ಭಾರತದ ಆರ್ಥಿಕತೆಗೆ, ಜಿಡಿಪಿ ದತ್ತಾಂಶಕ್ಕೆ ಸಂಬಂಧಿಸಿದಂತೆ ಹಲವಾರು ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಕಳೆದ ನವೆಂಬರ್ ತಿಂಗಳಲ್ಲಿ ಭಾರತವೂ 4 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಸಾಧಿಸಿದೆ ಮತ್ತು ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ, ಇದರ ಎಲ್ಲಾ ಶ್ರೇಯಸ್ಸು ಪ್ರಧಾನಿ ಮೋದಿಯವರಿಗೆ ಸಲ್ಲುತ್ತದೆ ಎಂಬ ಸುಳ್ಳು ಸುದ್ದಿಯೊಂದನ್ನು ಬಿಜೆಪಿಯ ರಾಷ್ಟ್ರ ಮತ್ತು ರಾಜ್ಯ ನಾಯಕರು ತಮ್ಮ ಟ್ವಿಟರ್ ಮತ್ತು ಫೇಸ್‌ಬುಕ್ ಖಾತೆಗಳಲ್ಲಿ ಹಂಚಿಕೊಂಡಿದ್ದರು. ದೇಶದ ಮತ್ತು ರಾಜ್ಯದ ಹಲವು ಮಾಧ್ಯಮಗಳು ಸಹ ಸತ್ಯವನ್ನು ಪರಿಶೀಲಿಸದೆ ತಪ್ಪಾಗಿ ವರದಿ ಮಾಡಿದ್ದರು.
ಈಗ, ಉತ್ತರ ಪ್ರದೇಶ ದೇಶದ ಎರಡನೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ ಎಂದು ಪ್ರಮುಖ ಆನ್ಲೈನ್ ಬ್ಲಾಗಿಂಗ್ ಪ್ಲಾಟ್ಫಾರ್ಮ್ soic.in ಅಥವಾ SOIC ಫೈನಾನ್ಸ್ ವರದಿ ಮಾಡಿದೆ. ರಾಜ್ಯ ಜಿಡಿಪಿ ಬೆಳವಣಿಗೆಯಲ್ಲಿ ತಮಿಳುನಾಡನ್ನು(9.1) ಹಿಂದಿಕ್ಕಿ ಉತ್ತರ ಪ್ರದೇಶ(9.2)ಮುಂದುವರೆದಿದೆ. ಎಂಬ ಸುದ್ದಿಯನ್ನು ಟೈಮ್ಸ್ ಆಫ್ ಇಂಡಿಯಾ, ಔಟ್‌ಲುಕ್(Outlook), ಎಕನಾಮಿಕ್ಸ್ ಟೈಮ್ಸ್ ಸೇರಿದಂತೆ ಹಲವಾರು ಮಾಧ್ಯಮಗಳು ವರದಿ ಮಾಡಿವೆ. ಫ್ಯಾಕ್ಟ್‌ಚೆಕ್: SOIC ಫೈನಾನ್ಸ್ ನೀಡಿರುವ ವರದಿ ಆಧಾರದಲ್ಲಿ ANI, ಟೈಮ್ಸ್ ಆಫ್ ಇಂಡಿಯಾ ಸೇರಿದಂತೆ ಹಲವು ಮಾಧ್ಯಮಗಳು ಈ ವರದಿ ಮಾಡಿವೆ. ಆದರೆ ಉತ್ತರ ಪ್ರದೇಶದ ಜಿಡಿಪಿಯು 9.2% ಏರಿಕೆಯಾಗಿರುವ ಕುರಿತು ಯಾವುದೇ ಅಧಿಕೃತ ದಾಖಲೆಗಳಿಲ್ಲ. SOIC ವರದಿಯಲ್ಲಿ ಕರ್ನಾಟಕದ ಜಿಡಿಪಿ ದರ 6.2% ರಷ್ಟಿದ್ದರೆ ಮತ್ತು ಪಶ್ಚಿಮ ಬಂಗಾಳದ ಜಿಡಿಪಿ 7.5%ರಷ್ಟಿದೆ ಆದರೆ RBI ಪ್ರಕಾರ 2021-22 ಸಾಲಿನಲ್ಲಿ ಕರ್ನಾಟಕದ ಜಿಡಿಪಿ 9.5% ಇದೆ.ಹಾಗಾಗಿ SOIC ವರದಿ ದಿಕ್ಕು ತಪ್ಪಿಸುವಂತಿದೆ ಎಂದು Indian Tech & Infra ಟ್ವೀಟ್ ಮಾಡಿದೆ. ಆದ್ದರಿಂದ ಉತ್ತರ ಪ್ರದೇಶ ದೇಶದ ಎರಡನೇ ಅತಿ ದೊಡ್ಡ ಆರ್ಥಿಕತೆಯಾಗಿದೆ ಎಂಬುದಕ್ಕೆ ಅಧಿಕೃತ ಆಧಾರಗಳಿಲ್ಲ.
@soicfinance ಭಾರತೀಯ ಷೇರು ಮಾರುಕಟ್ಟೆ, ಹೂಡಿಕೆ ಸಲಹೆ, ಸಂಶೋಧನೆಗಳನ್ನು ನಡೆಸುವ ಖಾಸಗಿ ಕಂಪನಿಯಾಗಿದೆ. ಸಧ್ಯ ಜಿಡಿಪಿ ಕುರಿತಂತೆ ಈ ಕಂಪನಿಯು ನೀಡಿರುವ ವರದಿ ತಪ್ಪುಗಳಿಂದ ಕೂಡಿದೆ. ಇನ್ನೂ ಉತ್ತರ ಪ್ರದೇಶವು ದೇಶದ ಎರಡನೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ ಎಂಬ ಸುಳ್ಳನ್ನು ಯೋಗಿ ಆದಿತ್ಯನಾಥ್ ರವರೇ 2021ರಲ್ಲಿ ದ ವೀಕ್ ಮ್ಯಾಗಜೀನ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಆದರೆ ಉತ್ತರ ಪ್ರದೇಶ ದೇಶದಲ್ಲಿಯೇ ಎರಡನೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ ಎಂಬುದು ಸುಳ್ಳು.
ಇದನ್ನು ಓದಿ: Fact Check: ಭಾರತ 4 ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧಿಸಿದೆ ಎಂಬುದು ಸುಳ್ಳು
ವಿಡಿಯೋ ನೋಡಿ: Video | ಅಯ್ಯಪ್ಪ ಭಕ್ತಾದಿಗಳಿಗಿಂತ ಹಜ್ ಯಾತ್ರಾರ್ಥಿಗಳಿಗೆ ಐಷಾರಾಮಿ ಸೌಲಭ್ಯ ಎಂಬುದು ಸುಳ್ಳು | Shabarimale
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ