Fact Check | ಮೋಹನ್ ಭಾಗವತ್ ನೇತೃತ್ವದ ಆರ್‌ಎಸ್‌ಎಸ್ INDIA ಒಕ್ಕೂಟಕ್ಕೆ ಬೆಂಬಲ ನೀಡಿದೆ ಎಂಬುದು ಸುಳ್ಳು

“ಮೋಹನ್ ಭಾಗವತ್ ನೇತೃತ್ವದ ಆರ್‌ಎಸ್‌ಎಸ್ INDIA ಒಕ್ಕೂಟಕ್ಕೆ ತನ್ನ ಬೆಂಬಲ ನೀಡಿದೆ. ಆ ಮೂಲಕ ಬಿಜೆಪಿ ಸರ್ಕಾರಕ್ಕೆ ಬಹುದೊಡ್ಡ ಹೊಡೆತವನ್ನು ಆರ್‌ಎಸ್‌ಎಸ್ ನೀಡಿದೆ..” ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್‌ ಆಗುತ್ತಿದೆ. ಹಲವಾರು ಮಂದಿ ಇದನ್ನು  ಶೇರ್‌ ಕೂಡ ಮಾಡುತ್ತಿದ್ದು, ಇನ್ನೂ ಕೆಲವರು ಇದು ಸುಳ್ಳು ಸುದ್ದಿ. ಇದೊಂದು ನಕಲಿ ವಿಡಿಯೋ ಎಂದು ಕೂಡ ಪ್ರತಿಪಾದನೆ ಮಾಡುತ್ತಿದ್ದಾರೆ.

ಈ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇದು ನಕಲಿ ವಿಡಿಯೋ ಅಲ್ಲವೆಂಬುದು ಸ್ಪಷ್ಟವಾಗುತ್ತದೆ. ಹೀಗಾಗಿ ಸಾಕಷ್ಟು ಮಂದಿ ಇದು ನಿಜವೆ ಅಥವಾ ಸುಳ್ಳು ಸುದ್ದಿಯೇ ಎಂಬ ಗೊಂದಲದಲ್ಲಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳುತ್ತಿರುವ ಈ ವಿಡಿಯೋದ ಅಸಲಿಯತ್ತು ಏನು ಎಂಬುದನ್ನು ಈ ಅಂಕಣದಲ್ಲಿ ಸಂಪೂರ್ಣವಾಗಿ ಪರಿಶೀಲಿಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ವಿಡಿಯೋ ಕುರಿತು ಪರಿಶೀಲನೆ ನಡೆಸಲು ವಿಡಿಯೋವನ್ನು ವಿವಿಧ ಕೀ ಫ್ರೇಮ್‌ಗಳಾಗಿ ವಿಂಗಡಿಸಿ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲನೆ ನಡೆಸಲಾಯಿತು. ಆದಲೂ ಇದೇ ರೀತಿಯ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಕಂಡು ಬಂದಿದ್ದವು. ಇದೇ ಕಾರಣಕ್ಕೆ ಕೆಲವೊಂದು ಕೀ ವರ್ಡ್ಸ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಹುಡುಕಿದಾಗ ಕೆಲವು  ವರದಿಗಳು  ಕೂಡ ಇದೇ ಪ್ರತಿಪಾದನೆಯನ್ನು ಸೂಚಿಸಿದವು.

ಆದರೆ ವೈರಲ್ ಆಗುತ್ತಿರುವ ವಿಡಿಯೋದಲ್ಲಿರುವ ಆರೆಸ್ಸೆಸ್ ಹೆಸರಿನ ಸಂಘಟನೆಯು ನಡೆಸಿದ ಪತ್ರಿಕಾಗೋಷ್ಠಿ ಎಂಬುದು ನಿಜ. ಆದರೆ ಇದು 1925 ರಲ್ಲಿ ಕೇಶವ್ ಬಲಿರಾಮ್ ಹೆಡ್ಗೆವಾರ್ ಸ್ಥಾಪಿಸಿದ ಮತ್ತು ಪ್ರಸ್ತುತ ಮೋಹನ್ ಭಾಗವತ್ ನೇತೃತ್ವದ ಆರ್‌ಎಸ್‌ಎಸ್‌ ಅಲ್ಲ. ಜನಾರ್ದನ್ ಮೂನ್ ನೇತೃತ್ವದ ಆರ್‌ಎಸ್‌ಎಸ್ ಹೆಸರಿನ ವಿಭಿನ್ನ ಸಂಘಟನೆಯಾಗಿದೆ.

2017 ರಲ್ಲಿ ಜನಾರ್ದನ್ ಮೂನ್ ನೇತೃತ್ವದಲ್ಲಿ ಸ್ಥಾಪನೆಯಾದ ಈ ಸಂಘಟನೆಯು ಮೋಹನ್ ಭಾಗವತ್ ನೇತೃತ್ವದ ಆರ್‌ಎಸ್‌ಎಸ್‌ನೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ. ಇನ್ನು ಹೆಚ್ಚಿನ ಮಾಹಿತಿಗಾಗಿ ಸುದ್ದಿಗೋಷ್ಠಿ ನಡೆಸಿದ ಸಂಘಟನೆಯ ಲೋಗೋ ಮತ್ತು ಮೋಹನ್‌ ಭಾಗಾವತ್‌ ಅವರ ನೇತೃತ್ವದ ಆರ್‌ಎಸ್‌ಎಸ್‌ ಸಂಘಟನೆಯ ಲೋಗೋ ಸಂಪೂರ್ಣವಾಗಿ ಭಿನ್ನವಾಗಿರುವುದು ಪತ್ತೆಯಾಗಿದೆ. ಹಾಗಾಗಿ ವೈರಲ್ ಆಗುತ್ತಿರುವ ಪ್ರತಿಪಾದನೆ ಸುಳ್ಳಾಗಿದೆ.


ಇದನ್ನೂ ಓದಿ : Fact Check: ಏಪ್ರಿಲ್ 1ರಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಹೆಚ್ಚಾಗಲಿದೆ ಎನ್ನುವುದು ಸುಳ್ಳು


ಈ ವಿಡಿಯೋ ನೋಡಿ : Fact Check: ಏಪ್ರಿಲ್ 1ರಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಹೆಚ್ಚಾಗಲಿದೆ ಎನ್ನುವುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *