ಸಾಮಾಜಿಕ ಜಾಲತಾಣದಲ್ಲಿ “ಪ್ರಧಾನಿ ನರೇಂದ್ರ ಮೋದಿ ಮಹಿಳೆಯೊಬ್ಬರ ಮುಂದೆ ತಲೆಬಾಗಿ ನಮಸ್ಕರಿಸಿದ್ದಾರೆ. ಪ್ರಧಾನಿ ಅವರು ಹೀಗೆ ನಮಸ್ಕರಿಸುತ್ತಿರುವುದು ರೈತ ಮಹಿಳೆಗೊ, ಯೋಧ ಮಹಿಳೆಗೊ ಅಲ್ಲ, ಬದಲಿಗೆ ಮೋದಿ ನಮಸ್ಕರಿಸುತ್ತಿರುವ ಮಹಿಳೆ ಖ್ಯಾತ ಉದ್ಯಮಿ ಅದಾನಿ ಅವರ ಪತ್ನಿ ಪ್ರೀತಿ” ಎಂದು ಮಹಿಳೆಯೊಬ್ಬರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನಮಸ್ಕರಿಸಿರುವ ಫೋಟೋ ವೈರಲ್ ಆಗಿದೆ.
ಇದನ್ನು ಸಾಕಷ್ಟು ಮಂದ ಹಂಚಿಕೊಂಡಿದ್ದು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಟೀಕೆಯನ್ನು ಮಾಡುತ್ತಿದ್ದಾರೆ. ಆದರೆ ಈ ಕುರಿತು ಫ್ಯಾಕ್ಟ್ ಚೆಕ್ ನಡೆಸಿದಾಗ ಅದರಲ್ಲಿ ಸಿಕ್ಕ ಉತ್ತರ ಬೇರೆಯದ್ದೇ ಆಗಿತ್ತು. ಆದರೆ ಈ ಫೋಟೋ ಬಗ್ಗೆ ಪರಿಶೀಲನೆ ನಡೆಸದೆ ಸಾಕಷ್ಟು ಮಂದಿ ಹಂಚಿಕೊಳ್ಳುತ್ತಿರುವುದರಿಂದ ಅದಾನಿ ಪತ್ನಿಗೇ ಪ್ರಧಾನಿ ನಮಸ್ಕರಿಸುತ್ತಿದ್ದಾರೆ ಎಂದು ಸಾಕಷ್ಟು ಮಂದಿ ಇದೇ ಫೋಟೋವನ್ನು ಹಂಚಿಕೊಂಡಿದ್ದಾರೆ.
ಆದರೆ ಈ ವೈರಲ್ ಫೋಟೋವನ್ನು 2015ರಲ್ಲಿ ಕ್ಲಿಕ್ಕಿಸಲಾಗಿದ್ದು ಮೋದಿ ನಮಸ್ಕರಿಸುತ್ತಿರುವ ಮಹಿಳೆಯನ್ನು ದೆಹಲಿಯ NGO ದಿವ್ಯಜ್ಯೋತಿ ಸಾಂಸ್ಕೃತಿಕ ಸಂಸ್ಥೆ ಮತ್ತು ಸಮಾಜ ಕಲ್ಯಾಣ ಸಂಘದ (DCOWS) ಮುಖ್ಯ ಕಾರ್ಯಕಾರಿ ಅಧಿಕಾರಿ ದೀಪಿಕಾ ಮೊಂಡೋಲ್ ಎಂದು ತಿಳಿದು ಬಂದಿದೆ.. ಇನ್ನು ಈ ಕುರಿತು ಒನ್ ಇಂಡಿಯಾ ಕೂಡ ವರದಿ ಮಾಡಿ ಪ್ರಧಾನಿ ನರೇಂದ್ರ ಮೋದಿ ಮತ್ತು ದೀಪಿಕಾ ಮಂಡೋಲ್ ಅವರ ಬಗ್ಗೆ ತಿಳಿಸಿತ್ತು.
ಇನ್ನು, ಅಮರ್ ಉಜಾಲಾದಲ್ಲಿ ದೀಪಿಕಾ ಅವರ 2018 ರಲ್ಲಿ ಪ್ರಕಟವಾದ ಲೇಖನವೂ ಪ್ರಧಾನಿ ಮೋದಿ ಅವರ ಭೇಟಿಯನ್ನ ಖಚಿತಪಡಿಸಿದೆ. ದೀಪಿಕಾ ಅವರ ಪತಿ ಸಮರ್ ಮೊಂಡೋಲ್ ಅವರು ಈ ಪೋಟೋದೊಂದಿಗೆ ಹಂಚಿಕೊಳ್ಳಲಾಗುತ್ತಿರುವ ಸುಳ್ಳು ಸುದ್ದಿಗಳ ವಿರುದ್ಧ ಈ ಹಿಂದೆ ಆಕ್ರೋಶ ವ್ಯಕ್ತ ಪಡಿಸಿದ್ದರು. ಹಾಗಾಗಿ ಮೇಲಿನ ಆಪಾದನೆ ಸುಳ್ಳಾಗಿದೆ.
ಇದನ್ನೂ ಓದಿ : ಜಪಾನ್‌ನಲ್ಲಿ ಮುಸ್ಲಿಮರಿಗೆ ಪೌರತ್ವ ಮತ್ತು ಬಾಡಿಗೆಗೆ ಮನೆ ನೀಡುವುದಿಲ್ಲ ಎಂಬುದು ಸುಳ್ಳು
ವಿಡಿಯೋ ನೋಡಿ : Fact Check: ಜಪಾನ್‌ನಲ್ಲಿ ಮುಸ್ಲಿಮರಿಗೆ ಪೌರತ್ವ ಮತ್ತು ಬಾಡಿಗೆಗೆ ಮನೆ ನೀಡುವುದಿಲ್ಲ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ