Fact Check | ಅರಿಶಿನ ಕಷಾಯ ಸೇವಿಸುವುದರಿಂದ ರಕ್ತ ಹೀನತೆ ತಡೆಯಬಹದು ಎಂಬುದು ಸುಳ್ಳು

“ಹಲವು ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಹೊಂದಿರುವ ಅರಿಶಿನದಿಂದ ಹಲವು ಪ್ರಯೋಜನಗಳಿವೆ. ಅದೇ ರೀತಿ ಅರಿಶಿನದ ಕಷಾಯವನ್ನು ಸೇವಿಸುವುದರಿಂದ ರಕ್ತಹೀನತೆಯನ್ನು ಸಂಪೂರ್ಣವಾಗಿ ತಡೆಗಟ್ಟಬಹದು” ಎಂಬಬ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿದೆ.

ಜೊತೆಗೆ ಈ ಪೋಸ್ಟ್‌ನ್ನು ನಂಬಿ ಸಾಕಷ್ಟು ಮಂದಿ ತಮ್ಮ ವಿವಿಧ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಶೇರ್‌ ಮಾಡಿಕೊಳ್ಳುತ್ತಿದ್ದಾರೆ. ವಾಸ್ತವದಲ್ಲಿ ಅರಿಶಿನವನ್ನು ಭಾರತ ಸೇರಿದಂತೆ ಸಾಕಷ್ಟು ರಾಷ್ಟ್ರಗಳಲ್ಲಿ ಆರೋಗ್ಯಕ್ಕೆ ಒಳ್ಳೆಯದು ಎಂಬ ಉದ್ದೇಶಕ್ಕೆ ಬಳಸಲಾಗುತ್ತದೆ. ಆದರೆ ಅರಶಿನದಿಂದ ರಕ್ತಹೀನತೆಯನ್ನು ತಡೆಬಹುದು ಎಂಬ ವಿಚಾರದ ಕುರಿತು ಫ್ಯಾಕ್ಟ್‌ಚೆಕ್‌ ನಡೆಸಿದಾಗ ಸತ್ಯ ವಿಚಾರ ಬೆಳಕಿಗೆ ಬಂದಿದೆ.

ಸತ್ಯ ಶೋಧನೆಯಲ್ಲಿ ಅರಿಶಿನ ಆರೋಗ್ಯಕ್ಕೆ ಒಳ್ಳೆಯದು ಎಂಬುದು ವೈಜ್ಙಾನಿಕವಾಗಿ ಸಾಭೀತಾಗಿರುವ ಕುರಿತು ಮಾಹಿ ಲಭ್ಯವಾಗಿದೆ. ಆದರೆ ಅರಿಶಿನದಿಂದ ರಕ್ತಹೀನತೆಯನ್ನು ಸಂಪೂರ್ಣವಾಗಿ ತಡೆಗಟ್ಟಬಹುದು ಎಂಬುದು ಇದುವರೆಗೂ ವೈಜ್ಙಾನಿಕವಾಗಿ ಸಾಭೀತಾಗಿಲ್ಲ. ಈ ಕುರಿತು ನ್ಯೂಸ್‌ ಮೀಟರ್‌ ತಂಡ ವೈದ್ಯರನ್ನು ಸಂಪರ್ಕಿಸಿ ಮಾಹಿತಿಯನ್ನ ಪಡೆದುಕೊಂಡಿದೆ. ಆದ ವೈದ್ಯರು ಅರಿಶಿನ ಕಷಾಯ ರಕ್ತಹೀನತೆಯನ್ನು ತಡೆಯುತ್ತದೆ ಎಂಬ ವಿಚಾರವನ್ನು ಸಾರಸಗಟಾಗಿ ತಳ್ಳಿ ಹಾಕಿದ್ದಾರೆ.

ಅಸಲಿಗೆ ರಕ್ತಹೀನತೆ ಉಂಟಾಗಲು ನೂರಾರು ಕಾರಣಗಳಿರುತ್ತವೆ. ಒಬ್ಬೊಬ್ಬ ರೋಗಿಗೆ ಒಂದೊಂದು ಕಾರಣಕ್ಕೆ ರಕ್ತಹೀನತೆ ಉಂಟಾಗುತ್ತವೆ. ಹೀಗೆ ವಿವಿಧ ಕಾರಣಗಳಿಂದ ರಕ್ತಹೀನತೆ ಉಂಟಾದವರಿಗೆ ಬೇರೆ ಬೇರೆ ರೀತಿಯಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ಹಾಗಾಗಿ ರಕ್ತಹೀನತೆ ಉಂಟಾದ ಎಲ್ಲಾ ರೋಗಿಗಳಿಗೆ ಅರಿಶಿನದ ಕಷಾಯ ಕುಡಿಸಿದರೆ ರಕ್ತಹೀನತೆ ಕಡಿಮೆಯಾಗುತ್ತದೆ ಎಂಬ ಪ್ರತಿಪಾದನೆ ಸುಳ್ಳಿನಿಂದ ಕೂಡಿದೆ ಮತ್ತು ಜನರ ದಾರಿ ತಪ್ಪಿಸುವ ವಾದವಾಗಿದೆ


ಇದನ್ನೂ ಓದಿ : ಜನನ ನಿಯಂತ್ರಣ ಕಾನೂನನ್ನು ತರದಿದ್ದರೆ ಭಾರತ ಇಸ್ಲಾಮಿಕ್ ರಾಷ್ಟ್ರವಾಗಲಿದೆ ಎಂದು ಜೂಲಿಯನ್ ಅಸಾಂಜ್ ಹೇಳಿಲ್ಲ


ವಿಡಿಯೋ ನೋಡಿ: ಪ್ರೇಮ ವಿವಾಹ ಅಥವಾ ನ್ಯಾಯಾಲಯ ವಿವಾಹಗಳಿಗೆ ಪೋಷಕರ ಅನುಮತಿ ಕಡ್ಡಾಯ ಎಂದು ಸುಪ್ರೀಂ ಕೋರ್ಟ್ ಹೇಳಿಲ್ಲ| Love Marriage


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *