ರಾಜಸ್ಥಾನ ಸರ್ಕಾರ ಸಂತ್ರಸ್ತರಿಗೆ ಪರಿಹಾರ ನೀಡುವಾಗ ಧರ್ಮದ ಆಧಾರದಲ್ಲಿ ತಾರತಮ್ಯವೆಸಗಿಲ್ಲ..!

ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆ ನಡೆಯಲು ಕೆಲ ದಿನಗಳು ಬಾಕಿ ಇವೆ. ಹೀಗಿರುವ ಅಲ್ಲಿನ ಆಡಳಿತ ಪಕ್ಷದ ವಿರುದ್ದ ಈಗ ಹಲವು ರೀತಿಯಾದ ಸುಳ್ಳು ಸುದ್ದಿಯನ್ನ ಹಬ್ಬಲು ಅಲ್ಲಿನ ಕೆಲ ಡಿಜಿಟಲ್‌ ಮಾಧ್ಯಮಗಳು ಪ್ರಾರಂಭ ಮಾಡಿವೆ ಎಂಬ ಆರೋಪ ಕೇಳಿ ಬಂದಿವೆ. ಇದಕ್ಕೆ ಪೂರಕ ಎಂಬಂತೆ ಇದೀಗ ರಾಜಸ್ಥಾನ ಸರ್ಕಾರದ ವಿರುದ್ಧ ದಿನಕ್ಕೆ ಒಂದರಂತೆ, ಒಂದೊಂದೇ ಸುಳ್ಳು ಸುದ್ದಿಗಳು ಹಬ್ಬೋದಕ್ಕೆ ಪ್ರಾರಂಭವಾಗಿವೆ. ಇದರಿಂದ ಅಲ್ಲಿನ ಸರ್ಕಾರ ಇಕ್ಕಟ್ಟಿಗ ಸಿಲುಕಿಕೊಂಡಿದೆ. ಈಗ ಇಂತಹದ್ದೇ ಒಂದು ಸುಳ್ಳು ಸುದ್ದಿ ಅಲ್ಲಿನ ಸರ್ಕಾರವನ್ನ ಮುಜುಗರಕ್ಕೆ ಸಿಲುಕಿಸಿದೆ.

ಹೌದು, ಕಳೆದ ಕೆಲ ದಿನಗಳ ಹಿಂದೆ, ರಾಜಸ್ಥಾನದಲ್ಲಿ ಅಪಘಾತವೊಂದು ನಡೆದಿತ್ತು, ಈ ಅಪಘಾತದಲ್ಲಿ ತೀವ್ರತೆಗೆ ಬೆಚ್ಚಿ ಬಿದ್ದ ಅಲ್ಲಿನ ಸ್ಥಳೀಯರು ಅಪಘಾತಕ್ಕೆ 18 ವರ್ಷ ಪ್ರಾಯದ ಇಕ್ಬಾಲ್‌ ಕಾರಣ ಎಂದು ತಪ್ಪು ಬಾವಿಸಿ ಆತನನ್ನು ಹಲ್ಲೆ ಮಾಡಿ ಸಾಯಿಸಿದ್ದಾರೆ, ಇದಾದ ಬಳಿk ಪೊಲೀಸರು ಪ್ರಕರಣ ಬೇದಿಸಿದ್ದು, ಈ ಪ್ರಕರಣದ ನೈಜ ಆರೋಪಿ ಆತ ಅಲ್ಲ ಎಂದು ಸಾಬೀತು ಪಡಿಸಿರುತ್ತಾರೆ. ತದ ನಂತರ ಈತನ ಕುಟುಂಬಕ್ಕೆ ರಾಜಸ್ತಾನ ಸರ್ಕಾರ ಸುಮಾರು 50 ಲಕ್ಷ ರೂ. ಪರಿಹಾರವನ್ನು ನೀಡಿತ್ತು, ಜೊತೆಗೆ ಕುಟುಂಬದ ಒಬ್ಬಸದಸ್ಯರಿಗೆ ಸರ್ಕಾರಿ ಉದ್ಯೋಗವನ್ನು ನೀಡುವ ಭರವಸೆಯನ್ನು ಕೂಡ ನೀಡಿತ್ತು.

ಆದರೆ ಇದೇ ವಿಚಾರವನ್ನ ಬಳಸಿಕೊಂಡು ಕೋಮು ಸಾಮರಸ್ಯ ಕೆಡವಲು ಕೆಲ ಕಿಡಿಗೇಡಿಗಳು ಮುಂದಾಗಿದ್ದು, “ರಾಜಸ್ತಾನ ಕಾಂಗ್ರೆಸ್‌ ಸರ್ಕಾರ ಮುಸ್ಲಿಂರ ಪರವಾಗಿದೆ, ನಿನ್ನೆ ಮೊನ್ನೆ ಹತ್ಯೆಯಾದ ಇಕ್ಬಾಲ್‌ಗೆ 50 ಲಕ್ಷ ರೂಪಾಯಿ ಪರಿಹಾರವನ್ನು ನೀಡಿದೆ. ಆದರೆ ಈ ಹಿಂದೆ ನೂಪುರ್‌ ಶರ್ಮಾ ಅವರ ಹೇಳಿಕೆಯನ್ನ ಬೆಂಬಲಿಸಿದ್ದ ಕನ್ಹಯ್ಯಾ ಲಾಲ್‌ರ ಹತ್ಯಯಾದ ನಂತರ ಅವರ ಕುಟುಂಬಕ್ಕೆ ಕೇವಲ 5 ಲಕ್ಷ ರೂ ಪರಿಹಾರವನ್ನು ಕೊಡಲಾಗಿದೆ, ಇದು ರಾಜಸ್ಥಾನ ಸರ್ಕಾರದ ಕೋಮು ನಿಲುವು ಎಂತಹದ್ದು ಎಂಬುವುದು ಈಗ ಗೊತ್ತಾಗುತ್ತಿದೆ”

ಈ ಸುದ್ದಿಯನ್ನೂ ಓದಿ ; ಬಿಜೆಪಿಗೆ ಮತ ನೀಡಿದ ತಪ್ಪಿಗೆ ಬೆರಳು ಕತ್ತರಿಸಿಕೊಂಡಿದ್ದಾರೆ ಎಂಬುದು ಸುಳ್ಳು

ಆದರೆ ಇದೊಂದು ಶುದ್ಧ ಸುಳ್ಳು ಸುದ್ದಿಯಾಗಿದ್ದು, 2022ರಲ್ಲಿ ಹತ್ಯೆಯಾದ ಕನ್ಹಯ್ಯಾ ಲಾಲ್‌ ಹಾಗೂ ಇತ್ತೀಚೆಗೆ ಹತ್ಯೆಯಾದ ಇಕ್ಬಾಲ್‌ ಅವರ ಕುಟುಂಬಗಳಿಗೆ ತಲಾ 50 ಲಕ್ಷ ರೂ. ಪರಿಹಾರವನ್ನು ರಾಜಸ್ಥಾನ ಸರ್ಕಾರ ನೀಡಿದ್ದು,

ಈ ಕುರಿತು ರಾಜಸ್ಥಾನ ಸಿಎಂ ಅಶೋಕ್‌ ಗೆಹ್ಲೋಟ್‌ ಟ್ವೀಟ್ ಮಾಡಿದ್ದಾರೆ‌. ಹೀಗಾಗಿ ಪರಿಹಾರ ವಿಚಾರದಲ್ಲಿ ಹಿಂದೂ ಮುಸ್ಲಿಂ ತಾರತಮ್ಯವಾಗಿದೆ ಎನ್ನುವುದು ಸುಳ್ಳು ಸುದ್ದಿಯಾಗಿದೆ.

Leave a Reply

Your email address will not be published. Required fields are marked *