“ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿ ಡಾ.ಮೋಹನ್ ಯಾದವ್ ಮುಸ್ಲಿಮರಿಗೆ “ಅವರ ಧರ್ಮದ ಆಚರಣೆಗೆ ನಾವು ಅಡ್ಡಿ ಪಡಿಸುವುದಿಲ್ಲ. ದೇಶ ವಿರೋಧಿ ಘೋಷಣೆಗಳನ್ನ ಕೂಗಿದರೆ ಪರಿಣಾಮ ಎದುರಿಸಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ ಈ ವಿಡಿಯೋ ನೋಡಿ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
Mohan Yadav, the New CM designate of Madya Pradesh makes the ground rule very clear. pic.twitter.com/57Jq0qXEl6
— Harbhajan ਹਰਭਜਨ🇮🇱 (@harbhajn121) December 13, 2023
ಈ ವಿಡಿಯೋದಲ್ಲಿ ” ಅವರು ( ದೇಶ ವಿರೋಧಿ ಘೋಷಣೆ ಕೂಗಿದವರು ) ಅವರ ತಾಯಿಯ ಎದೆ ಹಾಲು ಕುಡಿದವರೇ ಆಗಿದ್ದರೇ ಒಮ್ಮೆ ಹೋಗಿ ತಾಲಿಬಾನ್‌ನಲ್ಲಿ ವಾಸ ಮಾಡಿ ಬರಲಿ ” ಎಂಬ ಹೇಳಿಕೆಯನ್ನು ವ್ಯಕ್ತಿಯೊಬ್ಬ ನೀಡುತ್ತಿರುವುದು ಕಾಣಬಹುದಾಗಿದೆ. ಆದರೆ ಈ ವಿಡಿಯೋದಲ್ಲಿರುವ ವ್ಯಕ್ತಿ ಡಾ.ಮೋಹನ್ ಯಾದವ್ ಎಂಬುದರ ಕುರಿತು ಪರಿಶೀಲನೆ ನಡೆಸಿದಾಗ ಸತ್ಯ ಹೊರ ಬಂದಿದೆ.
ಫ್ಯಾಕ್ಟ್‌ಚೆಕ್
ಈ ಕುರಿತು ಫ್ಯಾಕ್ಟ್‌ಚೆಕ್ ನಡೆಸಿದಾಗ ವೈರಲ್ ಆಗಿರುವ ವಿಡಿಯೋ 23 ಆಗಸ್ಟ್ 2021 ರಿಂದಲೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಡಿಯೋವನ್ನು ಹಲವು ಯೂಟ್ಯೂಬ್ ಚಾನಲ್‌ಗಳು 2021ರಲ್ಲೇ ಹಂಚಿಕೊಂಡಿವೆ ಮತ್ತು ಕೆಲ ಮಾಧ್ಯಮಗಳು ಕೂಡ ಈ ವಿಡಿಯೋದಲ್ಲಿರುವ ವ್ಯಕ್ತಿ ಮಾತನಾಡಿರುವ ವಿಷಯದ ಕುರಿತು ವರದಿಗಳನ್ನು ಮಾಡಿವೆ..
ಇನ್ನು ಈ ವಿಡಿಯೋದಲ್ಲಿರುವ ವ್ಯಕ್ತಿ ಭೂಪಾಲ್‌ನ ಹೂಝೂರ್ ವಿಧಾನಸಭಾ ಕ್ಷೇತ್ರದ ಬಿಜೆಪಿ ನಾಯಕ ರಾಮೇಶ್ವರ್ ಶರ್ಮಾ ಎಂಬುದು ತಿಳಿದು ಬಂದಿದೆ. ಇವರು ಈ ವಿಡಿಯೋದಲ್ಲಿ ಹೇಳಿಕೆ ನೀಡುವ ಸಂದರ್ಭದಲ್ಲಿ ದೇಶ ವಿರೋಧಿ ಘೋಷಣೆ ಕೂಗಿದವರ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗಿತ್ತು.
ಈ ಸಂದರ್ಭದಲ್ಲಿ ದೇಶ ವಿರೋಧಿ ಘೋಷಣೆ ಕೂಗಿದವರಿಗೆ ಅವರು ಎಚ್ಚರಿಕೆ ನೀಡಿದ್ದರು ಇದೇ ವಿಡಿಯೋವನ್ನು ಬಳಸಿ ಮಧ್ಯ ಪ್ರದೇಶದ ನೂತನ ಸಿಎಂ ಮುಸಲ್ಮಾನರ ವಿರುದ್ಧ ಮಾತನಾಡಿದ್ದಾರೆ ಎಂದು ಸುಳ್ಳು ಹರಡಲಾಗುತ್ತಿದೆ.
ಇದನ್ನೂ ಓದಿ : Fact Check | ತೆಲಂಗಾಣದಲ್ಲಿ ಮುಸಲ್ಮಾನರ ಅಭಿವೃದ್ಧಿಗೆ ಹಿಂದೂಗಳ ದೇವಾಲಯದ ಭೂಮಿ ಹರಾಜು ಎಂಬುದು ಸುಳ್ಳು
ವಿಡಿಯೋ ನೋಡಿ : Fact Check | ತೆಲಂಗಾಣದಲ್ಲಿ ಮುಸಲ್ಮಾನರ ಅಭಿವೃದ್ಧಿಗೆ ಹಿಂದೂಗಳ ದೇವಾಲಯದ ಭೂಮಿ ಹರಾಜು ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.