ಶಾಲಾ-ವಯಸ್ಸಿನ ಮಕ್ಕಳಿಗೆ ಶಸ್ತ್ರಾಸ್ತ್ರ ಮತ್ತು ಮಿಲಿಟರಿ ವ್ಯಾಯಾಮಗಳಲ್ಲಿ ತರಬೇತಿ ಪಡೆಯುತ್ತಿರುವುದನ್ನು ತೋರಿಸುವ ವೀಡಿಯೊವು ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದ್ದು, ಈಗ ನಡೆಯುತ್ತಿರುವ ಇಸ್ರೇಲ್-ಹಮಾಸ್ ನಡುವಿನ ಸಂಘರ್ಷಕ್ಕೆ ಸಂಬಂಧಿಸಿದ್ದಾಗಿದೆ ಎಂದು ಹಂಚಿಕೊಳ್ಳಲಾಗುತ್ತಿದೆ.. ಆದರೆ ಈ ವಿಡಿಯೋ ಸತ್ಯಾಸತ್ಯತೆಯನ್ನು ಪರಶೀಲಿಸಿದಾಗ ಸಿಕ್ಕ ಉತ್ತರವೇ ಬೇರೆಯದ್ದಾಗಿತ್ತು.
ಕಳೆದ ಒಂದು ಎರಡು ವಾರಗಳಿಂದ “ಹಮಾಸ್ ಬಂಡುಕೋರಾರು ಇಸ್ರೇಲ್ ವಿರುದ್ಧ ಹೋರಾಟವನ್ನು ಮುಂದುವರೆಸಲು ಶಾಲಾ ಮಕ್ಕಳಿಗೆ ಸೈನಿಕ ತರಬೇತಿಯನ್ನು ನೀಡುತ್ತಿದೆ. ಯುದ್ಧದಲ್ಲಿ ಹೋರಾಡಲು ಮಕ್ಕಳನ್ನ ಮುಂದಕ್ಕೆ ಬಿಟ್ಟು ಹಮಾಸ್ ಬಂಡುಕೋರರು ತಪ್ಪಿಸಿಕೊಳ್ಳಲು ರಣತಂತ್ರವನ್ನು ಹೂಡುತ್ತಿದ್ದಾರೆ ಎಂದೆಲ್ಲ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿತ್ತು.
ಹೀಗಾಗಿ ಈ ಕುರಿತು ಡಿಜಿಟಲ್ ಸುದ್ದಿ ಸಂಸ್ಥೆ ಫ್ಯಾಕ್ಟ್‌ಲಿ ಫ್ಯಾಕ್ಟ್ ಚೆಕ್ ನಡೆಸಿದ್ದು. ಇದು 2021ರ ವಿಡಿಯೋ ಎಂದು ದೃಢ ಪಡಿಸಿದೆ. ಈ ವಿಡಿಯೋ ಗಾಜಾ ಬೇಸಿಗೆ ಶಿಬಿರಗಳಲ್ಲಿ ಮಕ್ಕಳಿಗೆ ಮಿಲಿಟರಿ ಮತ್ತು ಶಸ್ತ್ರಾಸ್ತ್ರ ಕೌಶಲ್ಯಗಳಲ್ಲಿ ತರಬೇತಿ ನೀಡುವ ಕುರಿತು ಮಾಹಿತಿಯನ್ನು ನೀಡಲಾಗಿತ್ತು. ಈ ವಿಡಿಯೋ ಬಗ್ಗೆ 2021ರಲ್ಲೇ ಸಾಕಷ್ಟು ಮಾಧ್ಯಮಗಳು ಕೂಡ ವರದಿಯನ್ನ ಆ ವೇಳೆಯಲ್ಲಿ ವರದಿ ಮಾಡಿದ್ದವು.
ಇದರ ಜೊತೆಗೆ ಹಮಾಸ್‌ನ ಈ ನಡೆಗೆ ಅಂದೇ ಜಗತ್ತೀನಾದ್ಯಂತ ವ್ಯಾಪಕವಾದ ಟೀಕೆಯನ್ನ ಕೂಡ ಎದುರಿಸಿತ್ತು. ಜೊತೆಗೆ ಅಂದೇ ಇಸ್ರೇಲ್ ಕೂಡ ಹಮಾಸ್ ವಿರುದ್ಧ ಆಕ್ರೋಶವನ್ನ ಕೂಡ ವ್ಯಕ್ತ ಪಡಿಸಿತ್ತು.
ಹೀಗೆ ಈ ವಿಡಿಯೋಗೆ ಸಂಬಂಧಿಸಿದ ಮಾಹಿತಿಗಳನ್ನು ಕಲೆ ಹಾಕಿದಾಗ ಈ ವಿಡಿಯೋ 2021ರದ್ದು ಎಂಬುದು ದೃಢ ಪಟ್ಟಿದ್ದು ಈಗಿನ ಹಮಾಸ್ ಮತ್ತು ಇಸ್ರೇಲ್ ನಡುವಿನ ಕದನನಕ್ಕೂ ಈ ವಿಡಿಯೋಗೂ ಯಾವುದೇ ರೀತತಿಯಾದ ಸಂಬಂಧವಿಲ್ಲ ಎಂಬುದು ದೃಢ ಪಟ್ಟಿದೆ.
ಈ ಸುದ್ದಿಯನ್ನೂ ಓದಿ : ನಿಮ್ಮ ಮಕ್ಕಳ ಕಲ್ಯಾಣವಾಗಬೇಕಾದರೆ ಕಾಂಗ್ರೆಸ್‌ಗೆ ಮತ ನೀಡಿ ಎಂದು ಪ್ರಧಾನಿ ಮೋದಿ ಹೇಳಿಲ್ಲ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.