“ಕರ್ನಾಟಕದಲ್ಲಿ ನಾಮಫಲಕಗಳಲ್ಲಿ ಕೇಸರಿ ಬಣ್ಣವನ್ನು ಬಳಸುವಂತಿಲ್ಲ ಎಂಬ ಕಾರಣಕ್ಕೆ ಜನರ ಗುಂಪೊಂದು ಅಂಗಡಿಯ ನಾಮಫಲಕಗಳನ್ನು ಧ್ವಂಸಗೊಳಿಸಿದೆ. ಈ ವಿಡಿಯೋವನ್ನು ಎಲ್ಲರಿಗೂ ಶೇರ್ ಮಾಡಿ” ಎಂಬ ಬರಹದೊಂದಿಗೆ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ಕರ್ನಾಟಕದಲ್ಲಿ ಹಿಂದೂ ಅಂಗಡಿಯೊಂದನ್ನು ಧ್ವಂಸ ಮಾಡಲಾಗಿದೆ, ಈ ಬಗ್ಗೆ ಧ್ವನಿ ಎತ್ತಲು ಯಾರೂ ಇಲ್ಲದಂತಾಗಿದೆ ಎಂದು ಕೋಮು ಬಣ್ಣವನ್ನು ಬಳಿಯಲಾಗಿದೆ.
ಇದನ್ನೇ ನಿಜವೆಂದು ನಂಬಿ ಸಾಮಾಜಿಕ ಜಾಲತಾಣದಲ್ಲಿ ಅನ್ಯ ಕೋಮಿನ ವಿರುದ್ಧ, ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಅದರಲ್ಲೂ ವೈರಲ್ ವಿಡಿಯೋವನ್ನು ಬಳಸಿಕೊಂಡು ಕರ್ನಾಟಕದ ಕಾಂಗ್ರಸ್ ಸರ್ಕಾರದ ವಿರುದ್ಧವೂ ಟೀಕಾ ಪ್ರಹಾರವನ್ನು ಮುಂದುವರೆಸಿದ್ದಾರೆ. ಹಾಗಾದರೆ ಇದು ನಿಜವೆ? ಈ ಕುರಿತು ಸತ್ಯ ಪರಿಶೀಲನೆಯನ್ನು ನಡೆಸೋಣ
ಫ್ಯಾಕ್ಟ್‌ಚೆಕ್
ಈ ಕುರಿತು ಫ್ಯಾಕ್ಟ್‌ಚೆಕ್ ನಡೆಸಲು ವೈರಲ್ ವಿಡಿಯೋವಿನ ಕೆಲವೊಂದು ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟ ನಡೆಸಿದಾಗ, ಕರ್ನಾಟಕದಲ್ಲಿನ ಇಂಗ್ಲೀಶ್ ಬೋರ್ಡ್ ತೆರವಿನ ವಿವಾದದ ಪೋಟೋಗಳು ಕಾಣಿಸಿಕೊಂಡಿದ್ದವು. ಈ ವೇಳೆ ಇದೇ ವಿಡಿಯೋ bengalurublr ಎಂಬ ಇನ್‌ಸ್ಟಾಗ್ರಾಮ್ ಖಾತೆಯೊಂದರಲ್ಲಿ ಕಾಣಿಸಿಕೊಂಡಿದೆ.
View this post on Instagram
ಜೊತೆಗೆ ಈ ವಿಡಿಯೋದ ಕಮೆಂಟ್‌ನಲ್ಲಿ ಮಾಹಿತಿ ನೀಡಿರುವ bengalurublr ಇನ್‌ಸ್ಟಾಗ್ರಾಂ ತಂಡ ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆಯ ಸಿಬ್ಬಂಧಿಗಳು ಮಹಾತ್ಮ ಗಾಂಧಿ ರಸ್ತೆ ಹಾಗೂ ಬ್ರಿಗೇಡ್ ರಸ್ತೆಯಲ್ಲಿರುವ ಹಲವು ಮಳಿಗೆಗಳನ್ನು ಇಂಗ್ಲೀಷ್ ಬೋರ್ಡ್ ಹಾಕಿದ ಕಾರಣ ಮುಚ್ಚಿಸಿದೆ ಹಾಗೂ ಕನ್ನಡ ಬೋರ್ಡ್‌ಗಳನ್ನು ಅಳವಡಿಸಲು ಪ್ರಯತ್ನಿಸುತ್ತಿವೆ ಎಂಬ ಮಾಹಿತಿಯನ್ನು ಕೂಡ ಹಲವರು ನೀಡಿದ್ದಾರೆ.
ಇತ್ತೀಚೆಗೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿರುವ ಎಲ್ಲಾ ವಾಣಿಜ್ಯ ಸಂಸ್ಥೆಗಳು ತಮ್ಮ ಹೆಸರಿನ ಫಲಕಗಳಲ್ಲಿ ಶೇ.60ರಷ್ಟು ಕನ್ನಡವನ್ನು ಹೊಂದಿರಬೇಕು ಎಂದು ಬಿಬಿಎಂಪಿ ಆದೇಶ ಹೊರಡಿಸಿತ್ತು. ಇದಕ್ಕೆ 28 ಫೆಬ್ರವರಿ 2024 ಗಡುವನ್ನು ನಿಗದಿಪಡಿಸಲಾಗಿತ್ತು. ಗಡವು ಮೀರಿಯೂ ಬೋರ್ಡ್ ಬದಲಿಸದ ಅಂಗಡಿಗಳ ನಾಮಫಲವನ್ನು ಬಿಬಿಎಂಪಿ ಅಧಿಕಾರಿಗಳು ತೆರವುಗೊಳಿಸಿರುವ ಕುರಿತು ಇಂಡಿಯಾ ಟುಡೆ ಕೂಡ ವರದಿಯನ್ನ ಮಾಡಿದೆ.
ಅದೇ ರೀತಿಯಲ್ಲಿ ಈ ವಿಡಿಯೋದಲ್ಲಿ ಅಂಗಡಿಯಲ್ಲಿ ಇಂಗ್ಲೀಷ್ ನಾಮಫಲಕ ಅಳವಡಿಸಿದ ಕಾರಣ ಈ ಬೋರ್ಡ್‌ಗಳನ್ನು ತೆಗೆದು ಹಾಕಲಾಗಿದೆಯೇ ಹೊರತು ಇನ್ಯಾವುದೇ ಉದ್ದೇಶಗಳಿಗಲ್ಲ. ಆದರೆ ಇದೇ ವಿಡಿಯೋವನ್ನು ಬಳಸಿಕೊಂಡಿರುವ ಕೆಲ ಬಲಪಂಥೀಯ ಕಿಡಿಗೇಡಿಗಳು ಇದಕ್ಕೆ ಕೋಮು ಬಣ್ಣವನ್ನು ಬಳಿದಿದ್ದಾರೆ.
ಇದನ್ನೂ ಓದಿ : Fact Check: ಪಾಕಿಸ್ತಾನ ಮೂಲದ ‘ಹಬ್ ಪವರ್ ಕಂಪನಿಯಿಂದ ಕಾಂಗ್ರೆಸ್ 10 ಕೋಟಿ ಪಡೆದಿದೆ ಎಂದು ಸುಳ್ಳು ಹರಡಿದ ಟಿವಿ ವಿಕ್ರಮ
ವಿಡಿಯೋ ನೋಡಿ : Fact Check: ಪಾಕಿಸ್ತಾನ ಮೂಲದ ‘ಹಬ್ ಪವರ್ ಕಂಪನಿಯಿಂದ ಕಾಂಗ್ರೆಸ್ 10 ಕೋಟಿ ಪಡೆದಿದೆ ಎಂದು ಸುಳ್ಳು ಹರಡಿದ ಟಿವಿ ವಿಕ್ರಮ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.