Fact Check: ಐದು ಮಕ್ಕಳ ಮುಸ್ಲಿಂ ಕುಟುಂಬದ ಪೋಟೋ ಬಾಂಗ್ಲಾದೇಶಕ್ಕೆ ಸೇರಿದ್ದಾಗಿದೆ

ಭಾರತದಲ್ಲಿ ಮುಸ್ಲಿಂ ಸಮುದಾಯದ ಜನಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಮುಂಬರುವ ದಿನಗಳಲ್ಲಿ ಭಾರತ ಮುಸ್ಲಿಂ ರಾಷ್ಟ್ರವಾಗುತ್ತದೆ ಎಂದು ಪ್ರತಿಪಾದಿಸಿದ ಅನೇಕ ಸಂದೇಶಗಳು, ಆಧಾರ ರಹಿತ ಪ್ರತಿಪಾದನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹರಿದಾಡುತ್ತಿವೆ. ಇವುಗಳ ಮುಖ್ಯ ಉದ್ದೇಶ ಭಾರತದಲ್ಲಿ ಮುಸ್ಲಿಂ ಪ್ರಾಭಲ್ಯ ಹೆಚ್ಚಾಗುತ್ತಿದ್ದು ಹಿಂದುಗಳು ಅದನ್ನು ನಿಯಂತ್ರಿಸಬೇಕು ಎಂಬುದಾಗಿದೆ. ಇದರ ಭಾಗವಾಗಿ ಮುಸ್ಲಿಂ ಸಮುದಾಯವನ್ನು ನೇರವಾಗಿ ಗುರಿ ಮಾಡಿಕೊಂಡು ಅವರ ಮೇಲೆ ಇನ್ನಿಲ್ಲದಂತೆ ಅಪವಾದಗಳನ್ನು ಹೊರಿಸಲಾಗುತ್ತಿದೆ.

“ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡದೇ ಹೋದರೆ, ಈ ರೀತಿಯ ದೊಡ್ಡ ಮುಸ್ಲಿಂ ಕುಟುಂಬಗಳು ತೆರಿಗೆದಾರರ ಹಣದ ಎಲ್ಲಾ ಪ್ರಯೋಜನಗಳನ್ನು ಪಡೆಯುತ್ತಾರೆ.” ಎಂಬ ಸಂದೇಶದೊಂದಿಗೆ ಮತ್ತು ಮುಸ್ಲಿಂ ಕುಟುಂಬವೊಂದರ ಚಿತ್ರದ ಜೊತೆಗೆ ಹಲವಾರು ವರ್ಷಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಫ್ಯಾಕ್ಟ್‌ಚೆಕ್: ಹಂಚಿಕೊಳ್ಳಲಾಗುತ್ತಿರುವ ಈ ಮುಸ್ಲಿಂ ಕುಟುಂಬದ ಪೋಟೋ ಭಾರತದ್ದಾಗಿರದೆ ಬಾಂಗ್ಲಾದೇಶಕ್ಕೆ ಸಂಬಂಧಿಸಿದ್ದಾಗಿದೆ. ಈ ಪೋಟೋ 2017ರಿಂದ ಕಳೆದ ಅನೇಕ ವರ್ಷಗಳಿಂದ ಅಂತರ್ಜಾಲದಲ್ಲಿದೆ ಎಂದು ತಿಳಿದುಬಂದಿದೆ. “ಎಲೆಕ್ಟ್ರಿಕ್ ಬೈಕರ್ಸ್ ಅಸೋಸಿಯೇಷನ್ ಬಾಂಗ್ಲಾದೇಶ್” ಎಂಬ ಫೇಸ್ಬುಕ್ ಪುಟವು ಡಿಸೆಂಬರ್ 7, 2017 ರಂದು ಈ ಚಿತ್ರವನ್ನು ಹಂಚಿಕೊಂಡಿದೆ. ಹಾಗಾಗಿ ಅನೇಕ ಬಾರಿ ಮುಸ್ಲಿಂ ದ್ವೇಷ ಹರಡುವ ಸಂದರ್ಭದಲ್ಲಿ ಈ ಪೋಟೋವನ್ನು ಬಳಸಿಕೊಳ್ಳಲಾಗುತ್ತಿದೆ.

ಈ ಫೋಟೋದಲ್ಲಿ, ಬಂಗಾಳಿಯಲ್ಲಿ “ಹನೀಫ್ ಎಂಟರ್ಪ್ರೈಸಸ್, ಭಾಟಿಯಾಪಾರಾ-ಢಾಕಾ-ಚಟ್ಟೋಗ್ರಾಮ್” ಎಂದು ಬರೆದಿರುವ ಸೈನ್ ಬೋರ್ಡ್ ಅನ್ನು ನಾವು ಗಮನಿಸಬಹುದು ಬೋರ್ಡ್ ಕೆಳ-ಬಲ ಮೂಲೆಯಲ್ಲಿರುವ ಬಸ್ ನ ಫೋಟೋವನ್ನು ನೋಡಬಹುದು ಆದ್ದರಿಂದ ಈ ಪೋಟೋ ಬಾಂಗ್ಲಾದೇಶಕ್ಕೆ ಸಂಬಂಧಿಸಿದ್ದಾಗಿದೆ.


ಇದನ್ನು ಓದಿ: ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ತಾನೋಬ್ಬ ದರ್ಜಿ ಎಂದು ಕರೆದುಕೊಂಡಿದ್ದಾರೆ ಎಂಬುದು ಸುಳ್ಳು


ವಿಡಿಯೋ ನೋಡಿ: Fact Check | ಮಧ್ಯಪ್ರದೇಶ ಸಿಎಂ ಮುಸಲ್ಮಾನರಿಗೆ ಎಚ್ಚರಿಕೆ ನೀಡಿದ್ದಾರೆ ಎಂಬುದು ಸುಳ್ಳು | Madya Pradesh | BJP |


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *