Fact Check | ಈಜಿಪ್ಟ್‌ನಲ್ಲಿ ದೈತ್ಯ ಮಮ್ಮಿ ಪತ್ತೆಯಾಗಿದೆ ಎಂದು AI ಚಿತ್ರ ಹಂಚಿಕೆ..!

“ದೈತ್ಯ ಫೇರೋಗಳ ಮಮ್ಮಿಗಳನ್ನು 1920 ರಲ್ಲಿ ಹಾವರ್ಡ್‌ ಕಾರ್ಟರ್ ಪತ್ತೆ ಹಚ್ಚಿದ್ದರು. ಈಜಿಪ್ಟ್‌ನಲ್ಲಿನ ಸಮಾಧಿ ಉತ್ಖನನದ ವೇಳೆ ಈ ಹಲವು ಮಮ್ಮಿಗಳು ಕಂಡು ಬಂದಿತ್ತು. ಇದು ಆ ಅಪರೂಪ ಕ್ಷಣಗಳ ಫೋಟೋ.. ಇದನ್ನು ಶೇರ್‌ ಮಾಡಿ” ಎಂಬ ಪೋಸ್ಟ್‌ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಪೋಸ್ಟ್‌ ನೋಡಲು ನಿಜವಾದ ಫೋಟೋದಂತೆ ಕಂಡುಬಂದಿದೆ.

ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗುತ್ತಿರುವ ಫೋಟೋ
ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗುತ್ತಿರುವ ಫೋಟೋ

ಇದೇ ಕಾರಣಕ್ಕೆ ಸಾಕಷ್ಟು ಮಂದಿ ಈ ಫೋಟೋವನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಮತ್ತು ಇದನ್ನೇ ನಿಜವೆಂದು ನಂಬಿ ಶೇರ್‌ ಕೂಡ ಮಾಡುತ್ತಿದ್ದಾರೆ. ಹಾಗಾಗಿ ಈ ವಿಚಾರದ ಕುರಿತು ಸಾಕಷ್ಟು ಮಂದಿಗೆ ಗೊಂದಲ ಕೂಡ ಉಂಟಾಗಿರುವುದು ಸುಳ್ಳಲ್ಲ.

ಫ್ಯಾಕ್ಟ್‌ಚೆಕ್‌ 

ಈ ಫೋಟೋಗಳನ್ನು ವಿವಿಧ ಕೀ ಫ್ರೇಮ್‌ಗಳಾಗಿ ವಿಂಗಡಿಸಿದ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಅದನ್ನು ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಾಟ ನಡೆಸಿದೆ. ಆಗ ಇದೇ ರೀತಿಯ ಹಲವು ಫೋಟೋಗಳು ಕೂಡ ಕಂಡು ಬಂದಿದೆ.

ಈ ವೇಳೆ ಇದೇ ಫೋಟೋವನ್ನು 2023ರಲ್ಲೂ ಹಂಚಿಕೊಂಡಿರುವುದು ಪತ್ತೆಯಾಗಿತ್ತು ಹಾಗಾಗಿ ಈ ಫೋಟೋವನ್ನು  AIನಿಂದ ಸೃಷ್ಠಿಸಿರಬಹುದು ಎಂಬ ಅನುಮಾನ ಬಲವಾಗಿ ಕಾಡಲು ಪ್ರಾರಂಭವಾಗಿತ್ತು. ಹಾಗಾಗಿ ಈ ಫೋಟೋವನ್ನು ಹೈವ್‌ ಮಾಡರೇಷನ್‌ನಲ್ಲಿ ಪರಿಶೀಲನೆ ನಡೆಸಲಾಯಿತು

ಹೀಗೆ ಪರಿಶೀಲನೆ ನಡೆಸಿದಾಗ ಈ ಫೊಟೋವು 86 ಪ್ರತಿಶತಃ  AIನಿಂದ ಸೃಷ್ಠಿಸಿದ ಫೋಟೋ ಎಂಬುದು ತಿಳಿದು ಬಂದಿದೆ.  ಇನ್ನು ಹಾವರ್ಡ್‌ ಕಾರ್ಟರ್‌ ಪತ್ತೆ ಹಚ್ಚಿದ್ದ ಮಮ್ಮಿಯ ಎತ್ತರ 5 ಅಡಿ 7 ಇಂಚು ಇತ್ತು ಎಂಬುದು ಕೂಡ ಹಲವು ದಾಖಲೆಗಳಿಂದ ಸಾಬೀತಾಗಿದೆ. ಹಾಗಾಗಿ ಈ ಫೋಟೋಗಳೊಂದಿಗೆ ಹಂಚಿಕೊಳ್ಳಲಾಗುತ್ತಿರುವ ಬರಹಗಳು ಕೂಡ ಸುಳ್ಳಾಗಿದೆ.


ಇದನ್ನೂ ಓದಿ : Fact check: ಹಿಂದೂ ದೇವಾಲಯಗಳ ಹಣವನ್ನು ಬೇರೆ ಧರ್ಮದ ದೇವಾಲಯಗಳಿಗೆ ಬಳಸಲಾಗುತ್ತಿದೆ ಎಂಬುದು ಸುಳ್ಳು


ವಿಡಿಯೋ ನೋಡಿ : Fact check: ಹಿಂದೂ ದೇವಾಲಯಗಳ ಹಣವನ್ನು ಬೇರೆ ಧರ್ಮದ ದೇವಾಲಯಗಳಿಗೆ ಬಳಸಲಾಗುತ್ತಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *