ಉತ್ತರ ಪ್ರದೇಶದಲ್ಲಿ ಲವ್ ಜಿಹಾದ್- ಮಹಿಳೆಗೆ ಬೆಂಕಿ ಹಚ್ಚಿದ್ದಾರೆ ಎಂಬುವುದು ಸುಳ್ಳು, ಈ ವಿಡಿಯೋ ಬಂಗಾಳದ್ದು

ಉತ್ತರ ಪ್ರದೇಶದಲ್ಲಿ ಲವ್‌ ಜಿಹಾದ್ ನಡೆಸಲಾಗಿದೆ, ಹಿಂದೂ ಹುಡುಗಿಗೆ ಬೆಂಕಿ ಹಚ್ಚಿ ಕೊಲೆಗೈದಿದ್ದಾರೆ ಎಂಬ ಸುದ್ದಿ ವ್ಯಾಪಕವಾಗಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಹಲವು ವಾಟ್ಸ್‌ಆಪ್‌ಗಳಲ್ಲಿ, ” ಉತ್ತರ ಪ್ರದೇಶದಲ್ಲಿ ಲವ್‌ ಜಿಹಾದ್‌ ಘಟನೆ, ಹಿಂದೂ ಹೆಣ್ಣು ಮಕ್ಕಳೇ ದಯವಿಟ್ಟು ನೋಡಿ, ನಮ್ಮ ಅಬ್ದುಲ್ಲ ಎಲ್ಲರಂತಲ್ಲ ಎನ್ನುವವರು ನೋಡಿ” ಎಂದು ಇಂಗ್ಲಿಷ್‌ ಮತ್ತು ಕನ್ನಡ ಮಿಶ್ರಿತ ಬರಹಗಳೊಂದಿಗೆ ವಾಟ್ಸಾಆಪ್‌ಗಳಲ್ಲಿ ಶೇರ್‌ ಮಾಡಲಾಗುತ್ತಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಕನ್ನಡ ಫ್ಯಾಕ್ಟ್‌ ಚೆಕ್‌ ತಂಡದ ಸತ್ಯ ಶೋಧನೆಯಿಂದ ಹೊರಬಂದಿದ್ದು ; ಈ ಕುರಿತು ಫ್ಯಾಕ್ಟ್‌ ಚೆಕ್‌ ಮಾಡಿದಾಗ ಹುಡುಗಿಯೊಬ್ಬಳ ಕೈ ಕಟ್ಟಿ ಬೆಂಕಿಗೆ ಹಾಕಿರುವ ಈ ವಿಡಿಯೋ ಪಶ್ಚಿಮ ಬಂಗಾಳದ ಬಸಿಹರ್ತ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ  ಎಂದು ತಿಳಿದು ಬಂದಿದೆ. ವಯಕ್ತಿಕ ದ್ವೇಷದ ಕಾರಣಕ್ಕೆ ನಡೆದ ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಆರೋಪಿಯನ್ನು ಬಂಧಿಸಿಲಾಗಿದೆ.

ಈ ಕುರಿತು ರಾಷ್ಟ್ರೀಯ ಮಾಧ್ಯಮಗಳು ಸೇರಿದಂತೆ ಪ.ಬಂಗಾಳದ ಹಲವು ಸ್ಥಳೀಯ ಮಾಧ್ಯಮಗಳು ಕೂಡ ವರದಿ ಮಾಡಿವೆ, ಈ ವರದಿಗಳಲ್ಲಿ ಕೂಡ ಈ ಯುವತಿ ಬಾಂಗ್ಲದೇಶ ಹಾಗೂ ಭಾರತದ ಪಶ್ಷಿಮ ಬಂಗಾಳ ಗಡಿಯಲ್ಲಿ ಸಾವನ್ನಪ್ಪಿದ್ದಾಳೆ ಎಂದು ಉಲ್ಲೇಖವಾಗಿದೆ.  ಹಾಗಾಗಿ ಇದು ಉತ್ತರ ಪ್ರದೇಶದ ಲವ್ ಜಿಹಾದ್ ವಿಡಿಯೋ ಎನ್ನುವುದು ಸುಳ್ಳಾಗಿದೆ.

ಈ ರೀತಯ ವಿಡಿಯೋಗಳನ್ನ ಶೇರ್‌ ಮಾಡುವಾಗ ಮುನ್ನೇಚ್ಚರಿಕೆತನ್ನು ವಹಿಸಿ, ನಿಮಗೆ ಯಾವುದೇ ಅನುಮಾನ ಬರುವಂತ ಪೋಸ್ಟ್‌ಗಳು ವಿಡಿಯೋಗಳನ್ನ ನಮಗೆ ಕಳುಹಿಸಿ ಕೊಡಿ ನಾವು ಸತ್ಯಶೋಧನೆ ನಡೆಸಿ ನಿಮಗೆ ಮಾಹಿತಿಯನ್ನು ನೀಡಿತ್ತೆವೆ.

Leave a Reply

Your email address will not be published. Required fields are marked *