ಬಿಜೆಪಿ ಸೋಲಿಸಲು ದುಬೈನಿಂದ ಲಕ್ಷಾಂತರ ಮುಸ್ಲಿಮರು ಆಗಮಿಸಿದ್ದಾರೆ, ಅವರಿಗೆ ವಿಮಾನ ವ್ಯವಸ್ಥೆ ಮಾಡಲಾಗಿದೆ ಎಂಬುದು ಸಂಪೂರ್ಣ ಸುಳ್ಳು

ಬಿಜೆಪಿ

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಏಕಮೇವ ಅಸ್ತ್ರವಾಗಿ ಬಳಸುತ್ತಿರುವುದು ಮುಸ್ಲಿಂ ದ್ವೇಷವಾಗಿದೆ. ಪ್ರತಿನಿತ್ಯ ಮುಸ್ಲಿಂ ಸಮುದಾಯಕ್ಕೆ ಸಂಬಂಧಿಸಿದಂತೆ ಹತ್ತಾರು ಸುಳ್ಳು ಸುದ್ದಿಗಳನ್ನು ಹರಿಬಿಟ್ಟು ಹಿಂದುಗಳಲ್ಲಿ ಮುಸ್ಲಿಂ ಸಮುದಾಯದ ಕುರಿತು ಭಯ ಮತ್ತು ದ್ವೇಷವನ್ನು ಸೃಷ್ಟಿಸಲಾಗುತ್ತಿದೆ.

ಈಗ, ನರೇಂದ್ರ ಮೋದಿ ಮತ್ತು ಬಿಜೆಪಿ ಸೋಲಿಸಲು ದುಬೈನಿಂದ ಮುಸ್ಲಿಮರು ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಅವರಿಗೆ ವಿಮಾನ ವ್ಯವಸ್ಥೆ ಮಾಡಲಾಗಿದೆ. ಎಂಬ ವಿಡಿಯೋ ಒಂದನ್ನು ಎಲ್ಲೆಡೆ ಹಂಚಿಕೊಳ್ಳಲಾಗುತ್ತಿದೆ. ಇದರಲ್ಲಿ ಕೇರಳದ ಅನಿವಾಸಿ ಮುಸ್ಲಿಮರು ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಭಾರತಕ್ಕೆ ಬಂದಿರುವುದನ್ನು ನೋಡಬಹುದು.

 

ಫ್ಯಾಕ್ಟ್‌ಚೆಕ್: ಕಳೆದ ವಾರ ತೀವ್ರ ಪ್ರವಾಹದಿಂದಾಗಿ UAE ಮತ್ತು ಇತರ ಗಲ್ಫ್ ರಾಷ್ಟ್ರಗಳಿಂದ ಅನೇಕ ವಿಮಾನಗಳು ರದ್ದುಗೊಂಡಿದ್ದವು. ಇದ್ದ ಕೆಲವೇ ಕೆಲವು ವಿಮಾನಗಳ ಬೆಲೆ ದುಬಾರಿಯಾಗಿತ್ತು. ಹಾಗಾಗಿ ಅಲ್ಲಿ ನೆಲೆಸಿರುವ ಅನಿವಾಸಿ ಕೇರಳಿಗರು ಈ ಚುನಾವಣೆಯಲ್ಲಿ ಮತ ಚಲಾಯಿಸಲು ಮೂರು ವಿಮಾನಗಳ ವ್ಯವಸ್ಥೆ ಮಾಡಲಾಗಿದೆ. “ಅನಿವಾಸಿ ಮತದಾರರು ಹೆಚ್ಚಾಗಿ ಉತ್ತರ ಕೇರಳಕ್ಕೆ ಆಗಮಿಸುತ್ತಾರೆ. ಯುಎಇ ಮತ್ತು ಸೌದಿ ಅರೇಬಿಯಾದಿಂದ ತಲಾ 10,000 ವಲಸಿಗ ಮತದಾರರನ್ನು ಮನೆಗೆ ಕರೆತರುವ ಗುರಿಯನ್ನು ಸಂಸ್ಥೆ ಹೊಂದಿದೆ” ಎಂದು ಗ್ಲೋಬಲ್ ಕೆಎಂಸಿಸಿ ಅಧ್ಯಕ್ಷ ಇಪಿ ಉಬೈದುಲ್ಲಾ ಹೇಳಿದ್ದಾರೆ ಎಂದು ಆನ್‌ಮನೋರಮ ಸುದ್ಧಿ ಮಾಧ್ಯಮ ತನ್ನ ವರದಿಯಲ್ಲಿ ತಿಳಿಸಿದೆ.

ಕಳೆದ ಶುಕ್ರವಾರದಿಂದ ಜಿಸಿಸಿ ದೇಶಗಳಿಂದ ಕೇರಳಕ್ಕೆ ಬಹುತೇಕ ವಿಮಾನ ಸೇವೆಗಳನ್ನು ಮತದಾರರು ಸಂಪೂರ್ಣವಾಗಿ ಬುಕ್ ಮಾಡಿದ್ದಾರೆ. ಈ ಮಧ್ಯೆ, ರಾಜಕೀಯ ಪಕ್ಷಗಳೊಂದಿಗೆ ಸಂಯೋಜಿತವಾಗಿರುವ ವಿವಿಧ ವಲಸಿಗ ಸಂಸ್ಥೆಗಳು ವಿದೇಶೀ ಮತದಾರರಿಗೆ ಕೈಗೆಟುಕುವ ದರದಲ್ಲಿ ವಿಮಾನ ಟಿಕೆಟ್‌ಗಳನ್ನು ಕಾಯ್ದಿರಿಸಲು ಟ್ರಾವೆಲ್ ಏಜೆನ್ಸಿಗಳೊಂದಿಗೆ ಪಾಲುದಾರಿಕೆ ಮಾಡಿಕೊಂಡಿವೆ. ಟಿಕೆಟ್‌ಗಳು ಸರಾಸರಿ 8500 ರೂ.ಗೆ ಮಾರಾಟವಾಗಿವೆ.

ಕೆಎಂಸಿಸಿ ಏಪ್ರಿಲ್ 7 ರಂದು ಜೆಡ್ಡಾದಿಂದ ಕೇರಳಕ್ಕೆ 190 ಮತದಾರರನ್ನು ಕರೆತರುವಲ್ಲಿ ಯಶಸ್ವಿಯಾಗಿದೆ. ಕುತೂಹಲಕಾರಿಯಾಗಿ, ಕೋಝಿಕ್ಕೋಡ್ ಜಿಲ್ಲೆಯೊಂದರಲ್ಲೇ 35,793 ವಿದೇಶೀ ಮತದಾರರಿದ್ದಾರೆ. ಅನಧಿಕೃತ ಅಂಕಿಅಂಶಗಳ ಪ್ರಕಾರ, ಅವರಲ್ಲಿ 14,827 ವಡಕರ ಕ್ಷೇತ್ರದಲ್ಲಿ ನೋಂದಾಯಿತ ಮತದಾರರು, 17,424 ಕೋಝಿಕ್ಕೋಡ್ ಮತ್ತು 3542 ವಯನಾಡ್ ಕ್ಷೇತ್ರದಲ್ಲಿ ಮತ ಚಲಾಯಿಸಲಿದ್ದಾರೆ. ಏತನ್ಮಧ್ಯೆ, ಪಾಲಕ್ಕಾಡ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪಟ್ಟಾಂಬಿಯಲ್ಲಿ 10,000 ಮತ್ತು ಮನ್ನಾರ್ಕಾಡ್ ಪ್ರದೇಶಗಳಲ್ಲಿ 8800 ವಲಸಿಗ ಮತದಾರರಿದ್ದಾರೆ. ವಯನಾಡು ಜಿಲ್ಲೆಯಲ್ಲಿ ಸುಮಾರು ಹದಿನೈದು ಸಾವಿರ ವಿದೇಶೀ ಮತದಾರರಿದ್ದಾರೆ. ಕಣ್ಣೂರು ಲೋಕಸಭಾ ಕ್ಷೇತ್ರದಲ್ಲಿ 7035 ಅನಿವಾಸಿ ಮತದಾರರು ನೋಂದಣಿಯಾಗಿದ್ದಾರೆ. 

ಆಗಾಗಿ ಇರುವ ಸಾವಿರಾರು ಮತದಾರರನ್ನು ವಿದೇಶದಿಂದ ಕರೆಸಿಕೊಳ್ಳಲು ಸಾಧ್ಯವಿಲ್ಲ. ಕೇವಲ ಆರ್ಥಿಕವಾಗಿ ಅನುಕೂಲ ಇರುವವರು ಮಾತ್ರ ವಿದೇಶದಿಂದ ಬಂದು ಮತ ಚಲಾಯಿಸುವವರಿದ್ದಾರೆ. ಇನ್ನೂ ಸಾವಿರಾರು ಮತದಾರರು ಲೋಕಸಭಾ ಚುನಾವಣೆಗೆ ಭಾಗವಹಿಸದೇ ಇರುವ ಸಾಧ್ಯತೆ ಇದೆ. ಆದ್ದರಿಂದ ಸಧ್ಯ ಹಂಚಿಕೊಂಡಿರುವ ವಿಡಿಯೋ ಪ್ರತಿಪಾದನೆ ಸುಳ್ಳು.


ಇದನ್ನು ಓದಿ: ರಾಜ್ಯ ಕಾಂಗ್ರೆಸ್ ಸರ್ಕಾರ ವಿದ್ಯುತ್‌ ದರ ಡಬಲ್ ಮಾಡಿದೆ ಎಂಬುದು ಸುಳ್ಳು


ವಿಡಿಯೋ ನೋಡಿ: ಕಾಂಗ್ರೆಸ್ ಅಭ್ಯರ್ಥಿ ಗೀತಾ ಮತ್ತು ಶಿವರಾಜ್‌ಕುಮಾರ್ ಕುಂಕುಮ ಅಳಿಸಿದ್ದಾರೆ ಎಂಬುದು ಸುಳ್ಳು


ನಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *