ಇತ್ತೀಚೆಗೆ, ಅಜಂಗಢದ ಬಿಜೆಪಿ ಸಂಸದ ದಿನೇಶ್ ಲಾಲ್ ಯಾದವ್ ನಿರಾಹುವಾ ಅವರು ‘ದೇಶದಲ್ಲಿ ನಿರುದ್ಯೋಗ ಹೆಚ್ಚಾಗದಿರಲು ಮೋದಿಜಿ-ಯೋಗಿ ಒಂದೇ ಒಂದು ಮಗುವಿಗೆ ಜನ್ಮ ನೀಡಲಿಲ್ಲ’ ಎಂದಿದ್ದಾರೆ ಎಂಬ ಹೇಳಿಕೆಯ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ಹರಿದಾಡುತ್ತಿದ್ದು ತೀವ್ರ ಟೀಕೆಗೆ ಗುರಿಯಾಗುತ್ತಿದ್ದಾರೆ.
ಆದರೆ ಈಗ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು ” ಈ ವಿಡಿಯೋ ನಕಲಿ(ಡೀಪ್ ಫೇಕ್). ಕಾಂಗ್ರೆಸ್, ಸಂಸದರಂತೆ, ಜನರನ್ನು ದಾರಿತಪ್ಪಿಸಲು, ಅಶಾಂತಿಯನ್ನು ಸೃಷ್ಟಿಸಲು ಮತ್ತು ಸಮಾಜದಲ್ಲಿ ಒಡಕುಗಳನ್ನು ಬಿತ್ತಲು ಡೀಪ್‌ಫೇಕ್‌ಗಳನ್ನು ಬಳಸುತ್ತಿದೆ. ಅಜಂಗಢದ ಬಿಜೆಪಿ ಸಂಸದ ದಿನೇಶ್ ಲಾಲ್ ಯಾದವ್ ಅವರು ಐವೈಸಿ ಅಧ್ಯಕ್ಷರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ” ಎಂದಿದ್ದಾರೆ. ಮತ್ತು ಡೀಪ್ ಫೇಕ್ ವಿಡಿಯೋವನ್ನು ಕಾಂಗ್ರೆಸ್ ಹಂಚಿಕೊಂಡಿದೆ ಎಂದು ಆರೋಪಿಸಿದ್ದಾರೆ.
ಫ್ಯಾಕ್ಟ್‌ಚೆಕ್: ಇದು ಡೀಫ್ ಪೇಕ್ ವಿಡಿಯೋ ಅಲ್ಲ. ಮೂಲ ದೀರ್ಘ ಆವೃತ್ತಿಯನ್ನು ಏಪ್ರಿಲ್ 13, 2024 ರಂದು ಸ್ಥಳೀಯ ಹಿಂದಿ ಚಾನೆಲ್ ಸೋಲ್ ಅಪ್ ಹಿಂದಿಯಲ್ಲಿ ಅಪ್‌ಲೋಡ್ ಮಾಡಲಾಗಿದೆ. “ನಿರುದ್ಯೋಗದ ಬಗ್ಗೆ ಪ್ರಶ್ನಿಸಿದ ನಂತರ ಕೋಪಗೊಂಡ ದಿನೇಶ್ ಲಾಲ್ ಯಾದವ್ ಯೋಗಿ ಮತ್ತು ಮೋದಿಯಂತೆ ಮಕ್ಕಳಿಗೆ ಜನ್ಮ ನೀಡಬೇಡಿ ಎಂದು ಹೇಳಿದರು ಎಂದು ಶೀರ್ಷಿಕೆ ನೀಡಲಾಗಿದೆ.
ದೀರ್ಘ ಆವೃತ್ತಿಯಲ್ಲಿ, ವರದಿಗಾರ ಯಾದವ್ ಅವರನ್ನು ಕೇಳುತ್ತಾನೆ, “ಯುವಕರಿಗೆ, ವಿಶೇಷವಾಗಿ ಸರ್ಕಾರಿ ಉದ್ಯೋಗವನ್ನು ಸೃಷ್ಟಿಸಲಾಗುತ್ತದೆಯೇ?” ಸರ್ಕಾರಿ ಉದ್ಯೋಗಗಳ ಸಂಖ್ಯೆಯನ್ನು ಕೇಳುವ ಮೂಲಕ ಯಾದವ್ ವರದಿಗಾರರಿಗೆ ಪ್ರತಿಯಾಗಿ, ಉದ್ಯೋಗ ನೀಡಲು 80 ಲಕ್ಷ ಉದ್ಯೋಗಗಳು ಸಾಕಾಗುವುದಿಲ್ಲ ಎಂದು, ನಂತರ ಸರ್ಕಾರದ ಯೋಜನೆಗಳ ಕುರಿತು ಮಾತನಾಡಿದ ಅವರು, ಪ್ರಧಾನಿಯಾಗಿ ಮೋದಿಯವರು ಸ್ವಾನಿಧಿ ಯೋಜನೆ, ವಿಶ್ವಕರ್ಮ ಯೋಜನೆ, ಕೃಷಿ ಯೋಜನೆ ಮುಂತಾದ ವಿವಿಧ ಯೋಜನೆಗಳ ಮೂಲಕ ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಯಾದವ್ ನಂತರ ಜನಸಂಖ್ಯೆ ಮತ್ತು ನಿರುದ್ಯೋಗದ ನಡುವಿನ ಸ್ಪಷ್ಟವಾದ ಸಂಬಂಧದ ಬಗ್ಗೆ ವಿವರವಾದ ವಿವರಣೆಯನ್ನು ನೀಡಿದರು.
“ಈ ದೇಶದಲ್ಲಿ ನಿರುದ್ಯೋಗ ಹೆಚ್ಚುತ್ತಿದೆ ಎಂದು ಹೇಳುತ್ತಿರುವವರು, ಅವರಿಗೆ ನಿರ್ದಿಷ್ಟ ಸಂಖ್ಯೆಯ (ಜನರಿಗೆ) ಮಾತ್ರ ಉದ್ಯೋಗವನ್ನು ಒದಗಿಸಬಹುದು ಎಂದಿದ್ದಾರೆ. ಈಗ ಮಿತಿಗಿಂತ ಜನಸಂಖ್ಯೆ ಹೆಚ್ಚಾಗುತ್ತಿದೆ, ಇದು ನಿರುದ್ಯೋಗಕ್ಕೆ ಕಾರಣವಾಗುತ್ತಿದೆ, ಇದನ್ನು ತಡೆಯುವ ಪ್ರಯತ್ನವನ್ನು ಮೋದಿ ಮತ್ತು ಸರ್ಕಾರ ಮಾಡುತ್ತಿದೆ. ಕಡಿಮೆ ಮಕ್ಕಳಾಗಲಿ, ಇಬ್ಬರೇ ಮಕ್ಕಳಾಗಲಿ ಎಂಬ ಕಾನೂನನ್ನು ತರಲು ಅವರು ಪ್ರಯತ್ನಿಸುತ್ತಿರುವಾಗ, ನೀವೇ ನಿರುದ್ಯೋಗಿ ಎಂದು ಹೇಳುತ್ತಿದ್ದೀರಿ ಮತ್ತು ನಂತರ ನೀವು ಇನ್ನೂ ಎಂಟು ನಿರುದ್ಯೋಗಿಗಳಿಗೆ ಜನ್ಮ ನೀಡುತ್ತಿದ್ದೀರಿ. ಏಕೆ? ನಿಮಗೆ ಸಾಧ್ಯವಾಗುತ್ತಿಲ್ಲ. ನೀವೇ ತಿನ್ನಲು… ನೀವು ನಿರುದ್ಯೋಗಿ ಎಂದು ಹೇಳುತ್ತಿದ್ದೀರಿ (ಹಾಗಾದರೆ) ನೀವು ಹೆಚ್ಚು ನಿರುದ್ಯೋಗಿಗಳಿಗೆ (ಜನರಿಗೆ) ಜನ್ಮ ನೀಡುತ್ತಿರುವಿರಿ ಎಂದು ನೀವು ಒಂದು ಸೆಕೆಂಡ್ ಯೋಚಿಸುತ್ತೀರಾ.” ಎಂದು ವರದಿಗಾರರನ್ನೇ ಮರು ಪ್ರಶ್ನೆ ಮಾಡಿದ್ದಾರೆ.
“ಮೋದಿ ಇದನ್ನು ನಿಲ್ಲಿಸಿದ್ದಾರೆ. ಮೋದಿಗೆ ಒಂದು ಮಗು ಇದೆಯೇ? ದಯವಿಟ್ಟು ಹೇಳಿ. ಯೋಗಿಗೆ ಒಂದು ಮಗು ಇದೆಯೇ? ಹಾಗಾದರೆ (ಇದರರ್ಥ) ಯೋಗಿ ಮತ್ತು ಮೋದಿ ನಿರುದ್ಯೋಗವನ್ನು ನಿಲ್ಲಿಸಿದ್ದಾರೆ. ನಾವು ನಿರುದ್ಯೋಗವನ್ನು ಹೆಚ್ಚಿಸುವುದಿಲ್ಲ. ಹಾಗಾದರೆ ನಿರುದ್ಯೋಗವನ್ನು ಹೆಚ್ಚಿಸುವವರು ಯಾರು? ಮಕ್ಕಳ ನಂತರ ಮಕ್ಕಳನ್ನು ಹೊಂದುವವರು ಮತ್ತು ಸರ್ಕಾರವು ಅವರನ್ನು ನಿಲ್ಲಿಸಲು ಕೇಳಿದಾಗಲೂ ಅವರು ನಿರಾಕರಿಸುತ್ತಾರೆ.” ಎಂದು ಜನಸಂಖ್ಯಾ ನಿಯಂತ್ರಣ ಮಾಡದೇ ಇರುವುದು ನಿರುದ್ಯೋಗಕ್ಕೆ ಕಾರಣ ಎಂದಿದ್ದಾರೆ.
ಇಷ್ಟಲ್ಲದೆ ನಾವು ಈ ವಿಡಿಯೋ ಡೀಪ್‌ಫೇಕ್ ಎಂದು ತಿಳಿಯಲು ಹೆಚ್ಚುವರಿಯಾಗಿ, ಐಐಟಿ ಜೋಧ್‌ಪುರದಿಂದ ರಚಿಸಲಾದ ಡೀಪ್‌ಫೇಕ್ ವಿಶ್ಲೇಷಣಾ ಸಾಧನವಾದ ಇಟಿಸಾರ್ ಮೂಲಕ 2.58 ಸೆಕೆಂಡ್‌ಗಳ ದೀರ್ಘ ಕ್ಲಿಪ್ ಅನ್ನು ರನ್ ಮಾಡಿದಾಗ, ಈ ವೀಡಿಯೊ ಡೀಪ್‌ಫೇಕ್ ಅಲ್ಲ, ನೈಜವಾಗಿದೆ ಎಂದು ತಿಳಿದು ಬಂದಿದೆ.
ಆದ್ದರಿಂದ ನಿರುದ್ಯೋಗ ತಪ್ಪಿಸಲು ಮಕ್ಕಳು ಕಡಿಮೆ ಮಾಡಿಕೊಳ್ಳಿ ಎಂಬ ಅರ್ಥದಲ್ಲಿ ಬಿಜೆಪಿ ಸಂಸದ ದಿನೇಶ್ ಲಾಲ್ ಯಾದವ್ ಮಾತನಾಡುವಾಗ ಮೋದಿ ಮತ್ತು ಯೋಗಿಯವರಂತೆ ಮಕ್ಕಳು ಮಾಡಿಕೊಳ್ಳಬೇಡಿ ಎಂದಿರುವುದು ನಿಜ. ಅಮಿತ್ ಮಾಳವೀಯ ಅವರ ಪ್ರತಿಪಾದನೆ ಸುಳ್ಳಾಗಿದೆ.
ವಿಡಿಯೋ ನೋಡಿ: ಗಿಳಿ ಕೂಡಿ ಹಾಕಿದಕ್ಕೆ ಶಾಸ್ತ್ರ ಹೇಳುವವರ ಬಂಧಿಸಲಾಗಿದೆಯೇ ಹೊರತು BJP ಗೆಲ್ಲುತ್ತದೆ ಎಂದಿದ್ದಕ್ಕೆ ಅಲ್ಲ
ನಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ