Fact Check | ರೈತರ ಪ್ರತಿಭಟನೆಯಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ ಎಂದು ಕೆನಡಾದ ಖಲಿಸ್ತಾನಿಗಳ ವಿಡಿಯೋ ಹಂಚಿಕೆ

“ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಖಲಿಸ್ತಾನ ಧ್ವಜ ಹಿಡಿದಿರುವ ರೈತರು ರಾಷ್ಟ್ರ ಧ್ವಜವನ್ನು ಕಾಲಿಂದ ಒದ್ದು ಅಪಮಾನಿಸಿದ್ದಾರೆ.” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಲದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋ ನಿಜವಾಗಿಯೂ  ರೈತ ಪ್ರತಿಭಟನೆಗೆ ಸಂಬಂಧಿಸಿದ್ದು ಎಂದು ಸಾಕಷ್ಟು ಮಂದಿ ನಂಬಿಕೊಂಡಿದ್ದಾರೆ.

ಹೀಗಾಗಿ ಹಲವು ಮಂದಿ ಇದೇ ನಿಜವಿರಬಹುದು ಎಂದು ವಿವಿಧ ರೀತಿಯ ಬರಹಗಳನ್ನ ಬರೆದು ತಮ್ಮ ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಹಾಗಾದರೆ ವಿಡಿಯೋದಲ್ಲಿ ಉಲ್ಲೇಖವಾಗಿರುವ ಅಂಶ ನಿಜವೆ ಎಂಬುದನ್ನು ಪರಿಶೀಲಿಸೋಣ

ಫ್ಯಾಕ್ಟ್‌ಚೆಕ್‌

ವ್ಯಾಪಕವಾಗಿ ವೈರಲ್‌ ಆಗುತ್ತಿರುವ ವಿಡಿಯೋವನ್ನು ವಿವಿಧ ಕೀ ಫ್ರೇಮ್‌ಗಳಾಗಿ ವಿಂಗಡಿಸಿ ಗೂಗಲ್‌ನಲ್ಲಿ ಪರಿಶೀಲನೆ ನಡೆಸಲಾಯಿತು. ಆಗ ಇದೇ ರೀತಿಯ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಪತ್ತೆಯಾಗಿವೆ. ಇದೇ ವೇಳೆ ಈ ವೈರಲ್‌ ವಿಡಿಯೋ  2023ರದ್ದಾಗಿದೆ ಎಂಬುದು ತಿಳಿದು ಬಂದಿದೆ. ಕೆನಡಾದಲ್ಲಿ 2023ರ ಜೂನ್‌ 28ರಂದು ಖಲಿಸ್ತಾನ್ ಉಗ್ರ ಹಾಗೂ ಖಲಿಸ್ತಾನ್‌ ಟೈಗರ್ ಫೋರ್ಸ್ ಮುಖ್ಯಸ್ಥ ಹರ್ದೀಪ್ ಸಿಂಗ್ ನಿಜ್ಜರ್ ಎಂಬುವವನ ಹತ್ಯೆಯ ನಂತರ ಈ ಘಟನೆ  ನಡೆದಿದೆ.

ಆತನ ಹತ್ಯೆಯ  ನಂತರದಲ್ಲಿ ಇದೇ ರೀತಿಯ ಹಲವು ಪ್ರತಿಭಟನೆಗಳು ಕೆನಡಾದಲ್ಲಿ ನಡೆದಿದ್ದು, ಸಾಕಷ್ಟು ಮಂದಿ ಖಲಿಸ್ತಾನವನ್ನು ಬೆಂಬಲಿಸಿ ವಿಡಿಯೋವನ್ನು ಹಂಚಿಕೊಂಡಿರುವವರ ಜೊತೆಗೆ ಭಾರತದ ದ್ವಜಕ್ಕೆ ಅಪಮಾನಿಸಿರುವ ಕುರಿತು ಮತ್ತು ಭಾರತದ ವಿರುದ್ಧ ಮಾತನಾಡಿರುವ ಕುರಿತು ಹಲವು ವರದಿಗಳು ಕೂಡ ಕಂಡು ಬಂದಿವೆ.

ಈ ವಿಡಿಯೋದಲ್ಲಿರುವವರೆಲ್ಲರೂ ಖಲಿಸ್ತಾನಿಗಳಾಗಿದ್ದು, ಇವರು ಕೆನಡಾದಲ್ಲಿ ನೆಲೆಸಿದ್ದಾರೆ ಎಂಬ ಮಾಹಿತಿ ಇದೆ. ಹೀಗಾಗಿ ಇವರಿಗೂ ದೇಶದಲ್ಲಿ ನಡೆಯುತ್ತಿರುವ ರೈತ ಹೋರಾಟಕ್ಕೂ ಯಾವುದೇ ರೀತಿಯಾದ ಸಂಬಂಧವಿಲ್ಲ. ಹಾಗಾಗಿ ಮೇಲಿನ ಆಪಾದನೆ ಸುಳ್ಳಾಗಿದೆ.


ಇದನ್ನೂ ಓದಿ : ಕಾಂಗ್ರೆಸ್ ಸರ್ಕಾರದ 32 ಸಾವಿರ ಕೋಟಿ ರೂ ಸಾಲವನ್ನು 32 ಲಕ್ಷ ಕೋಟಿ ರೂ ಎಂದು ತಿರುಚಿದ ಬಿಜೆಪಿ


ವಿಡಿಯೋ ನೋಡಿ : ಕಾಂಗ್ರೆಸ್ ಸರ್ಕಾರದ 32 ಸಾವಿರ ಕೋಟಿ ರೂ ಸಾಲವನ್ನು 32 ಲಕ್ಷ ಕೋಟಿ ರೂ ಎಂದು ತಿರುಚಿದ ಬಿಜೆಪಿ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *