ಬಿಜೆಪಿಗೆ ಮತ ನೀಡಿದ್ದಕ್ಕಾಗಿ ಬೇಸರಗೊಂಡ ವ್ಯಕ್ತಿಯೊಬ್ಬ ತನ್ನ ಬೆರಳು ಕತ್ತರಿಸಿಕೊಂಡಿದ್ದಾನೆ ಎಂಬ ವಿಡಿಯೋ ಒಂದು ಹಲವು ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಫ್ಯಾಕ್ಟ್‌ಚೆಕ್: ಮಹಾರಾಷ್ಟ್ರದ ಧನಂಜಯ್ ನನವಾರೆ ಎಂಬ ವ್ಯಕ್ತಿಯೊಬ್ಬ ತನ್ನ ಅಣ್ಣ ಮತ್ತು ಅತ್ತಿಗೆ ಆತ್ಮಹತ್ಯೆಯಿಂದ ಸಾವನ್ನಪ್ಪಿಲ್ಲ. ಇದು ಕೊಲೆಯಾಗಿದೆ. ಹಾಗಾಗಿ ನ್ಯಾಯಯುತ ಪೋಲಿಸ್ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದರು. ಯಾವುದೇ ತನಿಖೆ ನಡೆಸದ ಪೋಲಿಸರ ಮೇಲೆ ಸಿಟ್ಟಿಗೆದ್ದು ತನ್ನ ಬೆರಳು ಕತ್ತರಿಸಿದ್ದಾನೆ ಮತ್ತು ಪ್ರತೀವಾರ ತನ್ನ ದೇಹದ ಅಂಗಾಂಗಳನ್ನು ಕತ್ತರಿಸಿ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂದೆ ಮತ್ತು ಪ್ರಧಾನಿ ಮೋದಿಯವರಿಗೆ ಕಳಿಸುವುದಾಗಿ ವಿಡಿಯೋ ಮಾಡಿದ್ದರು. ಇದು ವೈರಲ್ ಆಗುತ್ತಿದ್ದಂತೆ ಠಾಣೆ ಪೋಲಿಸರು ನಾಲ್ಕು ಜನ ಆಪಾಧಿತರನ್ನು ಬಂಧಿಸಿದ್ದಾರೆ. ಆದ್ದರಿಂದ ಆತ ಬಿಜೆಪಿಗೆ ಮತ ನೀಡಿದ್ದಕ್ಕಾಗಿ ಬೆರಳು ಕತ್ತರಿಸಿಕೊಂಡಿದ್ಧಾನೆ ಎಂಬುದು ಸುಳ್ಳು.
ತಮಿಳುನಾಡಿನಲ್ಲಿ ಸಹ ಇದೇ ವಿಡಿಯೋವನ್ನು ಕಾಂಗ್ರೆಸ್‌ಗೆ ಮತ ನೀಡಿದ್ದಕ್ಕಾಗಿ ಬೇಸತ್ತು ವ್ಯಕ್ತಿಯೊಬ್ಬ ಬೆರಳು ಕತ್ತರಿಸಿಕೊಂಡಿದ್ದಾನೆ ಎಂದು ಈ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಆದರೆ ಈ ಎರಡು ಹೇಳಿಕೆಗಳು ಸಂಪೂರ್ಣ ಸುಳ್ಳಾಗಿವೆ.
ಇದನ್ನು ಓದಿ: ಸಾಲುಮರದ ತಿಮ್ಮಕ್ಕ ಆರೋಗ್ಯವಾಗಿದ್ದಾರೆ, ಸುಳ್ಳು ಸುದ್ದಿ ನಂಬಬೇಡಿ.
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.