Fact Check: RSSನಿಂದ ಮಾತ್ರವೇ ಸಂವಿಧಾನ ಬದಲಾವಣೆ ಸಾಧ್ಯ ಎಂದು ಎಸ್. ಬಾಲರಾಜ್ ಹೇಳಿಲ್ಲ

ಸಂವಿಧಾನ

ಇತ್ತೀಚೆಗೆ ನಕಲಿ ಪತ್ರಿಕಾ ವರದಿಗಳನ್ನು ಸೃಷ್ಟಿಸಿ ರಾಜಕೀಯ ನಾಯಕರ ಮೇಲೆ ಕೆಟ್ಟ ಹೆಸರು ತರುವಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಕೆಲವು ದಿನಗಳ ಹಿಂದೆಯಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು “ನಮಗೆ ಹಿಂದುಗಳ ಅಗತ್ಯವಿಲ್ಲ” ಎಂದಿದ್ದಾರೆ ಎಂಬ ಸುದ್ದಿಯೊಂದನ್ನು ಹಂಚಿಕೊಳ್ಳಲಾಗುತ್ತಿತ್ತು. ನಂತರ ಇದು ನಕಲಿ ಎಂದು ತಿಳಿದ ಮೇಲೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈಗ, “ದೇಶಪ್ರೇಮಿ ಆರ್ ಎಸ್ ಎಸ್ ನಿಂದ ಮಾತ್ರವೇ ಸಂವಿಧಾನ ಬದಲಾವಣೆ ಸಾಧ್ಯ : ಎಸ್ ಬಾಲರಾಜ್ ಅಭಿಮತ” ಎಂಬ ಹೊಸದಿಗಂತ ಪತ್ರಿಕೆಯ ವರದಿಯೊಂದನ್ನು ಈಗ ಹಂಚಿಕೊಳ್ಳಲಾಗುತ್ತಿದೆ.

ಫ್ಯಾಕ್ಟ್‌ಚೆಕ್: ಈ ವರದಿ ನಕಲಿ ಆಗಿದೆ. ಮಾಜಿ ಶಾಸಕ ಮತ್ತು  ಚಾಮರಾಜನಗರ ಬಿಜೆಪಿ ಅಭ್ಯರ್ಥಿ ಎಸ್ ಬಾಲರಾಜ್ ಅವರು ಸಂವಿಧಾನ ಬದಲಾವಣೆ ಮತ್ತು ಮೀಸಲಾತಿ ಕುರಿತಂತೆ ಹೇಳಿಕೆ ನೀಡಿರುವುದನ್ನು ಯಾವುದೇ ಮಾಧ್ಯಮಗಳು ವರದಿ ಮಾಡಿಲ್ಲ. ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಎಸ್‌. ಬಾಲರಾಜ್ ಮಾಡಿರುವ ಭಾಷಣವನ್ನು ಸಂಪೂರ್ಣ ತಪ್ಪು ಮಾಹಿತಿಗಳೊಂದಿಗೆ ನಕಲಿ ವರದಿ ತಯಾರಿಸಿ ಹಂಚಿಕೊಳ್ಳಲಾಗಿದೆ.

ಎಸ್.ಬಾಲರಾಜ್ ಅವರು ಗುಂಡ್ಲುಪೇಟೆ ತಾಲೂಕಿನ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಈ ದೇಶಕ್ಕೆ ಮೋದಿಯವರು ಅನಿವಾರ್ಯ ಎಂಬುದು ಕಟ್ಟೆಕಡೆಯ ಗ್ರಾಮದ ವ್ಯಕ್ತಿಗೆ ಅರಿವಿದೆ. ಸೋಲಿಗ ಜನಾಂಗದ ವ್ಯಕ್ತಿ ಮೋದಿಯವರನ್ನು ನೆನೆಸಿಕೊಳ್ಳುತ್ತಾರೆ. ನಾನು ಯಾವುದೇ ಊರಿಗೆ ಹೋದರು ಅಲ್ಲಿನ ಜನರು ಮೋದಿ ಬಗ್ಗೆ ಮಾತನಾಡುತ್ತಾರೆ. ಹೀಗಾಗಿ ಮೋದಿಯವರ ವರ್ಚಸ್ಸು ನಮ್ಮ ಗೆಲುವನ್ನು ಸುಲಭ ಮಾಡಿಕೊಟ್ಟಿದೆ.” ಎಂದಿದ್ದಾರೆ ಎಂದು ಪಂಚಾಯತ್ ನ್ಯೂಸ್ ವರದಿಯಲ್ಲಿ ತಿಳಿಸಿದೆ.

ತಮ್ಮ ಭಾಷಣದಲ್ಲಿ ಎಲ್ಲಿಯೂ ಸಂವಿಧಾನ ಬದಲಾವಣೆಯ ಬಗ್ಗೆ ಬಾಲರಾಜ್ ಅವರು ಮಾತನಾಡಿಲ್ಲ. ಯಾರೋ ಕೆಲವು ಕಿಡಿಗೇಡಿಗಳು ಬೇಕಂತಲೇ ಈ ರೀತಿಯ ನಕಲಿ ವರದಿ ಸೃಷ್ಟಿಸಿ ಹರಿಬಿಟ್ಟಿದ್ದಾರೆ.


ಇದನ್ನು ಓದಿ: Fact Check | ಬಿಜೆಪಿ ನಾಯಕನ ಮೇಲೆ ಡಿಎಂಕೆ ಸದಸ್ಯರು ಹಲ್ಲೆ ಮಾಡಿದ್ದಾರೆ ಎಂಬುದು ಸುಳ್ಳು


ವಿಡಿಯೋ ನೋಡಿ: ಗಿಳಿ ಕೂಡಿ ಹಾಕಿದಕ್ಕೆ ಶಾಸ್ತ್ರ ಹೇಳುವವರ ಬಂಧಿಸಲಾಗಿದೆಯೇ ಹೊರತು BJP ಗೆಲ್ಲುತ್ತದೆ ಎಂದಿದ್ದಕ್ಕೆ ಅಲ್ಲ


ನಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *