ರಾಹುಲ್‌ ಗಾಂಧಿ ಅರ್ಥವಿಲ್ಲದ ಭಾಷಣ ಮಾಡಿದ್ದಾರೆ ಎಂಬುವುದು ಸುಳ್ಳು..!

ಕಳೆದ ಕೆಲ ದಿನಗಳಿಂದ ರಾಹುಲ್‌ ಗಾಂಧಿಯವರು ಅರ್ಥವಿಲ್ಲ ಭಾಷಣ ಮಾಡುತ್ತಿದ್ದಾರೆ ಮತ್ತು ಅವರ ಮಾತುಗಳು ಯಾರಿಗೂ ಅರ್ಥವಾಗುತ್ತಿಲ್ಲ, ಯಾರಿಗಾದರೂ ಅರ್ಥವಾದರೆ ನಮಗೆ ತಿಳಿಸಿ ಎಂಬ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ, ಆದರೆ ಇದರ ಹಿಂದಿನ ಸತ್ಯ ಬೇರೆಯದ್ದೇ ಇದೆ.

ಹೌದು.. ರಾಹುಲ್‌ ಗಾಂಧಿ  ಮಾತನಾಡಿದ್ದಾರೆ ಎಂಬ ವಿಡಿಯೋದಲ್ಲಿ ಅವರು “ನನ್ನ ತಂದೆ ಕೊಲ್ಲಲ್ಪಟ್ಟರು, ನಾನು ಆ ರೀತಿ ಮಾಡಿಲ್ಲ, ನಾನು ಆಸ್ಪತ್ರೆಯಲ್ಲಿದ್ದೆ, ನನಗೆ ಈ ರೀತಿ ಆಗಿದ್ದರೆ ನಾನು ಸಾಯಿಸುತ್ತಿದ್ದೆ ಎಂದು ಭಾವಿಸಿದ್ದೆ” ; ಎಂಬ ಹೇಳಿಕೆಗಳನ್ನು ರಾಹುಲ್‌ ಗಾಂಧಿ ಅವರೇ ಹೇಳಿರುವುದನ್ನ ನೋಡಬಹುದು, ಇದನ್ನೇ ಬಳಸಿಕೊಂಡು ಈಗ ರಾಹುಲ್‌ ಗಾಂಧಿ ವಿರುದ್ಧ ಟೀಕೆ ಮಾಡಲಾಗುತ್ತಿದೆ.

ಆದರೆ ಇದು ಎಡಿಟೆಡ್‌ ವಿಡಿಯೋವಾಗಿದ್ದು, 2022ರ ಏಪ್ರಿಲ್‌ ತಿಂಗಳಂದು ಲೇಖಕ ಕೆ.ರಾಜು ಅವರ ʼದಲಿತ್‌ ಟ್ರುತ್‌ʼ ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ರಾಹುಲ್‌ ಗಾಂಧಿ ಅವರು 36 ನಿಮಿಷಗಳ ಕಾಲ ಸುಲಲಿತವಾಗಿ ಅರ್ಥವಾಗುವ ರೀತಿ ಮಾತನಾಡಿದ್ದಾರೆ. ಅದರ ಬೇರೆ ಬೇರೆ ವಿಡಿಯೋ ಕ್ಲಿಪ್‌ಗಳನ್ನು ಕತ್ತರಿಸಿ ಎಡಿಟ್‌ ಮಾಡಲಾಗಿದ್ದು, ಬಳಿಕ ರಾಹುಲ್‌ ಗಾಂಧಿ ಅವರು ಅರ್ಥವವಿಲ್ಲದ ಭಾಷಣ ಮಾಡಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿದೆ.

ಈ ರೀತಿಯಾದ ಸುಳ್ಳು ಸುದ್ದಿಗಳನ್ನು ಫಾರ್ವರ್ಡ್‌ ಮಾಡುವ ಮುನ್ನ ಎಚ್ಚರಿಕೆಯಿಂದಿರಿ ಹಾಗೂ ಈ ರೀತಿಯಾದ ಯಾವುದಾದರು ವಿಡಿಯೋ ಅಥವಾ ಪೋಸ್ಟ್‌ಗಳು ನಿಮ್ಮ ಗಮನಕ್ಕೆ ಬಂದರೆ ನಮಗೆ ಕಳುಹಿಸಿ ಅದರ ಕುರಿತು ಫ್ಯಾಕ್ಟ್‌ ಚೆಕ್‌ ಮಾಡಿ ನಾವು ನಿಮಗೆ ನಿಖರ ಮಾಹಿತಿಯನ್ನು ನೀಡುತ್ತೇವೆ

Leave a Reply

Your email address will not be published. Required fields are marked *