ರಾಹುಲ್ ಗಾಂಧಿಯವರ ಪ್ರತಿ ಭಾಷಣವನ್ನು ತಿರುಚಿ ತಪ್ಪು ಅರ್ಥ ಬರುವಂತೆ ಮಾಡಿ ವಿಡಿಯೋಗಳನ್ನು ಹಂಚಿಕೊಳ್ಳುವುದು ಕಳೆದ ಒಂದು ದಶಕಗಳಿಂದ ನಿರಂತರವಾಗಿ ನಡೆಯುತ್ತಿದೆ. ಬಿಜೆಪಿ ಐಟಿ ಸೆಲ್ ಸೇರಿದಂತೆ ಬಲಪಂಥೀಯ ಕಾರ್ಯಕರ್ತರು ಇಂತಹ ವಿಡಿಯೋಗಳನ್ನು ಹರಿಬಿಡುತ್ತಿರುವುದು ಈಗಾಗಲೆ ನಮ್ಮ ತಂಡ ಸತ್ಯಶೋಧನೆ ನಡೆಸಿದ್ದು ಅವುಗಳನ್ನು ಇಲ್ಲಿ ನೋಡಬಹುದು.
ಈಗ, “ಹಿಂದೂಗಳು ಸದಾ ಜೈ ಶ್ರೀರಾಮ್ ಎಂದು ಜಪಿಸುತ್ತಲೇ ಇರುತ್ತಾರೆ ಎಂದು ರಾಹುಲ ಕಿಡಿಕಾರುತಿದ್ದಾನೆ. ಇದರಿಂದ ಈ ಮನುಷ್ಯನಿಗೆ ಏನು ಸಮಸ್ಯೆ ಅಂತ ಗೊತ್ತಿಲ್ಲ.” ಎಂಬ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಫ್ಯಾಕ್ಟ್‌ಚೆಕ್: ಇದು 13 ಫೆಬ್ರವರಿ 2024ರಂದು ಚತ್ತಿಸ್ಘಢದಲ್ಲಿ ನಡೆದ ಭಾರತ್ ಜೋಡೋ ನ್ಯಾಯ ಯಾತ್ರೆಯ ಸಂದರ್ಭದ ವಿಡಿಯೋ ಆಗಿದ್ದು, ಜನರನ್ನು ಉದ್ದೇಶಿಸಿ ರಾಹುಲ್ ಗಾಂಧಿಯವರು ಓಬಿಸಿ, ದಲಿತರು, ಆದಿವಾಸಿಗಳ ಮಾಲಿಕತ್ವದಲ್ಲಿ ದೇಶದಲ್ಲಿ ಒಂದೂ ಖಾಸಗಿ ಆಸ್ಪತ್ರೆಗಳಿಲ್ಲ, ಕರ್ನಾಟಕದ ಪ್ರಸಿದ್ಧ ಖಾಸಗಿ ಆಸ್ಪತ್ರೆ ಮಣಿಪಾಲ್ ನಲ್ಲಿ ಓದುತ್ತಿರುವ ಒಬ್ಬ ದಲಿತರು ಸಿಗುವುದಿಲ್ಲ. ಈ ಕುರಿತು ಯಾಕೆ ನೀವು ಚಿಂತಿಸುತ್ತಿಲ್ಲ ಎಂದೇ ನನಗೆ ಅರ್ಥವಾಗುತ್ತಿಲ್ಲ. ನೀವು ಮಲಗಿದ್ದಿರಿ. ಇಪ್ಪತ್ತನಾಲ್ಕು ಗಂಟೆ ಜೈ ಶ್ರೀ ರಾಮ್ ಜೈ ಶ್ರೀರಾಮ್ ಎಂದು ಹೇಳುತ್ತಿದ್ದಿರಿ ನನಗೆ ತೊಂದರೆ ಇಲ್ಲ. ಆದರೆ ನಿಮ್ಮ ಜೇಬಿನಿಂದ ಹಣ ಕೀಳುತ್ತಿದ್ದಾರೆ ಅದನ್ನು ಯೋಜಿಸಿ” ಎಂದು ಮಾತು ಮುಂದುವರೆಸಿದ್ದಾರೆ.
ಈ ವಿಡಿಯೋ ರಾಹುಲ್ ಗಾಂಧಿ ಯವರ ಅಧಿಕೃತ ಖಾತೆಯಿಂದ ಹಂಚಿಕೊಂಡಿದ್ದು, ಅಗ್ನಿವೀರ ನೇಮಕಾತಿಯ ಕುರಿತು ಚರ್ಚಿಸಿದ ನಂತರ ರಾಹುಲ್ ಅವರು ಭಾರತದ ದಲಿತ, ಓಬಿಸಿ, ಆದಿವಾಸಿಗಳು ಹೇಗೆ ಯಾವ ಕ್ಷೇತ್ರದಲ್ಲಿಯೂ ಮಾಲಿಕತ್ವ ಹೊಂದುವುದು ಸವಾಲಾಗಿದೆ ಎಂದು ಜನರಿಗೆ ವಿವರಿಸಿದ್ದಾರೆ. ಮತ್ತು ಹೇಗೆ ಧರ್ಮದ ಅಮಲಿನಲ್ಲಿ ಜನರ ಸಮಸ್ಯೆಗಳನ್ನು ಮರೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇದನ್ನು ಓದಿ: Fact Check | ಶೇ.50ರಷ್ಟು ಮೀಸಲಾತಿ ರದ್ದು ಪಡಿಸುವುದಾಗಿ ರಾಹುಲ್ ಗಾಂಧಿ ಹೇಳಿಲ್ಲ.!
ವಿಡಿಯೋ ನೋಡಿ: ರಾಜಸ್ಥಾನದ ಪಡಿತರ ಚೀಲಗಳ ಮೇಲೆ ಮೋದಿ ಫೋಟೋ ಮುದ್ರಿಸಲು 13 ಕೋಟಿ ರೂ ಖರ್ಚು ಮಾಡಿರುವುದು ನಿಜ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.