ನಟ ಕಾರ್ತಿಕ್ ಆರ್ಯನ್ ಮಧ್ಯಪ್ರದೇಶದ ಕಾಂಗ್ರೆಸ್ ನಾಯಕ ಕಮಲ್ ನಾಥ್‌ರವರ ಪರ ಪ್ರಚಾರ ನಡೆಸಿಲ್ಲ

ಕಾರ್ತಿಕ್ ಆರ್ಯನ್

ಪಂಚರಾಜ್ಯಗಳ ಚುನಾವಣೆಯ ಹೊಸ್ತಿಲಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಬಿರುಸಿನಿಂದ ಪ್ರಚಾರ ನಡೆಸುತ್ತಿವೆ. ಅದರ ಜೊತೆಗೆ ಸಾಕಷ್ಟು ಸುಳ್ಳು ಸುದ್ದಿಗಳನ್ನು ಹರಿಬಿಡಲಾಗಿದೆ. ಅದರಂತೆ, ನಟ ಕಾರ್ತಿಕ್ ಆರ್ಯನ್ ಮಧ್ಯಪ್ರದೇಶದ ಕಾಂಗ್ರೆಸ್ ನಾಯಕ ಕಮಲ್ ನಾಥ್‌ರವರ ಪರ ಪ್ರಚಾರ ನಡೆಸಿದ್ದಾರೆ ಎಂಬ ಜಾಹಿರಾತಿನ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಕಾರ್ಇಕ್ ಆರ್ಯನ್ಈ ವಿಡಿಯೋದಲ್ಲಿ ಕಾಂಗ್ರೆಸ್ ಲೋಗೋ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಉದ್ದೇಶಿತ ಯೋಜನೆಗಳನ್ನು ವಿವರಿಸುವ ವಾಯ್ಸ್ ಓವರ್ ಮತ್ತು ಕಾಂಗ್ರೆಸ್ ನಾಯಕ ಕಮಲ್ ನಾಥ್ ಅವರ ನಕಲಿ ಬಿಲ್ಬೋರ್ಡ್ ಸೇರಿವೆ. ಕಮಲ್ ನಾಥ್ ನೇತೃತ್ವದ ಪಕ್ಷವು ಎರಡು ಲಕ್ಷ ಸರ್ಕಾರಿ ಉದ್ಯೋಗಗಳನ್ನು ಮತ್ತು ವ್ಯವಹಾರವನ್ನು ಪ್ರಾರಂಭಿಸಲು 50,000 ರೂ.ಗಳ ಸಾಲವನ್ನು ನೀಡಲಿದೆ ಎಂದು ಜಾಹೀರಾತಿನಲ್ಲಿ ಹೇಳಲಾಗಿದೆ. ಮಹಿಳೆಯರಿಗೆ ಬಸ್ ಸೇವೆಗಳು ಉಚಿತ, ಗ್ಯಾಸ್ ಸಿಲಿಂಡರ್ ಸೇವೆಗಳು 500 ರೂ ಮತ್ತು ಮಹಿಳೆಯರಿಗೆ ತಿಂಗಳಿಗೆ 1500 ರೂ. ಉಚಿತ ವಿದ್ಯುತ್, ವೈಫೈ ಮತ್ತು ಉನ್ನತ ಶಿಕ್ಷಣ ಸಾಲಗಳನ್ನು ಒದಗಿಸುವ ಯೋಜನೆಗಳನ್ನು ಜಾಹೀರಾತಿನಲ್ಲಿ ವಿವರಿಸಲಾಗಿದೆ.

ಫ್ಯಾಕ್ಟ್‌ಚೆಕ್: ಇದು ಡಿಸ್ನಿ ಪ್ಲಸ್ ಹೊಟ್ಸ್ಟಾರ್‌ಗೆ ನಟ ಕಾರ್ತಿಕ್ ಆರ್ಯನ್ ನೀಡಿರುವ ಕಮರ್ಷಿಯಲ್ ಜಾಹಿರಾತಾಗಿದೆ. ಡಿಸ್ನಿ ಯವರು ಐಸಿಸಿ ಪುರುಷರ ವಿಶ್ವಕಪ್ ಮತ್ತು ಸಿನಿಮಾ, ವೆಬ್ ಸೀರಿಸ್‌ಗಳನ್ನು ನಮ್ಮಲ್ಲಿ ಉಚಿತವಾಗಿ ನೋಡಬಹುದು ಎಂಬ ಸಂದೇಶದೊಂದಿಗೆ ಈ ಜಾಹಿರಾತನ್ನು ಪ್ರಕಟಿಸಿತ್ತು. ಅದನ್ನು ಕಾರ್ತಿಕ್ ಆರ್ಯನ್ ಸಹ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಆದರೆ ಆ ವಿಡಿಯೋವನ್ನು ಎಡಿಟ್ ಮಾಡಿ ನಟ ಕಾರ್ತಿಕ್ ಆರ್ಯನ್ ಮಧ್ಯಪ್ರದೇಶದ ಕಾಂಗ್ರೆಸ್ ನಾಯಕ ಕಮಲ್ ನಾಥ್‌ರವರ ಪರ ಪ್ರಚಾರ ನಡೆಸಿದ್ದಾರೆ ಎಂದು ತಿರುಚಲಾಗಿದೆ.


ಇದನ್ನು ಓದಿ: ಹಮಾಸ್‌ನವರು ಇಸ್ರೇಲಿ ಗರ್ಭಿಣಿ ಮಹಿಳೆಯೊಬ್ಬಳ ಹೊಟ್ಟೆ ಸೀಳಿ ಕ್ರೌರ್ಯ ಮೆರೆದಿದ್ದಾರೆ ಎನ್ನುವುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *