Fact Check: ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಜನತೆಗೆ ಕೇಳಿಸಿರುವ ಮೋದಿಯವರ ಭಾಷಣದ ಆಡಿಯೋವನ್ನು ಬದಲಾಯಿಸಿ ಹಂಚಿಕೊಳ್ಳಲಾಗುತ್ತಿದೆ

ತೇಜಸ್ವಿ ಯಾದವ್

ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್ ಅವರು ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣವನ್ನು ಪೋರ್ಟಬಲ್ ಸ್ಪೀಕರ್‌ನಲ್ಲಿ ಜನರಿಗೆ ಕೇಳಿಸಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಭಾಷಣದಲ್ಲಿ ಆರ್‌ಜೆಡಿಯ ಹಗರಣಗಳ ಬಗ್ಗೆ ಪ್ರಧಾನಿ ಮೋದಿಯವರು ಟೀಕಿಸಿದ್ದಾರೆ. ಇದನ್ನು ಸ್ವತಃ ಯಾದವ್ ಅವರೇ ಜನರಿಗೆ ಕೇಳಿಸುವ ಮೂಲಕ ತಮ್ಮದೇ ಪಕ್ಷದ ಹಗರಣವನ್ನು ಬಹಿರಂಗಪಡಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅನೇಕರು ತಮ್ಮ ಎಕ್ಸ್‌ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನೀವಿಲ್ಲಿ ನೋಡಬಹುದು.

ಫ್ಯಾಕ್ಟ್‌ಚೆಕ್: ವೈರಲ್ ವಿಡಿಯೊದಲ್ಲಿ ಆಡಿಯೊವನ್ನು ಬದಲಾಯಿಸಲಾಗಿದೆ. ಮೂಲ ವೀಡಿಯೊ 30 ಏಪ್ರಿಲ್ 2024ರಂದು ನಡೆದ ಆರ್‌ಜೆಡಿ ಸಭೆಯದಾಗಿದ್ದು, ಯಾದವ್ ಅವರು ಪಿಎಂ ಮೋದಿಯವರು ದೇಶದ ಜನತೆಗೆ ನೀಡಿದ ಭರವಸೆಗಳ ಪಟ್ಟಿಗಳ ರೆಕಾರ್ಡಿಂಗ್ ಅನ್ನು ಪ್ಲೇ ಮಾಡುತ್ತಿರುವುದನ್ನು ತೋರಿಸುತ್ತದೆ ಮತ್ತು ಈ ಭರವಸೆಗಳು ಎಂದಿಗೂ ಈಡೇರಿಲ್ಲ ಎಂದು ಅವರು ಗಮನಸೆಳೆದಿದ್ದಾರೆ.

ಈ ಕುರಿತು ಇನ್ನಷ್ಟು ಮಾಹಿತಿಯನ್ನು ತಿಳಿಯಲು, ‘ತೇಜಸ್ವಿ ಯಾದವ್ ಅವರು ಪಿಎಂ ಮೋದಿ ರೆಕಾರ್ಡಿಂಗ್ ಅನ್ನು ಸ್ಪೀಕರ್‌ನಲ್ಲಿ ಕೇಳಿಸಿದ್ದಾರೆ’ ಎಂದು ನಾವು ಗೂಗಲ್‌ನಲ್ಲಿ ಸಂಬಂಧಿತ ಕೀವರ್ಡ್ ಹುಡುಕಾಟವನ್ನು ನಡೆಸಿದಾಗ, ಇದು 30 ಏಪ್ರಿಲ್ 2024 ರಂದು ಬಿಹಾರದ ಮಧುಬನಿಯಲ್ಲಿ ನಡೆದ ಇತ್ತೀಚಿನ ಘಟನೆಯಾಗಿದೆ ಮತ್ತು ಈ ಕುರಿತು ಹಲವಾರು ವರದಿಗಳಿ ಲಭ್ಯವಾಗಿವೆ. ಹಿಂದೂಸ್ತಾನ್ ಟೈಮ್ಸ್, ದಿ ಕ್ವಿಂಟ್, ದಿ ಹಿಂದೂ, ಇಂಡಿಯಾ ಟುಡೇ ಸೇರಿದಂತೆ ಅನೇಕ ಸುದ್ದಿ ಮಾಧ್ಯಮಗಳು ಈ ಕಾರ್ಯಕ್ರಮವನ್ನು ವರದಿ ಮಾಡಿದ್ದಾರೆ.

ಯಾದವ್ ಅವರು ಪ್ರಧಾನಿ ಮೋದಿಯವರು ಕಳೆದ 10 ವರ್ಷಗಳಲ್ಲಿ ಜನತೆಗೆ ನೀಡಿದ ಭರವಸೆಗಳೆಲ್ಲವನ್ನೂ ಪಟ್ಟಿ ಮಾಡಿ ಇಟ್ಟುಕೊಂಡು ಜನತೆಗೆ ಕೇಳಿಸುತ್ತಿದ್ದಾರೆ ಎಂದು ಪತ್ರಿಕಾ ವರದಿಗಳಲ್ಲಿ ತಿಳಿಸಲಾಗಿದೆ. ಆದರೆ ಅವರು ಯಾವ ಭರವಸೆಗಳನ್ನು ನೀಡಿದ್ದರೋ ಅವುಗಳಲ್ಲಿ ಯಾವುದನ್ನೂ ಈಡೇರಿಸಿಲ್ಲ ಎಂದು ಯಾದವ್ ಜನರ ಗಮನಸೆಳೆದಿದ್ದಾರೆ.

ಪತ್ರಿಕಾ ವರದಿಗಳಲ್ಲಿ ತೇಜಸ್ವಿ ಯಾದವ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಮೂಲ ವೀಡಿಯೋವನ್ನು ನೀಡಲಾಗಿದೆ. ಮತ್ತು “ಕಳೆದ 10 ವರ್ಷಗಳಲ್ಲಿ ನೀಡಿದ ಪ್ರಧಾನಿ ಮೋದಿಯವರ ‘ನಕಲಿ ಭರವಸೆಗಳನ್ನು’ ಅವರು ಅಣಕಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. 

ಮೂಲ ವಿಡಿಯೋದಲ್ಲಿ ಯಾದವ್ ಕೇಳಿಸಿದ ಧ್ವನಿಮುದ್ರಿಕೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿರುದ್ಧ ಪ್ರಧಾನಿ ಮೋದಿ ನೀಡಿರುವ ಹೇಳಿಕೆ ಇದೆ. ಅವರು ಹೇಳುತ್ತಾರೆ, “ಹಣದುಬ್ಬರವು ಹೀಗೆಯೇ ಏರುತ್ತಿದ್ದರೆ ಬಡವರು ಏನು ತಿನ್ನುತ್ತಾರೆ? ಆದರೆ, ಪ್ರಧಾನಿಯವರು ತಮ್ಮ ಅಹಂಕಾರದಿಂದ ಹಣದುಬ್ಬರದ ಸಮಸ್ಯೆಯನ್ನು ಪರಿಹರಿಸಲು ಸಿದ್ಧರಿಲ್ಲ.

ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಹೆಚ್ಚಿಸಿರುವುದರಿಂದ ದೇಶದ ನಾಯಕರಿಗೆ ಭಾರತದ ಬಡ ಜನರ ಬಗ್ಗೆ ಕಾಳಜಿ ಇಲ್ಲ ಎಂದು ಅವರು ಹೇಳಿದ್ದಾರೆ. ಮತ್ತು ಕೇಂದ್ರ ಸರ್ಕಾರವು 1.25 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ನೀಡುತ್ತದೆ ಎಂದು ನಾನು ಪ್ರತಿಜ್ಞೆ ಮಾಡುತ್ತೇನೆ” ಎಂದು ಅವರು ಸೇರಿಸುತ್ತಾರೆ.

ಅವರು ರೈತರ ಬಗ್ಗೆಯೂ ಪ್ರಸ್ತಾಪಿಸುತ್ತಾರೆ ಆದರೆ ಅವರು ಆರ್‌ಜೆಡಿಯ ಹಗರಣಗಳ ಬಗ್ಗೆ ಏನನ್ನೂ ಉಲ್ಲೇಖಿಸುವುದಿಲ್ಲ. ಇದನ್ನು 30 ಏಪ್ರಿಲ್ 2024 ರಂದು RJD ಯ ಅಧಿಕೃತ YouTube ಚಾನಲ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗಿದೆ ಮತ್ತು ವೈರಲ್ ವೀಡಿಯೊವನ್ನು 27:13 ಟೈಮ್‌ಸ್ಟ್ಯಾಂಪ್‌ನಿಂದ ನೋಡಬಹುದಾಗಿದೆ.

‘PM Modi RJD scams speech’ ಅನ್ನು ಬಳಸಿಕೊಂಡು Google ನಲ್ಲಿ ಸಂಬಂಧಿತ ಕೀವರ್ಡ್ ಹುಡುಕಾಟವನ್ನು ನಡೆಸುವ ಮೂಲಕ, ನಾವು 27 ಜೂನ್ 2023 ರಂದು ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಪ್ರಧಾನಿ ಮಾಡಿದ ಭಾಷಣವನ್ನು ನೋಡಿದ್ದೇವೆ. ಇದನ್ನು ಪ್ರಧಾನಿ ಮೋದಿಯವರ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗಿದೆ ಮತ್ತು ವೈರಲ್ ಕ್ಲಿಪ್‌ಗೆ ಲಗತ್ತಿಸಲಾದ ಆಡಿಯೊವನ್ನು ಈ ವೀಡಿಯೊದಿಂದ 1:52:50 ಟೈಮ್‌ಸ್ಟ್ಯಾಂಪ್‌ನಿಂದ ತೆಗೆದುಕೊಳ್ಳಲಾಗಿದೆ.

ಆದ್ದರಿಂದ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರು ಪ್ರಧಾನಿ ಮೋದಿಯವರ ಭಾಷಣವನ್ನು ಸ್ಪೀಕರ್‌ನಲ್ಲಿ ಕೇಳಿಸಿರುವ ಆಡಿಯೋವನ್ನು ಬದಲಾಯಿಸಿ ಮೋದಿ ಆರ್‌ಜೆಡಿ ಪಕ್ಷವನ್ನು ಟೀಕಿಸಿರುವ ಆಡಿಯೋ ಜೋಡಿಸಿ ಈ ವಿಡಿಯೋ ವೈರಲ್ ಮಾಡಲಾಗಿದೆ.


ಇದನ್ನು ಓದಿ: CSK ಅಭಿಮಾನಿಗಳ ಮೇಲೆ RCB ಅಭಿಮಾನಿಗಳಿಂದ ಹಲ್ಲೆ ಎಂಬುದು ಸುಳ್ಳು


ವಿಡಿಯೋ ನೋಡಿ: ಮೋದಿ ಪ್ರಧಾನಿಯಾಗುವ ಮುನ್ನ ಭಾರತದಲ್ಲಿ ಕೇವಲ 300 ಸ್ಟಾರ್ಟಪ್‌ಗಳಿದ್ದವು ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *