“ಈ ವಿಡಿಯೋ ನೋಡಿ ಇದು ಇತ್ತೀಚೆಗೆ ಜಪಾನ್‌ನಲ್ಲಿ ನಡೆದ ಭೂಕಂಪಕ್ಕೆ ಸಂಬಂಧಿಸಿದ ದೃಶ್ಯಗಳು. ತೀವ್ರ ಭೂಕಂಪನದಿಂದಾಗಿ ಜಪಾನ್ ಕಡಲಾ ತೀರದ ಜನ ವಸತಿ ಪ್ರದೇಶಗಳು ನೀರಿನಿಂದ ಆವೃತ್ತವಾಗಿದೆ. ಸುನಾಮಿ ಎಚ್ಚರಿಕೆ ನೀಡಲಾಗಿದೆ.” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಇದೇ ರೀತಿಯ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅದು “ಇತ್ತೀಚೆಗೆ ಜಪಾನ್‌ನಲ್ಲಿ ಸಂಬಂಧಿಸಿದ ಭೂಕಂಪನದ ವಿಡಿಯೋ ಮತ್ತು ಅದರಿಂದ ಆದಂತಹ ಅನಾಹುತಗಳು” ಎಂದು ಹಂಚಿಕೊಳ್ಳಲಾಗುತ್ತಿದೆ.
ಫ್ಯಾಕ್ಟ್‌ಚೆಕ್
ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋದ ಕುರಿತು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಪರಿಶೀನೆ ನಡೆಸಲು, ವೈರಲ್ ವಿಡಿಯೋದ ಕೆಲ ಕೀ ಫ್ರೇಮ್‌ಗಳನ್ನು ಗೂಗಲ್ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿತು. ಈ ವೇಳೆ ಇದೇ ವಿಡಿಯೋಗೆ ಸಂಬಂಧ ಪಟ್ಟ ಹಲವಾರು ವಿಡಿಯೋಗಳು ಕಂಡು ಬದಿದ್ದು ಅದರಲ್ಲಿ ಅಸೋಸಿಯೇಟೆಡ್ ಪ್ರೆಸ್‌ನ (AP) YouTube ಚಾನಲ್‌ನಲ್ಲಿ 11 ಮಾರ್ಚ್ 2011 ರ ವಿಡಿಯೋ ಕಂಡು ಬಂದಿದ್ದು, ಇದು 12 ವರ್ಷಗಳ ಹಿಂದೆ ಜಪಾನ್‌ಗೆ ಅಪ್ಪಳಿಸಿದ ಸುನಾಮಿ ವಿಡಿಯೋ ಎಂಬುದು ತಿಳಿದು ಬಂದಿದೆ.
ಇದರ ಜೊತೆಗೆ ಕೆಲವೊಂದು ಕೀ ಫ್ರೇಮ್‌ಗಳು 13 ಮಾರ್ಚ್ 2011 ರಂದು ಜಪಾನ್‌ನ ಮಿಯಾಕೊಗೆ ಅಪ್ಪಳಿಸಿದ ಸುನಾಮಿ ದೃಶ್ಯಗಳಿಗೆ ಸಂಬಂಧಿಸಿದ್ದಾಗಿದ್ದು, ಈ ಕುರಿತು ಅಲ್ ಜಜೀರ ಸೇರಿದಂತೆ ಹಲವು ಮಾಧ್ಯಮಗಳು ಕೂಡ ವರದಿಯನ್ನ ಮಾಡಿದೆ.
ಇನ್ನು ಈಗ ಜಪಾನ್‌ನಲ್ಲಿ ಭೂಕಂಪನದಿಂದ ಅಲ್ಲಿನ ಕರಾವಳಿ ತೀರ ಸಂಪೂರ್ಣ ಜಲಾವೃತ್ತವಾಗಿದೆ. ಮತ್ತು ಸಾವಿರಾರು ಮಂದಿ ಸಾವನ್ನಪ್ಪಿದ್ದಾರೆ ಎಂಬುದು ಕೂಡ ಸುಳ್ಳು. ಏಕೆಂದರೆ ಪ್ರಸ್ತುತ ಭೂಕಂಪದಿಂದ ಜಪಾನ್‌ನಲ್ಲಿ ಸಾವಿನ ಸಂಖ್ಯೆ 73 ರಷ್ಟಿದೆ ಮತ್ತು 33,000 ಕ್ಕೂ ಹೆಚ್ಚು ಜನರನ್ನು, ಸ್ಥಳಾಂತರಿಸಲಾಗಿದೆ ಎಂದು ಜಪಾನ್‌ನ ಅಧಿಕೃತ ಮಾಧ್ಯಮಗಳು ವರದಿಯನ್ನು ಮಾಡಿವೆ. ಹಾಗಾಗಿ ಜಪಾನ್ ಭೂಕಂಪಕ್ಕೆ ಸಂಬಂಧಿಸಿದ ವೈರಲ್ ವಿಡಿಯೋಗಳನ್ನು ನಂಬುವ ಅಥವಾ ಶೇರ್ ಮಾಡುವ ಮೊದಲು ಒಮ್ಮೆ ಪರಿಶೀಲಿಸಿ.
ಇದನ್ನೂ ಓದಿ : Fact Check: ರಾಹುಲ್ ಗಾಂಧಿಯವರು ಸುಕನ್ಯ ದೇವಿ ಎಂಬ ಹೆಣ್ಣುಮಗಳ ಅತ್ಯಾಚಾರದಲ್ಲಿ ಭಾಗಿಯಾಗಿದ್ದರು ಎಂಬುದು ಸುಳ್ಳು
ವಿಡಿಯೋ ನೋಡಿ : Fact Check: ರಾಹುಲ್ ಗಾಂಧಿಯವರು ಸುಕನ್ಯ ದೇವಿ ಎಂಬ ಹೆಣ್ಣುಮಗಳ ಅತ್ಯಾಚಾರದಲ್ಲಿ ಭಾಗಿಯಾಗಿದ್ದರು ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ