Fact Check | ರಾಹುಲ್‌ ಗಾಂಧಿ ತಪ್ಪು ಲೆಕ್ಕ ಹೇಳಿದ್ದಾರೆ ಎಂದು ಸುಳ್ಳು ಹರಡಿದ ಬಿಜೆಪಿ

“ರಾಹುಲ್‌ ಗಾಂಧಿ ಎಷ್ಟು ದಡ್ಡರಿದ್ದಾರೆ ನೋಡಿ, ಮಕ್ಕಳು ಹೇಳುವ ಲೆಕ್ಕವನ್ನು ಕೂಡ ಅವರಿಂದ ಹೇಳಲು ಸಾಧ್ಯವಾಗುತ್ತಿಲ್ಲ. ಸಾರ್ವಜನಿಕ ಕಾರ್ಯಕ್ರಮದಲ್ಲಿ 50 ಮತ್ತು 15 ನ್ನು ಕೂಡಿಸಿದರೆ 73 ಆಗುತ್ತದೆ ಎಂದು ಹೇಳುವ ಮೂಲಕ ತಾವು ಎಂತಹ ದಡ್ಡರೆಂದು ಸಾಭೀತು ಪಡಿಸಿದ್ದಾರೆ.” ಎಂದು ವಿಡಿಯೋದೊಂದಿಗೆ ಪೋಸ್ಟ್‌ವೊಂದನ್ನು ಹಂಚಿಕೊಳ್ಳಲಾಗುತ್ತಿದೆ.

ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ
           ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಈ ವಿಡಿಯೋ ಮೂಲಕ ರಾಹುಲ್‌ ಗಾಂಧಿ ಅವರು ದಡ್ಡ , ಅವರಿಗೆ ರಾಜಕೀಯ ಅಂದರೆ ಏನೂ ಎಂಬುದೇ ಗೊತ್ತಿಲ್ಲ ಎಂಬ ರೀತಿಯಲ್ಲಿ ಬಿಂಬಿಸಲು ಪ್ರಯತ್ನಿಸಲಾಗಿದೆ. ಇನ್ನು ವಿಡಿಯೋವನ್ನು ನೋಡಿದವರಿಗೂ ರಾಹುಲ್‌ ಗಾಂಧಿ ಅವರು ತಪ್ಪು ಲೆಕ್ಕವನ್ನು ಹೇಳಿದ್ದಾರೆ ಎಂದು ಮೇಲ್ನೋಟದಲ್ಲಿ ನಿಜವೆಂದು ನಂಬುತ್ತಾರೆ.

ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾದ ತಿರುಚಿದ ವಿಡಿಯೋ

ಫ್ಯಾಕ್ಟ್‌ಚೆಕ್‌

ಹೀಗೆ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ವಿಡಿಯೋ ಎಡಿಟ್‌ ಮಾಡಿದ ವಿಡಿಯೋವಾಗಿದ್ದು, ಅದರ ಮೂಲ ವಿಡಿಯೋದಲ್ಲಿ ಎಲ್ಲಿಯೂ ರಾಹುಲ್‌ ಗಾಂಧಿ ತಪ್ಪು ಲೆಕ್ಕ ಹೇಳಿರುವುದು ಕಂಡು ಬಂದಿಲ್ಲ. ಇನ್ನು ರಾಹುಲ್‌ ಗಾಂಧಿ ಅವರು ಮಾತನಾಡಿರುವ ವಿಡಿಯೋ  ಭಾರತ್‌ ಜೋಡೋ ನ್ಯಾಯ ಯಾತ್ರೆಯ ಸಂದರ್ಭದ್ದಾಗಿದ್ದು ಈ ವಿಡಿಯೋ ಯುಟ್ಯೂಬ್‌ನಲ್ಲಿ ಕೂಡ ಲಭ್ಯವಿದೆ.

ಯುಟ್ಯೂಬ್‌ನಲ್ಲಿ ರಾಹುಲ್‌ ಗಾಂಧಿ ಅವರು ಪೂರ್ತಿ ಮಾತನಾಡಿರುವ ವಿಡಿಯೋ

ಒಡಿಶಾದಲ್ಲಿನ ಬುಡಕಟ್ಟು ಜನರನ್ನು ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಬುಡಕಟ್ಟು ಜನಸಂಖ್ಯೆಯ ಪಾಲನ್ನು ರಾಹುಲ್ ಗಾಂಧಿ ಉಲ್ಲೇಖಿಸಿದ್ದಾರೆ. ಅದರಲ್ಲಿ ಅವರು 50, 15 ಮತ್ತು 8 ಒಟ್ಟಾರೆಯಾಗಿ 73% ಆಗುತ್ತದೆ ಎಂದು ಹೆಳುತ್ತಾರೆ. ಅಂದರೆ ಇಲ್ಲಿ ರಾಹುಲ್‌ ಗಾಂಧಿ ಅವರು ಶೇಕಡಾವಾರು ಪಾಲನ್ನು ಹೇಳಿದ್ದಾರೆಯೇ ಹೊರತು ಅಂಕಿ ಅಂಶಗಳನ್ನು ಕೂಡಿಸಿ ಹೇಳಿದ್ಧಲ್ಲ ಎಂಬುದು ಖಾತ್ರಿಯಾಗುತ್ತದೆ.

ಇನ್ನು ಈ ವಿಡಿಯೋದ ಪೂರ್ತಿ ಆವೃತ್ತಿಯನ್ನು ಕಾಂಗ್ರೆಸ್‌ ಹಂಚಿಕೊಂಡಿದ್ದು,  ಅದರಲ್ಲಿ ರಾಹುಲ್‌ ಗಾಂಧಿ ಅವರು ಏನು ಮಾತನಾಡಿದ್ದಾರೆ ಎಂಬುದನ್ನು ತನ್ನ ಎಕ್ಸ್‌ ( ಈ ಹಿಂದಿನ ಟ್ವಿಟರ್‌ ) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ರಾಹುಲ್‌ ಗಾಂಧಿ ಅವರು ತಪ್ಪು ಲೆಕ್ಕ ಹೇಳಿದ್ದಾರೆ ಎಂಬುದು ಸುಳ್ಳಾಗಿದೆ.


ಇದನ್ನೂ ಓದಿ :  Fact check: ಹಿಂದೂ ದೇವಾಲಯಗಳ ಹಣವನ್ನು ಬೇರೆ ಧರ್ಮದ ದೇವಾಲಯಗಳಿಗೆ ಬಳಸಲಾಗುತ್ತಿದೆ ಎಂಬುದು ಸುಳ್ಳು


ವಿಡಿಯೋ ನೋಡಿ : Fact check: ಹಿಂದೂ ದೇವಾಲಯಗಳ ಹಣವನ್ನು ಬೇರೆ ಧರ್ಮದ ದೇವಾಲಯಗಳಿಗೆ ಬಳಸಲಾಗುತ್ತಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *