Fact Check | ರಾಹುಲ್‌ ಗಾಂಧಿ ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ವಿಡಿಯೋ ಎಡಿಟೆಡ್‌ ಆಗಿದೆ

“2024 ರ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ರಾಹುಲ್ ಗಾಂಧಿ ಅವರು ಕಾಂಗ್ರೆಸ್‌ಗೆ ರಾಜೀನಾಮೆಯನ್ನು ಘೋಷಿಸಿದ್ದಾರೆ, ಈ ವಿಡಿಯೋ ನೋಡಿ ” ಎಂದು ರಾಹುಲ್‌ ಗಾಂಧಿ ಕಾಂಗ್ರೆಸ್‌ ಪಕ್ಷಕ್ಕೆ ರಾಜಿನಾಮೆ ನಡುವ ರೀತಿಯಲ್ಲಿ ವಿಡಿಯೋವೊಂದು ಕಂಡು ಬಂದಿದೆ. ಇದನ್ನು ಕಂಡ ಬಹುತೇಕರು ಅಚ್ಚರಿಯನ್ನು ವ್ಯಕ್ತಿ ಪಡಿಸಿದ್ದರೆ, ಇನ್ನೂ ಕೆಲವರು ಇದೊಂದು ನಕಲಿ ವಿಡಿಯೋ ಎನ್ನುತ್ತಿದ್ದಾರೆ.

ಇನ್ನು ವೈರಲ್‌ ವಿಡಿಯೋದಲ್ಲಿ ‘ನಾನು ರಾಹುಲ್ ಗಾಂಧಿ.. ನಾನು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ನಾನು ಚುನಾವಣೆಗೋಸ್ಕರ ಹಿಂದೂ ಆಗಿ ಬೇಸತ್ತಿದ್ದೇನೆ. ನಾನು ಅನ್ಯಾಯ ಯಾತ್ರೆ ಮಾಡಿದೆ. ಪಕ್ಷದ ಪ್ರಣಾಳಿಕೆ ಕೂಡಾ ಬಿಡುಗಡೆ ಮಾಡಿದೆ. ಆದರೆ, ಮೋದಿ ಅವರು ಭ್ರಷ್ಟರನ್ನು ಜೈಲಿಗೆ ಕಳಿಸೋದ್ರಲ್ಲಿ ನಿರತರಾಗಿದ್ದಾರೆ. ‘ಮೋದಿ ಅವರ ನಾಯಕತ್ವದಲ್ಲಿ ಭ್ರಷ್ಟರನ್ನು ನಿರಂತರವಾಗಿ ಜೈಲಿಗೆ ಕಳಿಸುತ್ತಿದ್ದಾರೆ. ಹೀಗಾಗಿ, ನಾನು ಇಟಲಿಯಲ್ಲಿ ಇರುವ ನಮ್ಮ ಅಜ್ಜಿಯ ಮನೆಗೆ ಹೋಗುತ್ತಿದ್ದೇನೆ’

ಸುಳ್ಳು ಬರಹದೊಂದಿಗೆ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ
ಸುಳ್ಳು ಬರಹದೊಂದಿಗೆ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ

ಫ್ಯಾಕ್ಟ್‌ಚೆಕ್‌

ಈ ವಿಡಿಯೋದ ತುಣುಕನ್ನು ಗೂಗಲ್ ರಿವರ್ಸ್‌ ಇಮೇಜ್ ಸರ್ಚ್ ಬಳಸಿ ಹುಡುಕಾಟ ನಡೆಸಿದಾಗ ಈ ಸನ್ನಿವೇಶದ ಅಸಲಿ ವಿಡಿಯೋ ಪತ್ತೆಯಾಯ್ತು. ದಿ ಹಿಂದೂ ಪತ್ರಿಕೆ ಈ ವಿಡಿಯೋ ಪ್ರಕಟಿಸಿತ್ತು. 2024ರ ಏಪ್ರಿಲ್ 3 ರಂದು ಈ ವಿಡಿಯೋ ಪ್ರಕಟವಾಗಿತ್ತು. ಈ ವಿಡಿಯೋದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ ಎಂಬ ವಿವರ ಇತ್ತು. ವಯನಾಡು ಜಿಲ್ಲಾಧಿಕಾರಿ ರೇಣು ರಾಜ್ ಅವರಿಗೆ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ ಎಂದು ವಿವರ ನೀಡಲಾಗಿತ್ತು.

ಮತ್ತಷ್ಟು ಮಾಹಿತಿಗಾಗಿ ಕಾಂಗ್ರೆಸ್‌ನ ಅಧಿಕೃತ ಯೂಟ್ಯೂಬ್‌ ಚಾನಲ್‌ಅನ್ನು ಸರ್ಚ್ ಮಾಡಿದಾಗ, ಏಪ್ರಿಲ್ 3 ರಂದು ಅಪ್‌ಲೋಡ್ ಮಾಡಿದ ವಿಡಿಯೋ ಲಭ್ಯವಾಗಿದೆ. ಇದರಲ್ಲಿ ರಾಹುಲ್ ಗಾಂಧಿ ಅವರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ ಎಂದು ವಿವರ ನೀಡಲಾಗಿತ್ತು. ಈ ವಿಡಿಯೋಗೆ ‘ವಯನಾಡ್‌ನಿಂದ ರಾಹುಲ್ ಗಾಂಧಿ ನಾಮಪತ್ರ’ ಎಂದು ಶೀರ್ಷಿಕೆ ನೀಡಲಾಗಿದೆ.

ಈ ವಿಡಿಯೋದಲ್ಲಿ ರಾಹುಲ್ ಗಾಂಧಿ ಅವರು ಮಾತನಾಡುವ ಆಡಿಯೋ ಕೂಡಾ ಇದೆ. ‘ನಾನು ರಾಹುಲ್ ಗಾಂಧಿ. ವಯನಾಡ್‌ನಿಂದ ನಾಮಪತ್ರ ಸಲ್ಲಿಕೆ ಮಾಡುತ್ತಿದ್ದೇನೆ. ಭಾರತದ ಸಂವಿಧಾನದ ಮೇಲೆ ನಂಬಿಕೆ ಹೊಂದಿದ್ದು. ಈ ನೆಲದ ಕಾನೂನು ಹಾಗೂ ದೇಶದ ಸಾರ್ವಭೌಮತೆ ಎತ್ತಿ ಹಿಡಿಯುವ ಕೆಲಸ ಮಾಡುತ್ತೇನೆ’ ಎಂದು ಹೇಳುತ್ತಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ರಾಹುಲ್ ಗಾಂಧಿ ಕಾಂಗ್ರೆಸ್‌ ಪಕ್ಷಕ್ಕೆ ರಾಜಿನಾಮೆ ನೀಡಿದ್ದೇ ಆಗಿದ್ದರೆ ರಾಷ್ಟ್ರ ಮಟ್ಟದ ಸುದ್ದಿಯಾಗಿ ಪ್ರಸಾರವಾಗುತ್ತಿತ್ತು. ಆದರೆ ಅಂತಹ ಯಾವ ವರದಿಗಳನ್ನು ಕೂಡ ಯಾವುದೇ ಮಾಧ್ಯಮಗಳು ಮಾಡಿಲ್ಲ. ಹಾಗೂ ವೈರಲ್‌ ವಿಡಿಯೋವನ್ನು AI ಧ್ವನಿ ಬಳಸಿ ವಿಡಿಯೋವನ್ನು ತಿರುಚಿ ಸುಳ್ಳು ಸುದ್ದಿಯನ್ನು ಹರಡಲಾಗುತ್ತಿದೆ.


ಇದನ್ನೂ ಓದಿ : Fact Check: ಇದು ಅಲ್ಲಾ ವರ್ಸಸ್ ರಾಮನ ಚುನಾವಣೆ ಎಂದು ಸುಧೀರ್ ಕುಮಾರ್ ಮುರೋಳಿ ಹೇಳಿದ್ದಾರೆ ಎಂಬುದು ಎಡಿಟೆಡ್ ವಿಡಿಯೋ


ವಿಡಿಯೋ ನೋಡಿ : Fact Check: ಇದು ಅಲ್ಲಾ ವರ್ಸಸ್ ರಾಮನ ಚುನಾವಣೆ ಎಂದು ಸುಧೀರ್ ಕುಮಾರ್ ಮುರೋಳಿ ಹೇಳಿದ್ದಾರೆ ಎಂಬುದು ಎಡಿಟೆಡ್ ವಿಡಿಯೋ


ನಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *