Fact Check | ಮೋದಿ‌ ಸರ್ಕಾರ ಬಂದ ನಂತರ POK ಗೆ 24 ಸ್ಥಾನಗಳನ್ನು ಮೀಸಲಿರಿಸಲಾಗಿದೆ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ ಸರ್ಕಾರವನ್ನು ಬೆಂಬಲಿಸುವ ಹಲವು ಪೋಸ್ಟ್‌ಗಳನ್ನು ಸಾಕಷ್ಟು ಮಂದಿ ಹಂಚಿಕೊಳ್ಳುತ್ತಾರೆ. ಹೀಗೆ ಹಂಚಿಕೊಳ್ಳುವಾಗ ಹಲವು ಸುಳ್ಳು ಸುದ್ದಿಗಳನ್ನು ನಿಜವೆಂದು ಶೇರ್‌ ಮಾಡುತ್ತಾರೆ. ಇದೀಗ “ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಮೋದಿ ಅವರ ಸರಕಾರ 24 ಸ್ಥಾನಗಳನ್ನು ಮೀಸಲಿಟ್ಟಿದೆ. ಇದಕ್ಕೆ ಮೋದಿ ಸರ್ಕಾರವೇ ಬರಬೇಕಾಯಿತು” ಎಂಬ ಸುಳ್ಳು ಸುದ್ದಿಯೊಂದನ್ನು ಸಾಮಾಜಿಕ ಜಾಲತಾಣವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಇತ್ತೀಚೆಗೆ “ಪಾಕ್‌ ಆಕ್ರಮಿತ ಕಾಶ್ಮೀರ ನಮ್ಮದು” ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿಕೆ ನೀಡಿದ ನಂತರ. ಈ ಹೇಳಿಕೆಯನ್ನು ಉಲ್ಲೇಖಿಸಿ ಹಲವು ರೀತಿಯಾದ ಸುಳ್ಳು ಸುದ್ದಿಗಳನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದೀಗ ಮೋದಿ ಸರ್ಕಾರ ಮಾತ್ರ ಪಾಕ್‌ ಆಕ್ರಮಿತ ಕಾಶ್ಮೀರ ನಮ್ಮದು ಎಂದು ಹೇಳಿಕೊಂಡಿದೆ. ಮೋದಿ ಸರ್ಕಾರ ಬಂದ ನಂತರವೇ ಪಾಕ್‌ ಆಕ್ರಮಿತ ಕಾಶ್ಮೀರಕ್ಕೆ 24 ಸ್ಥಾನಗಳನ್ನು ಮೀಸಲಿರಿಸಲಾಗಿದೆ ಎಂದು ಹಂಚಿಕೊಳ್ಳಲಾಗುತ್ತಿದೆ.

ಫ್ಯಾಕ್ಟ್‌ಚೆಕ್‌

ಈ ಕುರಿತು ಫ್ಯಾಕ್ಟ್‌ಚೆಕ್‌ ನಡೆಸಿದಾಗ ಜಮ್ಮು ಮತ್ತು ಕಾಶ್ಮೀರದ ಮೂಲ ಸಂವಿಧಾನವು ಪಾಕ್ ಆಕ್ರಮಿತ ಕಾಶ್ಮೀರದ ಪ್ರದೇಶಗಳಿಗೆ 25 ಸ್ಥಾನಗಳನ್ನು ಕಾಯ್ದಿರಿಸಿದೆ. ನಂತರದ ತಿದ್ದುಪಡಿಯ ಮೂಲಕ, ಸ್ಥಾನಗಳ ಸಂಖ್ಯೆಯನ್ನು 24 ಕ್ಕೆ ಇಳಿಸಲಾಯಿತು. 370 ನೇ ವಿಧಿಯನ್ನು ರದ್ದುಪಡಿಸಿದ ನಂತರವೂ ಇದನ್ನು ಹಲವಾರು ಬಾರಿ ಉಲ್ಲೇಖಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯಿದೆ, 2019 ರ ಸೆಕ್ಷನ್ 14 (4) ಸಹ ಈ 24 ಸ್ಥಾನಗಳನ್ನು ಶಾಸಕಾಂಗದಲ್ಲಿ ಪುನರುಚ್ಚರಿಸುತ್ತದೆ ಅಸೆಂಬ್ಲಿಯನ್ನು ಖಾಲಿ ಇರದಂತೆ ಇಡಬೇಕು ಎಂಬುದಿದೆ. ಒಟ್ಟಾರೆಯಾಗಿ ಮೋದಿ ಸರ್ಕಾರ ಅಧಿಕಾರಕ್ಕೆ ಬರುವುದಕ್ಕೂ ಮುಂಚಿನಿಂದಲೂ ಪಾಕ್ ಆಕ್ರಮಿತ ‌ಕಾಶ್ಮೀರದಲ್ಲಿ ಸ್ಥಾನಗಳನ್ನು ಕಾಯ್ದಿರಿಸಿಕೊಂಡು ಬರಲಾಗಿದೆ.


ಇದನ್ನೂ ಓದಿ : Fact Check | ನಕ್ಷತ್ರ ( * ) ಚಿಹ್ನೆ ಹೊಂದಿರುವ 500 ರೂ. ನೋಟು ನಕಲಿಯಲ್ಲ..!


ವಿಡಿಯೋ ನೋಡಿ : Fact Check | ನಕ್ಷತ್ರ ( * ) ಚಿಹ್ನೆ ಹೊಂದಿರುವ 500 ರೂ. ನೋಟು ನಕಲಿಯಲ್ಲ..!


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *