ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ತಾನೊಬ್ಬ ಟೈಲರ್ ಎಂದು ಕರೆದುಕೊಂಡಿದ್ದಾರೆ ಎಂಬುದು ಸುಳ್ಳು

ಸಧ್ಯ ಭಾರತದಲ್ಲಿ ಅತಿ ಹೆಚ್ಚು ಟೀಕೆಗೆ, ಅಪಪ್ರಚಾರಕ್ಕೆ ಒಳಗಾಗುತ್ತಿರುವ ರಾಜಕಾರಣಿಗಳಲ್ಲಿ ರಾಹುಲ್ ಗಾಂಧಿಯವರು ಪ್ರಮುಖರು. ಅವರ ಮೇಲೆ ಸಾಕಷ್ಟು ಇಲ್ಲ ಸಲ್ಲದ ಆರೋಪಗಳನ್ನು ಮತ್ತು ಸುಳ್ಳು ಸುದ್ದಿಗಳನ್ನು ನಿರಂತರವಾಗಿ ಹರಿಬಿಡಲಾಗುತ್ತಿದೆ. ಅವರ ಪ್ರತೀ ಭಾಷಣವನ್ನು ತಪ್ಪು ಅರ್ಥ ಬರುವಂತೆ  ಎಡಿಟ್ ಮಾಡಿ ಹಂಚಿಕೊಳ್ಳಲಾಗುತ್ತಿದೆ.

ಈಗ ಇದೇ ರೀತಿಯ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಅದರಲ್ಲಿ  “ರಾಹುಲ್ ಗಾಂಧಿಯವರು ತಮ್ಮ ಭಾಷಣದಲ್ಲಿ ತಾನೊಬ್ಬ ದರ್ಜಿ(ಟೈಲರ್) ಎಂದು ಕರೆದುಕೊಂಡಿದ್ದಾರೆ” ಎಂದು ಪ್ರತಿಪಾಧಿಸಲಾಗುತ್ತಿದೆ.

ಫ್ಯಾಕ್ಟ್‌ಚೆಕ್: ಇದು 11 ನವೆಂಬರ್ 2023ರಂದು ನಡೆದ ಹಿಂದುಳಿದ ವರ್ಗಗಳ(OBC) ಸಮಾವೇಶದಲ್ಲಿ ರಾಹುಲ್ ಗಾಂಧಿ ಮಾಡಿದ ಭಾಷಣ ಇದಾಗಿದೆ. ಭಾರತೀಯ ಡಿಸೈನರ್ ಕೆಲಸವನ್ನು ಅಣಕಿಸಿದ ಒಬ್ಬ ಫ್ಯಾಷನ್ ಡಿಸೈನರ್ ಜೊತೆ ಸಂಭಾಷಣೆ ನಡೆಸಿದ ರಾಹುಲ್ ಭಾರತೀಯ ಕಲಾವಿದರನ್ನು ಏಕೆ ಗೇಲಿ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದಾಗ ಡಿಸೈನರ್ ವಿವರಿಸುತ್ತಾ, “ಜಗತ್ತು ನನ್ನನ್ನು ಫ್ಯಾಷನ್ ಡಿಸೈನರ್ ಎಂದು ಕರೆಯುತ್ತದೆ, ಆದರೆ ನಾನು ಫ್ಯಾಷನ್ ಡಿಸೈನರ್ ಅಲ್ಲ. ನಾನು ದರ್ಜಿ. ನಾನು ಯಾವುದೇ ಬಟ್ಟೆಯನ್ನು ನೋಡಿದಾಗ, ಅಥವಾ ಯಾವುದಾದರೂ ಬಟ್ಟೆ ತೋರಿಸಿ, ಅಥವಾ ಅದರ ಬಣ್ಣ, ಯಾವ ಬಟ್ಟೆ ನೋಡಿದರೂ ನಾನು ಅರ್ಥಮಾಡಿಕೊಳ್ಳುತ್ತೇನೆ. ಹೇಗೆ ಅದನ್ನು ಕತ್ತರಿಸಬೇಕು, ಹೇಗೆ ಇನ್ನೊಬ್ಬನ ಹೆಗಲಿಗೆ ತೊಡಿಸಬೇಕು, ಯಾವ ಬಣ್ಣ ಎಲ್ಲಿ ಬರಬೇಕು ಎಂದು. ಇದು ನನ್ನ ಕಲೆ. ಇದು ನನ್ನ ಕೆಲಸ. ನನಗೆ ನನ್ನ ಕೆಲಸ ಚೆನ್ನಾಗಿ ಮಾಡಲು ಬರುತ್ತದೆ.

ಈಗ ಗಮನವಿಟ್ಟು ಕೇಳಿ, ಆ ಬಟ್ಟೆಯನ್ನು ದರ್ಜಿಯೊಬ್ಬರು ತಯಾರಿಸಿದ್ದಾರೆ, ಆ ದರ್ಜಿಯನ್ನು ಈ ವ್ಯಕ್ತಿಯ(ಡಿಸೈನರ್) ಹಿಂದಿನ ಕೋಣೆಯಲ್ಲಿ ಅಡಗಿಸಿಡಲಾಗಿದೆ. ನೀವು ಆ ದರ್ಜಿಯನ್ನು ಹಿಂದಿನ ಕೋಣೆಯಿಂದ ತೆಗೆದು ಫ್ರಾನ್ಸ್‌ನಲ್ಲಿರುವ ಪ್ಯಾರಿಸ್ ಗೆ ಕಳುಹಿಸಿ, ನಾವು ಚಪ್ಪಾಳೆ ತಟ್ಟುತ್ತೇವೆ.” ಎಂದು ಹೇಳಿದರು ಎಂದಿದ್ದಾರೆ. ಇದರ ಅರ್ಥ ಶ್ರಮಿಕ ವರ್ಗದವರಾದ ದರ್ಜಿಗಳಿಗೆ  ಫ್ಯಾಷನ್ ಡಿಸೈನರ್ ಗಳಿಗೆ ದೊರಕುವಂತಹ ಸಮಾನ ಸ್ಥಾನಮಾನ ನೀಡಿ ಎಂಬುದಾಗಿದೆ. ಆದ್ದರಿಂದ ಇಲ್ಲಿ ಫ್ಯಾಷನ್ ಡಿಸೈನರ್ ರವರ ಮಾತನ್ನು ರಾಹುಲ್‌ರವರು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆಯೇ ವಿನಃ ತಮ್ಮ ಸ್ವಂತ ಮಾತುಗಳನ್ನಲ್ಲ.ಇದರ ಪೂರ್ತಿ ವಿಡಿಯೋ ಯೂಟೂಬ್‌ನಲ್ಲಿ ಲಭ್ಯವಿದ್ದು ಇದನ್ನು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ತನ್ನ ಅಧಿಕೃತ ಪುಟದಲ್ಲಿ ಪ್ರಕಟಿಸಿದೆ.  ಹಿಂದುಳಿದ ಜಾತಿಗಳ ಜನರು ಕ್ರೆಡಿಟ್ ಪಡೆಯದೆ ಮೇಲ್ವರ್ಗದ ವೃತ್ತಿಪರರ ಯಶಸ್ಸಿಗೆ ಹೇಗೆ ಕೊಡುಗೆ ನೀಡುತ್ತಾರೆ ಎಂಬುದನ್ನು ತಿಳಿಸಲು ರಾಹುಲ್ ಗಾಂಧಿ ಪ್ರಯತ್ನಿಸಿದ್ದಾರೆ. ಈ ಭಾಷಣದಲ್ಲಿ ಡಿಸೈನರ್ ತನ್ನನ್ನು ಟೈಲರ್ ಎಂದು ಕರೆದುಕೊಳ್ಳುವ ಒಂದು ಭಾಗವನ್ನು ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ ಎಂದು ಸುಳ್ಳು ಹೇಳಲು ವಿಡಿಯೋ ಕತ್ತರಿಸಿ ಹಂಚಿಕೊಳ್ಳಲಾಗುತ್ತಿದೆ.


ಇದನ್ನು ಓದಿ: ರಾಹುಲ್ ಗಾಂಧಿ ಕಪ್ಪು ಬಟ್ಟೆ ಧರಿಸಿ ಪ್ರತಿಭಟಿಸಿದ್ದು ಬೆಲೆ ಏರಿಕೆ ವಿರುದ್ಧವೇ ಹೊರತು ರಾಮಮಂದಿರದ ವಿರುದ್ಧವಲ್ಲ


ವಿಡಿಯೋ ನೋಡಿ: Sabarimala| ಕೇರಳ ಪೋಲಿಸರು ಶಬರಿಮಲೆಗೆ ತೆರಳುತ್ತಿದ್ದ ಬಾಲಕನನ್ನು ವಶಕ್ಕೆ ಪಡೆದಿದ್ದಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *