಧಿಕೃತ ಪ್ರೊಫೈಲ್‌ನಿಂದ, ವೈರಲ್ ವೀಡಿಯೊದಲ್ಲಿ ಅದು ತಾರಿಕ್ ಮಸಿಹ್ ಗಿಲ್ ಎಂದು ನಾವು ದೃಢಪಡಿಸಿಕೊಳ್ಳಬಹುದು.


ಇದನ್ನು ಓದಿ: ನಟ ಕಾರ್ತಿಕ್ ಆರ್ಯನ್ ಮಧ್ಯಪ್ರದೇಶದ ಕಾಂಗ್ರೆಸ್ ನಾಯಕ ಕಮಲ್ ನಾಥ್‌ರವರ ಪರ ಪ್ರಚಾರ ನಡೆಸಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *