Fact Check: ಪ್ರಾಣ ಪ್ರತಿಷ್ಟೆಯ ದಿನ ಹನುಮಾನ್ ವೇಷ ಹಾಕಿದ್ದಕ್ಕೆ ಬಾಲಕ ಮೇಲೆ ಅತ್ಯಾಚಾರ ಎಂಬುದು ಸುಳ್ಳು

ಭಾರತದಲ್ಲಿ ಮುಸ್ಲಿಂ ಸಮುದಾಯದ ಮೇಲೆ ನಿರಂತರವಾಗಿ ಆರೋಪ ಹೊರಿಸುವುದು ಸರ್ವೇ ಸಾಮಾನ್ಯವಾಗುತ್ತಿದೆ. ಯಾವುದೇ ಅಪರಾಧ ನಡೆದರೂ ಅದನ್ನು ಮುಸ್ಲೀಮರ ತಲೆಗೆ ಕಟ್ಟುವುದರ ಜೊತೆಗೆ, ಬೇಕೆಂದೇ ಅಪರಾಧಗಳನ್ನು ಎಸಗಿ ಅದನ್ನು ಮುಸ್ಲೀಮರ ಮೇಲೆ ಆರೋಪಿಸುವುದು ನಡೆಯುತ್ತಿದೆ.

ಈಗ, “ಗುಜರಾತ್‌ನಲ್ಲಿ ರಾಮಮಂದಿರದ ಪ್ರಾಣಪ್ರತಿಷ್ಠೆಯ ದಿನದಂದು ಹನುಮಾನ್ ವೇಷಭೂಷಣ ತೊಟ್ಟಿದ್ದಕ್ಕೆ ಹಿಂದೂ ಹುಡುಗನೊಬ್ಬನನ್ನು ಮುಸ್ಲಿಂ ಯುವಕರ ಗುಂಪೊಂದು ಅಪಹರಿಸಿ ಒಂದು ವಾರದವರೆಗೆ ಸಾಮೂಹಿಕ ಅತ್ಯಾಚಾರವೆಸಗಿದೆ.” ಎಂಬ ಸಂದೇಶದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವಿಡಿಯೋವನ್ನು ಬಜರಂಗದಳ ಗುಜರಾತ್ ಹಂಚಿಕೊಂಡಿಂದೆ.

ಫ್ಯಾಕ್ಟ್‌ಚೆಕ್: ಈ ಕುರಿತು ಟ್ವಿಟ್‌ ಮೂಲಕ ಪ್ರತಕ್ರಯಿಸಿರುವ ಬನಸ್ಕಾಂತ ಜಿಲ್ಲೆಯ ಎಸ್‌ಪಿಯವರು “ಈ ಘಟನೆಗೂ ರಾಮಮಂದಿರ ಪ್ರಾಣ ಪ್ರತಿಷ್ಠೆಗೂ, ಹನುಮಾನ್ ವೇಷಭೂಷಣಕ್ಕೂ ಅತ್ಯಾಚಾರಕ್ಕೂ ಯಾವುದೇ ಸಂಬಂಧವಿಲ್ಲ. ಸಂತ್ರಸ್ತೆಯ ಕುಟುಂಬವು ದೂರು ನೀಡಲು ಹಿಂಜರಿಯಿತು ಆದರೆ ಹದದ್ ಪೊಲೀಸರು ಅವರಿಗೆ ಅರ್ಥಮಾಡಿಸಿ FIR ದಾಖಲಿಸಿದರು ಮತ್ತು ಎಲ್ಲಾ ಆರೋಪಿಗಳನ್ನು ಕೆಲವೇ ಸಮಯದಲ್ಲಿ ಬಂಧಿಸಿದ್ದಾರೆ” ಎಂದು ತಿಳಿಸಿದ್ದಾರೆ.
ಬಾಲಕನ ಸಾಮೂಹಿಕ ಅತ್ಯಾಚಾರ ಪ್ರಕರಣ ವರದಿಯಾದ ಕುರಿತು ಹುಡುಕಿದಾಗ ಯಾವುದೇ ವರದಿ ಪತ್ತೆ ಆಗಿಲ್ಲ. ಈ ಕುರಿತು ಬನಸ್ಕಾಂತ ಜಿಲ್ಲೆಯ ಎಸ್‌ಪಿ ವಿಡಿಯೋ ಸ್ಪಷ್ಟನೆ ನೀಡಿದ್ದು ಗುಜರಾತಿ ಭಾಷೆಯಲ್ಲಿರುವ ಬರಹವನ್ನು ಗೂಗಲ್ ಲೆನ್ಸ್‌ ಮೂಲಕ ಅನುವಾದಿಸಿದಾಗ, ಈ ಘಟನೆಯೂ ಹರದ್ ಎಂಬ ಎಂಬಲ್ಲಿ ನಡೆದಿದೆ ಮತ್ತು ಅತ್ಯಾಚಾರಕ್ಕೋಳಗಾಗಿರುವುದು ಬಾಲಕ ಅಲ್ಲ ಬದಲಿಗೆ ಬಾಲಕಿ ಆಗಿದ್ದಾಳೆ. ಈ ಪ್ರಕರಣಕ್ಕೂ ಪ್ರಾಣಪ್ರತಿಷ್ಟಾಪನೆ ಕಾರ್ಯಕ್ರಮಕ್ಕೂ ಯಾವುದೇ ಸಂಬಂಧವಿಲ್ಲ,  IPC section 377ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಸ್ಪಷ್ಟನೆ ನೀಡಿ ಗುಜರಾತಿನ ಗೃಹ ಸಚಿವ ಹರ್ಷಸಂಘಾವಿ ಅವರನ್ನು ಸಹ ಟ್ಯಾಗ್ ಮಾಡಿದ್ದಾರೆ.

ಆದ್ದರಿಂದ ಸಧ್ಯ ಹರಿದಾಡುತ್ತಿರುವ ಫೋಸ್ಟ್‌ ತಪ್ಪು ಸಂದೇಶದಿಂದ ಕೂಡಿದೆ ಮತ್ತು ಬೇಕಂತಲೇ ಬಜರಂಗದಳದ ಕಾರ್ಯಕರ್ತರು ಈ ಪ್ರಕರಣವನ್ನು ತಿರುಚಿದ್ದಾರೆ.


ಇದನ್ನು ಓದಿ: Fact Check: ರೈತ ಹೋರಾಟದಲ್ಲಿ ಮುಸ್ಲಿಮರು ಎಂದು ಸಿದ್ದು ಮೂಸೆವಾಲಾ ಹತ್ಯೆ ಸಂದರ್ಭದ ವಿಡಿಯೋ ಹಂಚಿಕೆ


ವಿಡಿಯೋ ನೋಡಿ: ಕಾಂಗ್ರೆಸ್ ಸರ್ಕಾರದ 32 ಸಾವಿರ ಕೋಟಿ ರೂ ಸಾಲವನ್ನು 32 ಲಕ್ಷ ಕೋಟಿ ರೂ ಎಂದು ತಿರುಚಿದ ಬಿಜೆಪಿ | BJP


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *