ಹಮಾಸ್‌ನವರು ಇಸ್ರೇಲಿ ಗರ್ಭಿಣಿ ಮಹಿಳೆಯೊಬ್ಬಳ ಹೊಟ್ಟೆ ಸೀಳಿ ಕ್ರೌರ್ಯ ಮೆರೆದಿದ್ದಾರೆ ಎನ್ನುವುದು ಸುಳ್ಳು

“ದಕ್ಷಿಣ ಇಸ್ರೇಲ್‌ನಲ್ಲಿ ಗರ್ಭಿಣಿ ಮಹಿಳೆಯೊಬ್ಬಳ ಪತ್ತೆ ಮಾಡಿದ ಹಮಾಸ್ ಭಯೋತ್ಪಾದಕರು  ಆಕೆಯ ದೇಹವನ್ನು ಸೀಳಿ ಅವರ ಹೊಕ್ಕುಳ ಬಳ್ಳಿಯಿಂದ ಭ್ರೂಣವನ್ನು ಹೊರತೆಗೆದು, ಹುಟ್ಟಲಿರುವ ಮಗು ತನ್ನ ತಾಯಿಯ ಗರ್ಭದಿಂದ ನಿಧಾನವಾಗಿ ಸಾಯುವಂತೆ ಮಾಡಿದ್ದಾರೆ. ಅಮಾನವೀಯ ಅನಾಗರಿಕರಾದ ಹಮಾಸ್ ಜನರಿಗೆ ಮಾಡುತ್ತಿರುವುದು ಇದನ್ನೇ” ಎಂದು ಆದಿತ್ಯ ರಾಜ್ ಕೌಲ್ ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಂತರ ಈ ಸುದ್ದಿಯನ್ನು ಹಲವರು ಹಂಚಿಕೊಂಡಿದ್ದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

9TV Network

ಫ್ಯಾಕ್ಟ್‌ಚೆಕ್: 10 ಆಕ್ಟೋಬರ್ 2023ರಂದು 9ಟಿವಿ ನೆಟ್ವರ್ಕ್‌ನ ಸುದ್ದಿ ಸಂಪಾದಕರಾದ ಆದಿತ್ಯ ರಾಜ್ ಕೌಲ್‌ರವರು ಮೊದಲು ಈ ಸುದ್ಧಿಯನ್ನು ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆದರೆ ಆದಿತ್ಯ ರಾಜ್ ಹಂಚಿಕೊಂಡಿರುವ ತಮ್ಮ ಸುದ್ದಿಗೆ ಯಾವುದೇ ದಾಖಲೆಗಳನ್ನು ಒದಗಿಸಿಲ್ಲ. ಇನ್ನೂ ಹಮಾಸ್ ಮತ್ತು ಇಸ್ರೇಲ್ ಸಂಘರ್ಷವನ್ನು ವರದಿ ಮಾಡುತ್ತಿರುವ IDF ಸಹ ಈ ಸುದ್ದಿಯನ್ನು ಎಲ್ಲಿಯೂ ಪ್ರಕಟಿಸಿಲ್ಲ. ಆದಿತ್ಯ ರಾಜ್ ಕೌಲ್‌ರವರಿಗೆ ಸಹ ಅನೇಕರು ಸಾಕ್ಷಿ ಒದಗಿಸುವಂತೆ ಒತ್ತಾಯಿಸಿದ್ದಾರೆ ಮತ್ತು ಈ ಸುಳ್ಳು ಸುದ್ದಿಯನ್ನು ರಿಪೋರ್ಟ್ ಮಾಡಿದ್ದಾರೆ.

ಈ ಘಟನೆ ಮೂಲತಃ ನಡೆದಿರುವುದು 40 ವರ್ಷಗಳ ಹಿಂದೆ ಲೆಬನಾನ್‌ನಲ್ಲಿ ನಡೆದ ಸಬ್ರಾ ಮತ್ತು ಶಟಿಲ ಹತ್ಯಕಾಂಡದ ಸಂದರ್ಭದ್ದಾಗಿದೆ ಇದನ್ನು ಅರಬ್ ನ್ಯೂಸ್ 2022ರಲ್ಲಿ ವರದಿ ಮಾಡಿದೆ (1982ರ ಸೆಪ್ಟಂಬರ್ 16ರಿಂದ 18ರವರೆಗೆ ಬೈರುತ್ ನ ಹೊರವಲಯದಲ್ಲಿರುವ ಸಬ್ರಾ ಮತ್ತು ಶಟಿಲಾ ಶಿಬಿರಗಳಲ್ಲಿ ಇಸ್ರೇಲ್ ಜತೆ ಮೈತ್ರಿ ಮಾಡಿಕೊಂಡಿದ್ದ ಕ್ರಿಶ್ಚಿಯನ್ ಸೇನಾಪಡೆಗಳು 800ರಿಂದ 2,000 ಫೆಲೆಸ್ತೀನೀಯರನ್ನು ಮತ್ತು ಲೆಬನಾನ್‌ ಜನರ ನರಮೇಧ ನಡೆಸಿದ್ದವು).


ಇದನ್ನು ಓದಿ: Fact Check : ಚುನಾವಣೆ ಹತ್ತಿರ ಬರುತ್ತಿದ್ದಂತೆ ಪ್ರಿಯಾಂಕ ಗಾಂಧಿ ದೇವಸ್ಥಾನ ಸುತ್ತುತ್ತಿದ್ದಾರೆಂದು ಹಳೆ ಫೋಟೋ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *