Fact Check: ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ಮಗಳನ್ನೇ ಮದುವೆಯಾಗಿದ್ದಾನೆ ಎಂಬುದು ಸುಳ್ಳು

ಮುಸ್ಲಿಂ

ಇದು ಇಸ್ಲಾಂನ ಸೌಂದರ್ಯ. ಇಲ್ಲಿ ಹೆಂಡತಿಯಾಗಲು ವಯಸ್ಸು ಮುಖ್ಯವಲ್ಲ. ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ಮಗಳಾದ ಪುಟ್ಟ ಬಾಲಕಿಯನ್ನೇ ಮದುವೆಯಾಗಿದ್ದಾನೆ. ಎಂಬ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಫ್ಯಾಕ್ಟ್‌ಚೆಕ್: ಇಟಲಿಯ ಕ್ಯಾಥೋಲಿಕ್ ಕುಟುಂಬವೊಂದು ಕ್ರಿಶ್ಚಿಯನ್ ಸಂಪ್ರದಾಯದಂತೆ ತಮ್ಮ ಮಗಳ ಮೊದಲ ಕಮುನಿಯನ್(communion ceremony) ಆಚರಣೆಯನ್ನು ನಡೆಸುತ್ತಿರುವ ವಿಡಿಯೋ ಇದಾಗಿದೆ. ಹುಡುಗಿಯ ತಂದೆ ಜಿನೊ ಕೊಪ್ಪೊಲಾ ಅಕ್ಟೋಬರ್ 23ರಂದು ತಮ್ಮ ಇಂಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಮೊದಲು ಹಂಚಿಕೊಂಡಿದ್ದಾರೆ.

ಮಾರನೆ ದಿನವೂ ಸಹ ತನ್ನ ಹೆಂಡತಿ ಜೊತೆಗೆ ಮಗಳಿಗೆ ಶುಭಕೋರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಆದ್ದರಿಂದ ಇದು ತಂದೆ ಮಗಳ ನಡುವೆ ನಡೆದ ಮದುವೆಯಲ್ಲ, ವಿಡಿಯೋದಲ್ಲಿರುವವರು ಮುಸ್ಲಿಂ ಸಹ ಅಲ್ಲ.

 


ಇದನ್ನು ಓದಿ: ನಿಮ್ಮ ಮಕ್ಕಳ ಕಲ್ಯಾಣವಾಗಬೇಕಾದರೆ ಕಾಂಗ್ರೆಸ್‌ಗೆ ಮತ ನೀಡಿ ಎಂದು ಪ್ರಧಾನಿ ಮೋದಿ ಹೇಳಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *