ರಾಹುಲ್ ಗಾಂಧಿ ಕಪ್ಪು ಬಟ್ಟೆ ಧರಿಸಿ ಪ್ರತಿಭಟಿಸಿದ್ದು ಬೆಲೆ ಏರಿಕೆ ವಿರುದ್ಧವೇ ಹೊರತು ರಾಮಮಂದಿರದ ವಿರುದ್ಧವಲ್ಲ

ರಾಹುಲ್ ಗಾಂಧಿ

ರಾಮಮಂದಿರದ ಅಡಿಗಲ್ಲು ಇಟ್ಟಾಗ ಅದನ್ನು ವಿರೋಧಿಸಲು ಕೆಲವೊಂದಿಷ್ಟು ಸಂಸದರು ಕಪ್ಪು ಬಟ್ಟೆ ಹಾಕಿ ಸಂಸತ್ತಿಗೆ ಹೋಗಿದ್ದರು. ಯೋಚನೆ ಮಾಡಿ ಇವರಿಗೆ ಹಿಂದೂಗಳು ಬೇಡ ಅವರ ಓಟು ಮಾತ್ರ ಬೇಕು ಎಂಬ ಪ್ರತಿಪಾದನೆಯೊಂದಿಗೆ ರಾಹುಲ್ ಗಾಂಧಿ ಮತ್ತು ಇತರ ಕಾಂಗ್ರೆಸ್ ಸಂಸದರು ಕಪ್ಪು ಬಟ್ಟೆ ಧರಿಸಿ ಪ್ರತಿಭಟಿಸುತ್ತಿರುವ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಫ್ಯಾಕ್ಟ್ ಚೆಕ್

ಈ ಕುರಿತು ಹುಡುಕಿದಾಗ ಆಗಸ್ಟ್ 05, 2022ರಂದು ಅಗತ್ಯ ವಸ್ತುಗಳ ಬೆಲೆ ಏರಿಕೆ, ಜಿಎಸ್‌ಟಿ ಏರಿಕೆ ಮತ್ತು ನಿರುದ್ಯೋಗದ ವಿರುದ್ಧ ದೇಶಾದ್ಯಂತ ಪ್ರತಿಭಟನೆಗೆ ಕಾಂಗ್ರೆಸ್ ಕರೆ ನೀಡಿರುವುದರ ಹಲವು ವರದಿಗಳು ಕಂಡುಬಂದಿವೆ. ಆಗ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿಯವರು ಕಪ್ಪು ಬಟ್ಟೆ ಧರಿಸಿ ರಾಷ್ಟ್ರಪತಿ ಭವನದತ್ತ ಮೆರವಣಿಗೆ ನಡೆಸಿದ್ದಾಗ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದರು. ಈ ಕುರಿತು ಎನ್‌ಡಿಟಿವಿ, ಸ್ಕ್ರೋಲ್ ಸೇರಿದಂತೆ ಹಲವಾರು ಮಾಧ್ಯಮಗಳು ವರದಿ ಮಾಡಿವೆ.

ಇನ್ನುಈ ಪ್ರತಿಭಟನೆಯ ಬ್ಯಾನರ್‌ಗಳಲ್ಲಿ, ಪತ್ರಿಕಾ ಹೇಳಿಕೆಗಳಲ್ಲಿ, ಘೋಷಣೆಗಳಲ್ಲಿ ಎಲ್ಲಿಯೂ ರಾಮಮಂದಿರದ ವಿರುದ್ಧ ಪದಗಳು ಕಂಡುಬಂದಿಲ್ಲ. ಹಾಗಾಗಿ ರಾಮಮಂದಿರದ ವಿರುದ್ಧ ಪ್ರತಿಭಟಿಸಲು ರಾಹುಲ್ ಗಾಂಧಿ ಕಪ್ಪು ಬಟ್ಟೆ ಧರಿಸಿದ್ದರು ಎಂಬುದು ಸುಳ್ಳು.


ಇದನ್ನೂ ಓದಿ; Fact Check: ಡಾ. ಬಿ.ಆರ್ ಅಂಬೇಡ್ಕರ್ RSS ಶಾಖೆಗೆ ಭೇಟಿ ನೀಡಿದ್ದರು ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *