Fact Check: ರಾಹುಲ್ ಗಾಂಧಿ ವಿರುದ್ಧ ನವಜೋತ್ ಸಿಂಗ್ ಸಿಧು ಹೇಳಿಕೆ ನೀಡಿದ್ದು ಹಳೆಯ ವಿಡಿಯೋ

Rahul Gandhi

ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಈಗ ಕಾಂಗ್ರೆಸ್ ಪಕ್ಷದಲ್ಲಿ ಬಹುತೇಕ ನಾಯಕರು ಬಂಡಾಯವೆದ್ದು ಹಳೆಯ ಪಕ್ಷವಾದ ಕಾಂಗ್ರೆಸ್ ಅನ್ನು ತೊರೆಯುತ್ತಿದ್ದಾರೆ, ಮತ್ತು ಕಾಂಗ್ರೆಸ್‌ನ ನಾಯಕರಾದ ನವಜೋತ್ ಸಿಂಗ್ ಸಿಧು ಈಗ ಕಾಂಗ್ರೆಸ್ ಪಕ್ಷವನ್ನು ತೆರೆಯಲು ಮುಂದಾಗಿದ್ದಾರೆ ಎಂಬ ಬರಹವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.

ಇದರ ಜೊತೆಗೆ ಇತ್ತೀಚಿಗೆ “ಹೇ ರಾಹುಲ್ ಬಾಬಾ ರಾಷ್ಟ್ರೀಯತೆ ಮತ್ತು ದೇಶದ್ರೋಹದ ನಡುವಿನ ವ್ಯತ್ಯಾಸವನ್ನು ಶಾಲೆಗೆ ಹೋಗಿ ಕಲಿತುಕೊಂಡು ಬನ್ನಿ” ಎಂದು ನವಜೋತ್ ಸಿಂಗ್ ಸಿದ್ದು ರಾಹುಲ್ ಗಾಂಧಿ ಅವರ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂಬ ವಿಡಿಯೋ ಒಂದು ವೈರಲಾಗುತ್ತಿದೆ. ಈ ವಿಡಿಯೋ ಕುರಿತು ಸತ್ಯಾಸತ್ಯತೆಯನ್ನು ಈ ಅಂಕಣದಲ್ಲಿ ಪರಿಶೀಲನೆ ನಡೆಸೋಣ.

ಫ್ಯಾಕ್ಟ್‌ಚೆಕ್: ವ್ಯಾಪಕವಾಗಿ ವೈರಲಾಗುತ್ತಿರುವ ಈ ವಿಡಿಯೋವನ್ನು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಕೂಲಂಕುಶವಾಗಿ ಪರಿಶೀಲನೆ ನಡೆಸಿತು, ಈ ವೇಳೆ ಈ ವಿಡಿಯೋದಲ್ಲಿ ಇಂಡಿಯಾ ಟಿವಿ ಲೋಗೋ ಕಾಣಿಸಿಕೊಂಡಿತ್ತು ಹೀಗಾಗಿ ಕೆಲವೊಂದು ಕೀ ವರ್ಡ್ಸ್‌ಗಳನ್ನು ಬಳಸಿಕೊಂಡು ಗೂಗಲ್‌ನಲ್ಲಿ ಹುಡುಕಾಟವನ್ನು ನಡೆಸಿದವು.

ಇದೇ ಸಂದರ್ಭದಲ್ಲಿ ದಿನಾಂಕ 8 ಅಕ್ಟೋಬರ್ 2010ರಂದು ಇಂಡಿಯಾ ಟಿವಿ ಯೂಟ್ಯೂಬ್ ಚಾನೆಲ್ನಲ್ಲಿ ವಿಡಿಯೋ ಒಂದು ಕಾಣಿಸಿಕೊಂಡಿದ್ದು ಅದರಲ್ಲಿ “RSS Remark: Sidhu Asks Rahul To Go To School” ಎಂಬ ಶೀರ್ಷಿಕೆಯಡಿ 41 ಸೆಕೆಂಡ್ ಗಳ ವಿಡಿಯೋ ಒಂದನ್ನು ಹಂಚಿಕೊಳ್ಳಲಾಗಿತ್ತು. ಅದರಲ್ಲಿ 22 ಸೆಕೆಂಡನ ಅವಧಿಯಲ್ಲಿ ನವಜೋತ್ ಸಿಂಗ್ ಸಿಧು ರಾಹುಲ್ ಗಾಂಧಿಯವರನ್ನು ಅಣಕಿಸುವುದನ್ನು ಕಾಣಬಹುದಾಗಿದೆ.

Navjot Singh Siddhu

ಇನ್ನು ಈ ವಿಡಿಯೋದಲ್ಲಿನ ಡಿಸ್ಕ್ರಿಪ್ಶನ್ ಪ್ರಕಾರ ಕ್ರಿಕೆಟರ್ ನವಜೋತ್ ಸಿಂಗ್ ಸಿದ್ದು ರಾಜಕಾರಣಿಯಾಗಿ ಬದಲಾಗಿದ್ದು ,ಅವರು ಗುಜರಾತ್‌ನ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯ ಪ್ರಚಾರ ಕಾರ್ಯದಲ್ಲಿ ರಾಹುಲ್ ಗಾಂಧಿಯವರನ್ನು ಟೀಕಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಇನ್ನೂ ಇಂಡಿಯನ್ ಎಕ್ಸ್ಪ್ರೆಸ್ ಕೂಡ ಈ ಕುರಿತು ವರದಿಯನ್ನು ಮಾಡಿದ್ದು ಅದರಲ್ಲಿ ರಾಹುಲ್ ಗಾಂಧಿ ಅವರು ನಿಷೇಧಿತ ಭಾರತೀಯ ಮುಸಲ್ಮಾನ ವಿದ್ಯಾರ್ಥಿ ಚಳುವಳಿ ಸಂಘಟನೆ ಹಾಗೂ ಆರ್ ಎಸ್ ಎಸ್ ಒಂದೇ ಎಂದು ಹೇಳಿದ್ದರ ವಿರುದ್ಧ ನವಜೊತೆ ಸಿದ್ದು ಅವರು ಈ ಹೇಳಿಕೆಯನ್ನು ನೀಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ 2010 ರಲ್ಲಿ ನವಜತ್ ಸಿಂಗ್ ಸಿದ್ದು ರಾಹುಲ್ ಗಾಂಧಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು ನಿಜ ಆದರೆ ಅದು ಇತ್ತೀಚಿಗೆ ಎಂಬುದು ಸುಳ್ಳಾಗಿದೆ.


ಇದನ್ನು ಓದಿ: Fact Check: ಹಿಂದೂ ಧರ್ಮ ಬೋಧಿಸದಂತೆ ಕಾಂಗ್ರೆಸ್ ತಡೆಹಿಡಿದಿದೆ ಎಂಬುದು ಸುಳ್ಳು


ವಿಡಿಯೋ ನೋಡಿ: ಮಣಿಪುರದಲ್ಲಿ ಬಿಜೆಪಿ ನಾಯಕರನ್ನು ಥಳಿಸಲಾಗಿದೆ ಎಂದು ಡಾರ್ಜಿಲಿಂಗ್‌ನ ಹಳೆಯ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ | Manipur


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *