Fact Check: ಕಾಂಗ್ರೆಸ್ ತನ್ನ ಪಕ್ಷದ ಗುರುತಾಗಿ ಇಸ್ಲಾಮ್ ಚಿಹ್ನೆಯನ್ನು ಆಯ್ಕೆ ಮಾಡಿದೆ ಎಂಬುದು ಸುಳ್ಳು

ಎಷ್ಟು ಬುದ್ಧಿವಂತರು ನೋಡಿ!!? ಕಾಂಗ್ರೆಸ್ ತನ್ನ ಚುನಾವಣಾ ಗುರುತಿಗೆ ಇಸ್ಲಾಮಿಕ್ ಚಿಹ್ನೆಯನ್ನು ಆಯ್ಕೆ ಮಾಡುವಲ್ಲಿ ಸಹ ಅವರಿಗೆ ಬೆಂಬಲ ನೀಡುತ್ತ ಬಂದಿದೆ.. ಎಲ್ಲಿ 90% ಹಿಂದೂಗಳಿಗೆ ಗೊತ್ತಾದರೆ ಹಿಂದುಗಳ ಮತಗಳು ಸಿಗುವುದಿಲ್ಲವೋ ಎಂಬ ಕಾರಣಕೆ, ಇದನ್ನು ಗೋಪ್ಯವಾಗಿ ಇಡಲಾಗಿತ್ತು. ಎಂಬ ಸಂದೇಶವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಇದನ್ನು ಬಹುತೇಕ ಬಲಪಂಥೀಯ ಪುಟಗಳು, ಬೆಂಬಲಿಗರು ಹಂಚಿಕೊಳ್ಳುತ್ತಿದ್ದಾರೆ.

ಫ್ಯಾಕ್ಟ್‌ಚೆಕ್: ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಪಕ್ಷವು ಉಳುತ್ತಿರುವ ಜೋಡಿ ಎತ್ತುಗಳ ಚಿಹ್ನೆ ಹೊಂದಿತ್ತು. ಇಂದಿರಾ ಕಾಂಗ್ರೆಸ್ ಬಣವು ಹಸು ಮತ್ತು ಕರು ಚಿಹ್ನೆ ಹೊಂದಿತ್ತು. 1978ರಲ್ಲಿ ಎರಡೂ ಬಣಗಳು ಇಂದಿರಾ ಗಾಂಧಿ ನೇತೃತ್ವದಲ್ಲಿ ಒಂದಾಗಿದ್ದವು. ಆಗ ಹೊಸ ಚಿಹ್ನೆಯನ್ನು ಆಯ್ದುಕೊಳ್ಳಬೇಕಿತ್ತು. ಚುನಾವಣಾ ಆಯೋಗವು, ಆನೆ, ಸೈಕಲ್ ಮತ್ತು ಹಸ್ತ ಈ ಮೂರು ಆಯ್ಕೆಯನ್ನು ಕಾಂಗ್ರೆಸ್ ಮುಂದಿಟ್ಟಿತ್ತು. ಇಂದಿರಾ ಗಾಂಧಿಯವರು ಜನರಿಗೆ ಬೇಗ ಮನಸ್ಸಿನಲ್ಲಿ ಉಳಿಯುತ್ತದೆ ಎಂಬ ಕಾರಣಕ್ಕೆ ಹಸ್ತವನ್ನು ಆಯ್ದುಕೊಂಡರು.

ಹಸ್ತದ ಗುರುತು ಕೇರಳದ ಎಮೂರ್ ಭಗವತಿ ದೇವಾಲಯದ ದೇವತೆಯಾದ ಹೇಮಾಂಬಿಕಾ ದೇವಿಯ ಎತ್ತರದ ಅಂಗೈಯನ್ನು ಪ್ರತಿನಿಧಿಸುತ್ತದೆ. ಇಂದಿರಾ ಗಾಂಧಿಯವರು ಒಮ್ಮೆ ದೇವಾಲಯಕ್ಕೆ ಭೇಟಿ ನೀಡಿದಾಗ ಪಶ್ಚಿಮ ಘಟ್ಟಗಳ ನಡುವಿದ್ದ ಅದರ ಪ್ರಶಾಂತತೆಗೆ, ಅಲ್ಲಿನ ಪರಿಸರದಿಂದ ಪ್ರಭಾವಿತರಾದ ನಂತರ 1980 ರಲ್ಲಿ ಪಕ್ಷವು ಈ ಚಿಹ್ನೆಯನ್ನು ಅಳವಡಿಸಿಕೊಂಡಿತು ಎಂದು ಹಲವಾರು ಮಾಧ್ಯಮಗಳು ವರದಿ ಮಾಡಿವೆ. ಕೈ ಚಿಹ್ನೆಯನ್ನು ಸಂಸ್ಕೃತದಲ್ಲಿ ಅಭಯಮುದ್ರ ಎಂದೂ ಕರೆಯುತ್ತಾರೆ.

ಇನ್ನು ಕಾಂಗ್ರೆಸ್ ತನ್ನ ಪಕ್ಷದ ಗುರುತಾಗಿ ಇಸ್ಲಾಮ್ ಚಿಹ್ನೆಯನ್ನು ಆಯ್ಕೆ ಮಾಡಿದೆ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ. ಈ ಕುರಿತು ಯಾವುದೇ ವರದಿಗಳು ಸಹ ಇಲ್ಲ.  ಇನ್ನೂ ವೈರಲ್ ಆಗುತ್ತಿರುವ ಪೋಟೋದಲ್ಲಿನ ಇಸ್ಲಾಮಿನ ಹಸ್ತದ ಸಂಕೇತವನ್ನು, ಇಸ್ಲಾಮಿಕ್ ನಂಬಿಕೆಗಳ ಪ್ರಕಾರ “ಪಂಜತನ್” ಎಂದು ಕರೆಯುತ್ತಾರೆ; ಎಂದರೆ ಶಿಯಾ ಇಸ್ಲಾಂನಲ್ಲಿ ಅತ್ಯಂತ ಪ್ರಮುಖ ವ್ಯಕ್ತಿಗಳು ಎಂದು ಪರಿಗಣಿಸಲಾದ ಐದು ಶುದ್ಧ ಮತ್ತು ಪಾಪರಹಿತ ವ್ಯಕ್ತಿಗಳನ್ನು ಸೂಚಿಸುತ್ತದೆ. ಮೊಹರಮ್ ಮೆರವಣಿಗೆಯ ಸಂದರ್ಭದಲ್ಲಿ ನೀವು ಈ ಪಂಜತನ್ ಆರಾಧಿಸುವುದನ್ನು ನೋಡಬಹುದು. ಹಾಗಾಗಿ ಮೇಲಿನ ಪ್ರತಿಪಾದನೆ ತಪ್ಪಾಗಿದೆ.


ಇದನ್ನು ಓದಿ: Fact Check: ಪ್ಲಾಸ್ಟಿಕ್‌ನಿಂದ ಗೋಧಿ ತಯಾರಿಸಲಾಗುತ್ತಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *