Fact Check | ವಿರಾಟ್‌ ಕೊಹ್ಲಿ ಪ್ರಧಾನಿ ಮೋದಿಯವರಿಗೆ Herbalife ಉಡುಗೊರೆ ನೀಡಿದ್ದಾರೆಂಬುದು ಸುಳ್ಳು

“ಖ್ಯಾತ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಅವರು ಹೆರ್ಬಲೈಫ್‌ ಸಂಸ್ಥೆಯ ಭಾಗವಾಗಿದ್ದಾರೆ ಮತ್ತು ದಂಪತಿ ಸಮೇತವಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಹೆರ್ಬಲೈಫ್‌ ಗಿಫ್ಟ್‌ ಬ್ಯಾಗ್‌ ಅನ್ನು ನೀಡಿದ್ದಾರೆ” ಎಂಬ ಉಲ್ಲೇಖದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹಲವು ವರ್ಷಗಳಿಂದ ಫೋಟೋವೊಂದು ವೈರಲ್‌ ಆಗುತ್ತಿದೆ.

ಈ ಫೋಟೋದಲ್ಲಿ ವಿರಾಟ್‌ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುತ್ತಿರುವುದು ಕಂಡು ಬಂದಿದ್ದು. ವಿರಾಟ್‌ ಕೊಹ್ಲಿ ದಂಪತಿ ಪ್ರಧಾನಿ ಮೋದಿ ಅವರಿಗೆ ಉಡುಗೊರೆಯನ್ನು ನೀಡುವುದು ಕಾಣಬಹುದಾಗಿ. ಇದೇ ಫೋಟೋವನ್ನು ಹಲವು ಜಾಹಿರಾತು ಕಂಪನಿಗಳ ಲೋಗೋಗಳೊಂದಿಗೆ ತಳಕು ಹಾಕಲಾಗಿದೆ.

ಈ ವೈರಲ್‌ ಆಗುತ್ತಿರುವ ಈ ಫೋಟೋ  ಕುರಿತು ಫ್ಯಾಕ್ಟ್‌ಚೆಕ್‌ ಮಾಡಿದಾಗ ಈ ಫೋಟೋ 2017ರದ್ದಾಗಿದೆ ಎಂದು ತಿಳಿದು ಬಂದಿದೆ. ವಿರಾಟ್‌ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರು ತಮ್ಮ ಮದುವೆಯ ಔತಣ ಕೂಟಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸುವ ಸಂದರ್ಭದಲ್ಲಿ ತೆಗೆಯಲಾದ ಫೋಟೋ ಇದಾಗಿದೆ ಎಂದು ಹಲವು ಮಾಧ್ಯಮಗಳು ಕೂಡ ಆ ಸಂದರ್ಭದಲ್ಲಿ ವರದಿ ಮಾಡಿದ್ದವು

ಆದರೆ ಇದೇ ಫೋಟೋವನ್ನು ಬಳಸಿಕೊಂಡಿರುವ ಕೆಲ ಕಿಡಿಗೇಡಿಗಳು ಇದೇ ನಿಜವಾದ ಫೋಟೋ ಎಂದು ಕೊಂಡಿದ್ದಾರೆ. ಇನ್ನು ವಿರಾಟ್‌ ಕೊಹ್ಲಿ ಅವರು  ಹೆರ್ಬಲೈಫ್‌ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಅವರು ಎಂದಿಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೆರ್ಬಲೈಪ್‌ ಕಂಪನಿಯ ಉಪಕರಣಗಳನ್ನು ಉಡುಗೊರೆಯಾಗಿ ನೀಡಿಲ್ಲ..


ಇದನ್ನೂ ಓದಿ : ಮುಂದೊಂದು ದಿನ ಎಲ್ಲಾ ಮುಜರಾಯಿ ದೇವಸ್ಥಾನದ ಅರ್ಚಕರೂ ಮುಸ್ಲಿಮರೇ ಎಂಬುದು ಸುಳ್ಳು


ವಿಡಿಯೋ ನೋಡಿ : ಜಪಾನ್‌ನಲ್ಲಿ ಮುಸ್ಲಿಮರಿಗೆ ಪೌರತ್ವ ಮತ್ತು ಬಾಡಿಗೆಗೆ ಮನೆ ನೀಡುವುದಿಲ್ಲ ಎಂಬುದು ಸುಳ್ಳುನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *