Fact Check | ವಿರಾಟ್‌ ಕೊಹ್ಲಿ ಗೋಮಾಂಸ ಸೇವಿಸಿದ್ದಾರೆ ಎಂಬ ರೆಸ್ಟೋರೆಂಟ್ ಬಿಲ್ ನಕಲಿ

“ಅಮೆರಿಕದ ಫ್ಲೋರಿಡಾದಲ್ಲಿರುವ ಗಾರ್ಡನ್ ರಾಮ್‌ಸೇ ರೆಸ್ಟೊರೆಂಟ್‌ನಲ್ಲಿ ವಿರಾಟ್ ಕೊಹ್ಲಿ ಗೋಮಾಂಸ ಸೇವಿಸಿದ್ದಾರೆ. ಇದಕ್ಕೆ ಸಂಬಂಧ ಪಟ್ಟ ಬಿಲ್ ಈಗ ವೈರಲ್ ಅಗಿದೆ.” ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಫೋಟೋದೊಂದಿಗೆ ವೈರಲ್‌ ಆಗುತ್ತಿದೆ. ಈ ಫೋಟೋವನ್ನು ಸಾಕಷ್ಟು ಮಂದಿ ಹಂಚಿಕೊಂಡಿದ್ದಾರೆ. ಇನ್ನು ಕೆಲವರು ಇದೊಂದು ಸುಳ್ಳು ಸುದ್ದಿ ಎಂದು ಪ್ರತಿಪಾದಿಸಿದ್ದಾರೆ

ವಿರಾಟ್‌ ಕೊಹ್ಲಿ ಗೋಮಾಂಸ ಸೇವನೆ ಮಾಡಿದ್ದಾರೆ ಎಂದು ಎಕ್ಸ್‌ ಖಾತೆಯಲ್ಲಿ ಸುಳ್ಳಿನೊಂದಿಗೆ ಹಂಚಿಕೊಳ್ಳಲಾಗಿರುವ  ಪೋಸ್ಟ್‌

ಇನ್ನು ಕೆಲವೊಂದು ಪೋಸ್ಟ್‌ಗಳಲ್ಲಿ ವಿರಾಟ್‌ ಕೊಹ್ಲಿ ಗೋಮಾಂಸ ಸೇವನೆ ಮಾಡಿದ್ದಾರೆ ಎಂದು ಅವರು ತಮ್ಮ ಕುಟುಂಬದೊಂದಿಗೆ ರೆಸ್ಟೋರೆಂಟ್‌ನಲ್ಲಿ ಇರುವ ಫೋಟೋವನ್ನು ಶೇರ್‌ ಕೂಡ ಮಾಡುತ್ತಿದ್ದಾರೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ರೆಸ್ಟೋರೆಂಟ್‌ನ ಬಿಲ್‌ ಮತ್ತು ವಿರಾಟ್‌ ಕೊಹ್ಲಿ ಅವರು ತಮ್ಮ ಕುಟುಂಬದೊಂದಿಗೆ ಇರುವ ಫೋಟೋವನ್ನು ಪರಿಶೀಲನೆ ನಡೆಸಿದಾಗ ನಿಜಾಂಶ ಹೊರ ಬಂದಿದೆ.

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ಬಿಲ್‌ ಅನ್ನು ಪರಿಶೀಲನೆ ನಡೆಸಿದಾಗ  ರೆಸ್ಟೋರೆಂಟ್ ಬಿಲ್‌ನ ವೈರಲ್ ಸ್ಕ್ರೀನ್‌ಶಾಟ್ ಅಮೆರಿಕನ್ ದಂಪತಿಗಳಿಗೆ ಸಂಬಂಧಿಸಿದೆ ಎಂದು ತಿಳಿದು ಬಂದಿದೆ. ಈ ಅಮೆರಿಕನ್‌ ದಂಪತಿಗಳು ರೆಸ್ಟೋರೆಂಟ್‌ನಲ್ಲಿ ಮೆನುವನ್ನು ತಪ್ಪಾಗಿ ಓದಿದ್ದರಿಂದ ಈ ದುಬಾರಿ ಬಿಲ್‌ ಬಂದಿದೆ ಈ ಕುರಿತು ಪೋಸ್ಟ್‌ ಕೂಡ ಮಾಡಿದ್ದಾರೆ. ಹಾಗಾಗಿ ವೈರಲ್ ಅಗಿರುವ ಬಿಲ್‌ಗೂ ವಿರಾಟ್ ಕೊಹ್ಲಿಗೂ ಯಾವುದೇ ಸಂಬಂಧವಿಲ್ಲ.

ಕೇವಲ ಇಷ್ಟು ಮಾತ್ರವಲ್ಲ ಈ ರೆಸ್ಟೋರೆಂಟ್‌ನಲ್ಲಿ ವಿರಾಟ್ ಕೊಹ್ಲಿ ಊಟ ಮಾಡಿದ ಬಗ್ಗೆ ಯಾವುದೇ ವರದಿಗಳು ಕಂಡು ಬಂದಿಲ್ಲ.. ಇನ್ನು, ವಿರಾಟ್ ಕೊಹ್ಲಿ ತಮ್ಮ ಪತ್ನಿ ಮತ್ತು ಮಗಳೊಂದಿಗೆ ಮೇಜಿನ ಮೇಲೆ ಕುಳಿತಿರುವ ಫೋಟೋ ಅಕ್ಟೋಬರ್ 2021 ರಲ್ಲಿ ದುಬೈನಲ್ಲಿ ನಡೆದ ICC T20 ವಿಶ್ವಕಪ್ ಟೂರ್ನಿಯ ಬಿಡುವಿನ ವೇಳೆಯಲ್ಲಿ ತಮ್ಮ ಕುಟುಂಬದೊಂದಿಗೆ ರೆಸ್ಟೋರೆಂಟ್‌ನಲ್ಲಿ ಊಟ ಮಾಡುವಾಗ ತೆಗೆಯಲಾಗಿದೆ.


ಇದನ್ನೂ ಓದಿ : Fact Check | SFI ಜಿಲ್ಲಾಧ್ಯಕ್ಷರ ಫೋಟೋವನ್ನು ಮನೋರಂಜನ್‌ ಎಂದು ಸುಳ್ಳು ಹರಡಿದ ಕಿಡಿಗೇಡಿಗಳು


ವಿಡಿಯೋ ನೋಡಿ : Fact Check | SFI ಜಿಲ್ಲಾಧ್ಯಕ್ಷರ ಫೋಟೋವನ್ನು ಮನೋರಂಜನ್‌ ಎಂದು ಸುಳ್ಳು ಹರಡಿದ ಕಿಡಿಗೇಡಿಗಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *