ಸೋನಿ ಲೈವ್ ಇಂಡಿಯನ್ ಐಡಲ್ ಶೋನ 14 ನೇ ಆವೃತ್ತಿಯಲ್ಲಿ ಅಂಬೇಡ್ಕರ್ ಹಾಡು ಎಂಬುದು ಎಡಿಟೆಡ್ ವಿಡಿಯೋ

ಸೂರ್ಯಕಾಂತ್ ಎಂಬ ಗಾಯಕನೊಬ್ಬ ಸೋನಿ ಲೈವ್ ನಡೆಸುವ ಇಂಡಿಯನ್ ಐಡಲ್ ಶೋನ 14 ನೇ ಆವೃತ್ತಿಯಲ್ಲಿ ಅಂಬೇಡ್ಕರ್ ಹಾಡು ಹಾಡಿ ಎಲ್ಲರೂ ಅಳುವಂತೆ ಮಾಡಿದ್ದಾರೆ ಎಂಬ ವಿಡಿಯೋಗಳು ಯೂಟೂಬ್ ನಲ್ಲಿ ಹರಿದಾಡುತ್ತಿವೆ.

ಫ್ಯಾಕ್ಟ್‌ಚೆಕ್ : ಸೂರ್ಯಕಾಂತ್ ತಾನು ಸೋನಿ ನಡೆಸುವ ಪ್ರತಿಷ್ಠಿತ ಇಂಡಿಯನ್ ಐಡಲ್ ನಲ್ಲಿ ಹಾಡುತ್ತಿರುವಂತೆ ಹಂಚಿಕೊಂಡಿರುವ ವಿಡಿಯೋ ಎಟಿಟೆಡ್ ಆಗಿದೆ. RK ಸೂಪರ್ ಡ್ಯಾನ್ಸರ್ ಎಂಬ ಯೂಟೂಬ್ ಖಾತೆ ಹೊಂದಿರುವ ಸೂರ್ಯಕಾಂತ್ ಉತ್ತಮ ಡ್ಯಾನ್ಸರ್ ಮತ್ತು ಗಾಯಕರಾಗಿದ್ದಾರೆ. ಅವರು ತಮ್ಮ ಹಾಡುಗಳು ಹೆಚ್ಚು ಜನರಿಗೆ ತಲುಪಲು ಸೋನಿ ಲೈವ್ ನಡೆಸುವ ಇಂಡಿಯನ್ ಐಡಲ್ ಶೋನಲ್ಲಿ ಹಾಡಿರುವಂತೆ ಮತ್ತು ತನ್ನ ಹಾಡಿಗೆ ಜಡ್ಜ್‌ಗಳು ಅಳುವಂತೆ ಎಡಿಟ್ ಮಾಡಿದ್ದಾರೆ. 14 ನೇ ಆವೃತ್ತಿ ಅಕ್ಟೋಬರ್ 7 ರಿಂದ ಆರಂಭವಾಗುತ್ತಿದೆ.


ಇದನ್ನು ಓದಿ: ರಾಜಸ್ಥಾನ ಸರ್ಕಾರ ಸಂತ್ರಸ್ತರಿಗೆ ಪರಿಹಾರ ನೀಡುವಾಗ ಧರ್ಮದ ಆಧಾರದಲ್ಲಿ ತಾರತಮ್ಯವೆಸಗಿಲ್ಲ..!


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *