ಜನನ ನಿಯಂತ್ರಣ ಕಾನೂನನ್ನು ತರದಿದ್ದರೆ ಭಾರತ ಇಸ್ಲಾಮಿಕ್ ರಾಷ್ಟ್ರವಾಗಲಿದೆ ಎಂದು ಜೂಲಿಯನ್ ಅಸಾಂಜ್ ಹೇಳಿಲ್ಲ

ಇಸ್ಲಾಮಿಕ್ ರಾಷ್ಟ್ರ

ಬಹುತ್ವಕ್ಕೆ, ಸಾಮರಸ್ಯಕ್ಕೆ ನೆಲವೀಡಾಗಿರುವ ಭಾರತದಲ್ಲಿ ದಿನೇ ದಿನೇ ಮತೀಯ ದ್ವೇಷ ಹೆಚ್ಚಾಗುತ್ತಿದೆ. ಅಲ್ಪಸಂಖ್ಯಾತರಾದ ಮುಸ್ಲಿಂ ಸಮುದಾಯದ ಮೇಲೆ ನಿರಂತರವಾಗಿ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ಇದರ ಪರಿಣಾಮವಾಗಿ ಕೋಮುದ್ವೇಷ ಹರಡಿ ಹಲ್ಲೆಗಳು, ಬಹಿಷ್ಕಾರಗಳು ಮತ್ತು ಕೊಲೆಗಳ ಪ್ರಕರಣಗಳು ಸಹ ಹೆಚ್ಚಾಗಿ ಸಮಾಜದ ಸ್ವಸ್ಥ್ಯವೇ ಹಾಳಾಗುತ್ತಿದೆ.

ಇತ್ತೀಚೆಗೆ, “ದೇಶದ ಮುಂದಿನ ಪ್ರಧಾನಿ ಎಷ್ಟೇ ರಾಷ್ಟ್ರೀಯವಾದಿಯಾಗಿದ್ದರೂ ಮುಸ್ಲಿಂ ಜನಸಂಖ್ಯೆಯ ಸ್ಫೋಟವನ್ನು ತಡೆಗಟ್ಟಲು ಚೀನಾ ಮತ್ತು ಮ್ಯಾನ್ಮಾರ್ ನಂತಹ ಒಂದು ಅಥವಾ ಎರಡು ಮಕ್ಕಳ ಕುಟುಂಬ ಯೋಜನೆ ಕಾನೂನನ್ನು ಅವರ ಸರ್ಕಾರ ಜಾರಿಗೆ ತರದಿದ್ದರೆ, ಭಾರತವು ಇಸ್ಲಾಮಿಕ್ ರಾಷ್ಟ್ರವಾಗಲಿದೆ. ಎಂದು ಆಸ್ಟ್ರೇಲಿಯಾದ ಜೂಲಿಯನ್ ಅಸಾಂಜ್ ಹೇಳಿದ್ದಾರೆ. ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಫ್ಯಾಕ್ಟ್‌ಚೆಕ್:  ವಿಕಿಲಿಕ್ಸ್(WikiLeaks)ನ ಮಾಲಿಕ, ಸಂಪಾದಕ ಮತ್ತು ಸಾಮಾಜಿಕ ಕಾರ್ಯಕರ್ತರಾಗಿರುವ ಆಸ್ಟ್ರೇಲಿಯ ಮೂಲದ  ಜೂಲಿಯನ್ ಅಸಾಂಜ್ ಮುಸ್ಲೀಮರ ಕುರಿತಂತೆ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಮಾಧ್ಯಮಗಳಲ್ಲಿ ಸಹ ಎಲ್ಲಿಯೂ ಇದು ವರದಿ ಆಗಿಲ್ಲ. ಬದಲಾಗಿ 18 ಡಿಸೆಂಬರ್ 2010 ರಲ್ಲಿ ತಮ್ಮ ವಿಕಿಲಿಕ್ಸ್ ನಲ್ಲಿ “ಭಾರತದ ಮುಸ್ಲಿಮರು ಹೆಚ್ಚಾಗಿ ಉಗ್ರವಾದಕ್ಕೆ ಆಕರ್ಷಿತರಾಗಲಿಲ್ಲ” ಎಂದು ಭಾರತೀಯ ಮುಸ್ಮೀಮರನ್ನು ಶ್ಞಾಘಿಸಿದ್ದರು. ಇದಕ್ಕೆ ಮುಖ್ಯ ಕಾರಣ “ಭಾರತದ ಬೆಳೆಯುತ್ತಿರುವ ಆರ್ಥಿಕತೆ, ಸ್ವಂದಿಸುವ ಪ್ರಜಾಪ್ರಭುತ್ವ ಮತ್ತು ಅಂತರ್ಗತ ಸಂಸ್ಕೃತಿ, ಮುಸ್ಲಿಮರನ್ನು ಮುಖ್ಯವಾಹಿನಿಯಲ್ಲಿ ಯಶಸ್ಸು ಮತ್ತು ಸಾಮಾಜಿಕ ಚಲನಶೀಲತೆಯನ್ನು ಹುಡುಕಲು ಪ್ರೋತ್ಸಾಹಿಸುತ್ತದೆ ಮತ್ತು ಪರಕೀಯತೆಯನ್ನು ಕಡಿಮೆ ಮಾಡುತ್ತದೆ.” ಎಂದಿದ್ದಾರೆ. ಆದ್ದರಿಂದ ಪರಕೀಯತೆ ಸೃಷ್ಟಿಸಿದಷ್ಟು ಮನಸ್ಸು ಅಥವಾ ಸಮಾಜ ಒಡೆದು ಹೋಗುತ್ತದೆ. ಕೋಮುದ್ವೇಷಗಳು, ಉಗ್ರವಾದಗಳು ಈಗಿನ ಸಾಮರಸ್ಯವನ್ನು ಹಾಳುಗೆಡವುತ್ತದೆ. ಹಾಗಾಗಿ  ಭಾರತಲ್ಲಿ ಒಂದು ಅಥವಾ ಎರಡು ಮಕ್ಕಳ ಕುಟುಂಬ ಯೋಜನೆ ಜಾರಿಗೆ ತರಲಿಲ್ಲವಾದರೆ ಭಾರತ ಇಸ್ಲಾಮಿಕ್ ರಾಷ್ಟ್ರವಾಗಲಿದೆ. ಎಂದು ಜೂಲಿಯನ್ ಅಸಾಂಜ್ ಹೇಳಿದ್ದಾರೆ ಎಂಬ ಈ ಹೇಳಿಕೆ ತಿರುಚಲಾಗಿದೆ.


ಇದನ್ನು ಓದಿ: ಮುಂದೊಂದು ದಿನ ಎಲ್ಲಾ ಮುಜರಾಯಿ ದೇವಸ್ಥಾನದ ಅರ್ಚಕರೂ ಮುಸ್ಲಿಮರೇ ಎಂಬುದು ಸುಳ್ಳು


ವಿಡಿಯೋ ನೋಡಿ: ಪ್ರೇಮ ವಿವಾಹ ಅಥವಾ ನ್ಯಾಯಾಲಯ ವಿವಾಹಗಳಿಗೆ ಪೋಷಕರ ಅನುಮತಿ ಕಡ್ಡಾಯ ಎಂದು ಸುಪ್ರೀಂ ಕೋರ್ಟ್ ಹೇಳಿಲ್ಲ| Love Marriage


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *