ಶಬರಿಮಲೆ ದೇವಸ್ಥಾನದಲ್ಲಿ ಭಕ್ತರ ನಿರ್ವಹಣೆಯ ಕೊರತೆ ದೇಶಾದ್ಯಂತ ಬಹಳ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ನಂತರ ಹಲವು ರೀತಿಯ ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಬ್ಬುತ್ತಿವೆ. ಅದರಲ್ಲಿ ಪ್ರಮುಖವಾಗಿ ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದು ವೈರಲಾಗಿದೆ.
ಆ ಪೋಸ್ಟ್‌ನಲ್ಲಿ ಕೇರಳದ ಕಮ್ಯುನಿಸ್ಟ್ ಸರ್ಕಾರವು ಶಬರಿಮಲೆಯ ಅಯ್ಯಪ್ಪ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಖಾಸಗಿ ಬಸ್‌ನ ವ್ಯವಸ್ಥೆ ಮಾಡುತ್ತದೆ. ಆದರೆ ಹಜ್ ಯಾತ್ರೆಗೆ ತೆರಳುವ ಅನ್ಯಧರ್ಮೀಯರಿಗೆ ಐಷಾರಾಮಿ ವಿಮಾನದ ವ್ಯವಸ್ಥೆಯನ್ನು ಮಾಡುತ್ತದೆ ಎಂದು ಬರೆದುಕೊಂಡು ಫೋಟೋವೊಂದನ್ನು ಸಾಕಷ್ಟು ಮಂದಿ ಶೇರ್ ಮಾಡುತ್ತಿದ್ದಾರೆ. ಇನ್ನು ಇದೇ ಪೋಸ್ಟನ್ನು ಬಿಜೆಪಿಯನ್ನು ಬೆಂಬಲಿಸುವ ಹಲವು ಸಂಘಟನೆಗಳು ಶೇರ್ ಮಾಡುತ್ತಿವೆ.
ಫ್ಯಾಕ್ಟ್‌ಚೆಕ್
ವೈರಲ್ ಆಗುತ್ತಿರುವ ಈ ಕುರಿತು ಫ್ಯಾಕ್ಟ್ ಚೆಕ್ ನಡೆಸಿದಾಗ ಈ ಕೊಲೇಜ್ ಫೋಟೋ ನಕಲಿ ಎಂಬುದು ತಿಳಿದು ಬಂದಿದೆ. ಈ ಕುರಿತು ಕೇರಳದ ಏಷ್ಯಾನೆಟ್ ಸುದ್ದಿ ಸಂಸ್ಥೆ ವರದಿ ಮಾಡಿದೆ.. ಹಜ್ ಯಾತ್ರೆಗೆ ತೆರಳುವವರಿಗೆ ಐಷಾರಾಮಿ ವ್ಯವಸ್ಥೆ ಎಂದು ನಯಾ ಶತಾಬ್ದಿ ಎಂಬ ಆನ್ಲೈನ್ ಪತ್ರಿಕೆಯಲ್ಲಿ ಪ್ರಕಟಗೊಂಡ 15 ಜುಲೈ 2022 ಬಾಂಗ್ಲಾದೇಶದ ಫೋಟೋವನ್ನು ಹಂಚಿಕೊಳ್ಳಲಾಗಿದೆ.
ಇದನ್ನ ಕೇರಳದ ಏಷ್ಯಾನೆಟ್ ವರದಿಯಲ್ಲಿ ಕೂಡ ಹೇಳಲಾಗಿದೆ. ಇನ್ನು ಶಬರಿಮಲೆಗೆ ಬೇರೆ ರಾಜ್ಯಗಳಿಂದ ಲಕ್ಷಾಂತರ ಭಕ್ತಾದಿಗಳು ತಮ್ಮ ಸ್ವಂತ ಅಥವಾ ಬಾಡಿಗೆ ವಾಹನದಲ್ಲಿ ಬರುತ್ತಾರೆ. ಸೌದಿ ದೇಶದ ಹಜ್ ಯಾತ್ರೆಗೆ ಆಯ್ದಾ ಕೆಲವರಿಗೆ ಮಾತ್ರ ಕೇಂದ್ರ ಸರ್ಕಾರವು ಧನ ಸಹಾಯವನ್ನು ನೀಡುತ್ತದೆ. ಹಾಗಾಗಿ ಬಾಂಗ್ಲಾದೇಶದ ಫೋಟೋವನ್ನ ಬಳಸಿಕೊಂಡು ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಬ್ಬತ್ತಿರುವುದು ಈಗ ಬಟಾ ಬಯಲಾಗಿದೆ.
ಇದನ್ನೂ ಓದಿ : ಮುಖ್ಯಮಂತ್ರಿ ಸಿದ್ದರಾಮಯ್ಯನವರ ಎಡಿಟ್ ವಿಡಿಯೋ ಹಂಚಿ ಸುಳ್ಳು ಸಾರಿದ BJP ನಾಯಕರು
ವಿಡಿಯೋ ನೋಡಿ : ಮುಖ್ಯಮಂತ್ರಿ ಸಿದ್ದರಾಮಯ್ಯನವರ ಎಡಿಟ್ ವಿಡಿಯೋ ಹಂಚಿ ಸುಳ್ಳು ಸಾರಿದ BJP ನಾಯಕರು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.