ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ಯುದ್ಧ ಆರಂಭವಾದಗಿನಿಂದ ಹಲವು ಗಣ್ಯರ ಹೆಸರಿನಲ್ಲಿ ವಿವಿಧ ರೀತಿಯಾದ ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಲು ಪ್ರಾರಂಭವಾಗಿದೆ,
ಇದೀಗ ಬಾಲಿವುಡ್‌ನ ಖ್ಯಾತ ನಟ ಅಕ್ಷಯ್ ಕುಮಾರ್ ಅವರು ಕೂಡ ಪ್ಯಾಲೆಸ್ಟೈನ್ ಅನ್ನು ಬೆಂಬಲಿಸುತ್ತಿದ್ದಾರೆ ಎಂಬ ಪೋಸ್ಟ್ ಒಂದು ವೈರಲ್ ಆಗಿದೆ. ಆ ವೈರಲ್ ಪೋಸ್ಟ್‌ನಲ್ಲಿ “ಪ್ಯಾಲೆಸ್ಟೈನ್ ದೇಶವನ್ನು ಬೆಂಬಲಿಸಿದ್ದಕ್ಕಾಗಿ ಅಲಿಗಢ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಇದೀಗ ವಿಡಿಯೋವೊಂದರಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ನಾನು ಪ್ಯಾಲೆಸ್ಟೈನ್ ಅನ್ನು ಪ್ರೀತಿಸುತ್ತೇನೆ, ಪ್ಯಾಲೆಸ್ಟೈನ್ ಅನ್ನು ಬೆಂಬಲಿಸುತ್ತೇನೆ ಎಂದು ಹೇಳುತ್ತಿದ್ದಾರೆ. ಹಾಗಾದರೆ ಈಗ ಅಕ್ಷಯ್ ಕುಮಾರ್ ಅವರ ವಿರುದ್ಧವೂ ಎಫ್‌ಐಆರ್ ದಾಖಲಿಸುತ್ತಾರೆಯೇ” ಎಂದು ಹಂಚಿಕೊಳ್ಳಲಾಗಿದೆ.
Fact Check : ಈ ಕುರಿತು ಫ್ಯಾಕ್ಟ್ ಚೆಕ್ ನಡೆಸಿದಾಗ, ನಟ ಅಕ್ಷಯ್ ಕುಮಾರ್ ಅವರು ಪ್ಯಾಲೆಸ್ಟೀನ್ ಅನ್ನು ಬೆಂಬಲಿಸಿದ್ದಾರೆ ಎಂಬುದಕ್ಕೆ ಯಾವುದೇ ರೀತಿಯಾದ ಸಾಕ್ಷಿಗಳು ಸಿಕ್ಕಿಲ್ಲ. ಆದರೆ, ಇದೇ ಅಕ್ಟೋಬರ್ 11 ರಂದು ಅಜ್‌ತಕ್ ಮತ್ತು ‘ಇಂಡಿಯಾ ಟುಡೆ’ ಜೊತೆಗಿನ ಸಂವಾದದಲ್ಲಿ ಅಕ್ಷಯ್ ಅವರಿಗೆ ಇಸ್ರೇಲ್‌ನಲ್ಲಿನ ಇತ್ತೀಚಿನ ಬೆಳವಣಿಗೆಗಳಿಗೆ ಸಂಬಂಧಿಸಿದ ಪ್ರಶ್ನೆಯನ್ನು ಕೇಳಲಾಯಿತು. ಅದಕ್ಕೆ ಪ್ರತಿಕ್ರಿಯೆ ನೀಡಿದ ಅವರು ಯಾವುದೇ ರೀತಿಯ ಭಯೋತ್ಪಾದನೆಯನ್ನು ಬೆಂಬಲಿಸಲು ಸಾಧ್ಯವಿಲ್ಲ ಎಂದು ಅಕ್ಷಯ್ ಕುಮಾರ್ ಪ್ರತಿಕ್ರಿಯಿಸಿದ್ದರು.
ಈ ವೈರಲ್ ಪೋಸ್ಟ್ ಕುರಿತು ಅಕ್ಷಯ್ ಕುಮಾರ್ ಅವರ ಅಧಿಕೃತ ಎಕ್ಸ್ (ಈ ಹಿಂದಿನ ಟ್ವಿಟರ್ ) ಖಾತೆ ಸೇರಿದಂತೆ ಯಾವುದೇ ಸಾಮಾಜಿಕ ಜಾಲತಾಣದಲ್ಲೂ ಕೂಡ ಪ್ಯಾಲೆಸ್ಟೈನ್ ಅನ್ನು ಬೆಂಬಲಿಸಿದ್ದಕ್ಕೆ ಸಂಬಂಧಿಸಿದ ಪೋಸ್ಟ್‌ಗಳು ಕಂಡು ಬಂದಿಲ್ಲ.
ಇನ್ನು ವೈರಲ್ ಪೋಸ್ಟ್‌ಗೆ ಹೋಲಿಕೆಯಾಗುವ ಹಾಗೆ ಅಕ್ಷಯ್ ಕುಮಾರ್ ಅವರ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್‌ವೊಂದು ಕಂಡು ಬಂದಿದ್ದು, ಅದು ಆಗಸ್ಟ್ 9 ರಂದು ಅಕ್ಷಯ್ ಕುಮಾರ್ ಅವರ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕಂಡು ಬಂದಿದೆ. ಆ ವಿಡಿಯೋದಲ್ಲಿ ಅವರು ತಮ್ಮ ಫ್ಯಾಷನ್ ಬ್ರ್ಯಾಂಡ್ ಒಂದರ ಕುರಿತು ಮತ್ತು ಆಗಸ್ಟ್ 11 ರಂದು ಬಿಡುಗಡೆಯಾಗಲಿರುವ OMG 2 ಚಿತ್ರದ ಕುರಿತು ಪ್ರಚಾರ ಮಾಡಿದ್ದಾರೆ.
ಇದೇ ವಿಡಿಯೋವನ್ನು ದುರ್ಬಳಕೆ ಮಾಡಿಕೊಂಡಿರುವ ಕೆಲ ಕಿಡಿಗೇಡಿಗಳು, ನೈಜ ವಿಡಿಯೋದಲ್ಲಿನ ಅಕ್ಷಯ್ ಕುಮಾರ್ ಅವರ ಧ್ವನಿಯನ್ನು ನಕಲು ಮಾಡಿ ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದಾರೆ.
ವಿಡಿಯೋ ನೋಡಿ ; Fact Check: ನಾನು ಪ್ಯಾಲೆಸ್ಟೈನ್ ಬೆಂಬಲಿಸುತ್ತೇನೆ ಎಂದು ನಟ ಅಕ್ಷಯ್ ಕುಮಾರ್ ಹೇಳಿಲ್ಲ..!
ಇದನ್ನೂ ಓದಿ ; Fact Check: ಕಾಂಗ್ರೆಸ್ ತನ್ನ ಪಕ್ಷದ ಗುರುತಾಗಿ ಇಸ್ಲಾಮ್ ಚಿಹ್ನೆಯನ್ನು ಆಯ್ಕೆ ಮಾಡಿದೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.