Fact Check | ರಾಹುಲ್‌ ಗಾಂಧಿ ಹಿಂದೂ ದೇವರ ಫೋಟೋವನ್ನು ಸ್ವೀಕರಿಸಿಲ್ಲ ಎಂದು ಸುಳ್ಳು ಹೇಳಿದ ಟಿವಿ ವಿಕ್ರಮ ನಿರೂಪಕಿ ಶ್ವೇತ

“ರಾಹುಲ್‌ ಗಾಂಧಿ ಕೂಡ ಹಿಂದೂ ದೇವರ ಬಗ್ಗೆ ನಿರ್ಲಕ್ಷ್ಯ ಮಾಡಲು ಪ್ರಾರಂಭಿಸಿದ್ದಾರೆ. ಮಹರಾಷ್ಟ್ರದ ಯಾವುದೋ ಕಾಂಗ್ರೆಸ್‌ ಕಾರ್ಯಕ್ರಮದಲ್ಲಿ ವಿಠಲ ದೇವರ ಫೋಟೋ ಗಿಫ್ಟ್‌ ಕೊಡಲು ಹೋದ್ರೆ, ಸಿದ್ದರಾಮಯ್ಯನವರ ಥರ ಹೆ ಬೇಡ ಬೇಡ ಎಂದು ದೂರ ತಳ್ಳಿದ್ದಾರೆ ಈ ಭಾರಿಯ ಚುನಾವಣೆಯಲ್ಲಿ ಇವರಿಗೆ ಎಲ್ಲಾ ಹಿಂದೂಗಳು ಬುದ್ದಿ ಕಲಿಸಬೇಕು” ಎಂದು ಟಿವಿ ವಿಕ್ರಮ ನಿರೂಪಕಿ ಸುಳ್ಳು ಮಾಹಿತಿಯನ್ನ ಜನ ಸಾಮಾನ್ಯರಿಗೆ ನೀಡಿ ಜನರ ದಾರಿ ತಪ್ಪಿಸಲು ಪ್ರಯತ್ನಿಸಿದ್ದಾರೆ.

ಹಲವು ಮಂದಿ ಇದನ್ನೇ ನಿಜವಾದ ಸುದ್ದಿ ಎಂದು ನಂಬಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಸಾಕಷ್ಟು ಮಂದಿ ಇದು ಕಾಂಗ್ರೆಸ್‌ನ ಹಿಂದೂ ವಿರೋಧಿ ಮನಸ್ಥಿತಿ ಎಂದು ಕೂಡ ಟೀಕೆಯನ್ನು ಮಾಡುತ್ತಿದ್ದಾರೆ. ಅದರಲ್ಲೂ ಮಹರಾಷ್ಟ್ರ ಅಧಿಕೃತ ಬಿಜೆಪಿ ಎಕ್ಸ್‌ ಖಾತೆಯಲ್ಲೇ ಈ ಸುಳ್ಳು ಸುದ್ದಿಯನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ವಾಸ್ತವದಲ್ಲಿ ನಿಜಕ್ಕೂ ರಾಹುಲ್‌ ಗಾಂಧಿ ದೇವರ ಫೋಟೋವನ್ನು ಸ್ವೀಕರಿಸಲ ನಿರಾಕರಿಸಿದರೆ? ಕಾರ್ಯಕ್ರಮದಲ್ಲಿದ್ದವರು ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಏನು ಹಂಚಿಕೊಂಡಿದ್ದಾರೆ ಎಂಬ ಕುರಿತು ಮಾಹಿತಿ ಇಲ್ಲಿದೆ ನೋಡಿ

ಫ್ಯಾಕ್ಟ್‌ಚೆಕ್‌

ಈ ಕುರಿತು ಪರಿಶೀಲನೆ ನಡೆಸಲು ವೀಡಿಯೊದ ಕೀಫ್ರೇಮ್‌ಗಳನ್ನು ಗೂಗಲ್‌ ರಿವರ್ಸ್ ಇಮೇಜಸ್‌ನಲ್ಲಿ ಹುಡುಕಾಟ ನಡೆಸಿದಾಗ, ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ನಾನಾ ಪಟೋಲೆ ಅವರು ಮಾರ್ಚ್ 14 ರಂದು X ನಲ್ಲಿ ಪೋಸ್ಟ್ ಮಾಡಿದ ವೀಡಿಯೊ ಪತ್ತೆಯಾಗಿದೆ. ಅದರಲ್ಲಿ ಅವರು ಪೂರ್ತಿ ವಿಡಿಯೋವನ್ನು ಹಂಚಿಕೊಂಡಿದ್ದು,  ವಿಡಿಯೋದಲ್ಲಿ ರಾಹುಲ್ ಗಾಂಧಿ ವಿಗ್ರಹವನ್ನು ಸ್ವೀಕರಿಸಿ ಅದರೊಂದಿಗೆ ಫೋಟೋಗೆ ಪೋಸ್ ನೀಡುತ್ತಿರುವುದನ್ನು ಕಾಣಬಹುದು.

ಪಟೋಲೆ ಅವರು ಈ ವಿಡಿಯೊವನ್ನು ಹಂಚಿಕೊಂಡಿದ್ದು, “ಬಿಜೆಪಿ ಬೆಂಬಲಿಗರು ರಾಹುಲ್ ಗಾಂಧಿ ವಿರುದ್ದ ಸುಳ್ಳು ಮತ್ತು ಆಧಾರ ರಹಿತ ಪೋಸ್ಟ್‌ಅನ್ನು ಹಂಚಿಕೊಳ್ಳುತ್ತಿದ್ದಾರೆ” ಎಂಬ ಬರಹದೊಂದಿಗೆ ಪೂರ್ಣ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ನಾನಾ ಪಟೋಲೆ ಹಂಚಿಕೊಂಡ ವಿಡಿಯೋದಲ್ಲಿ, ರಾಹುಲ್ ಗಾಂಧಿ ತಮ್ಮ ಬೆಂಬಲಿಗರೊಂದಿಗೆ ಫೋಟೋ ತೆಗೆಸಿಕೊಳ್ಳುವಾಗ ಪಕ್ಷದ ಕಾರ್ಯಕರ್ತರಿಗೆ ಪಕ್ಕಕ್ಕೆ ಹೋಗುವಂತೆ ಸನ್ನೆ ಮಾಡುವುದನ್ನು ಕಾಣಬಹುದು. ನಂತರ, ರಾಹುಲ್‌ ಗಾಂಧಿ ಅವರು ವಿಗ್ರಹವನ್ನು ಸ್ವೀಕರಿಸಿದರು, ಗಣ್ಯರೊಂದಿಗೆ ಫೋಟೋಗೆ ಪೋಸ್ ನೀಡಿ, ವಿಠಲ ಮೂರ್ತಿಯನ್ನು ಪಕ್ಕದಲ್ಲಿದ್ದ ಆಪ್ತರಿಗೆ ಹಸ್ತಾಂತರಿಸುವುದನ್ನು ಈ ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಬಹುದಾಗಿದೆ.

ಬಿಜೆಪಿ ಐಟಿ ಸೆಲ್‌ ಮುಖ್ಯಸ್ಥ ಅಮಿತ್‌ ಮಾಳವಿಯ ಹಂಚಿಕೊಂಡ ಸುಳ್ಳು ಸುದ್ದಿಗೆ ತಿರುಗೇಟು ನೀಡಿದ ಕಾಂಗ್ರೆಸ್‌ ಕಾರ್ಯಕರ್ತೆ

ಒಟ್ಟಾರೆಯಾಗಿ ಹೇಳುವುದಾದರೆ, ರಾಹುಲ್ ಗಾಂಧಿ ವಿಠಲ ಮೂರ್ತಿಯನ್ನು ಸ್ವೀಕರಿಸದೆ ಹಿಂದೂ ದೇವರಿಗೆ ಅವಮಾನ ಮಾಡಿದ್ದಾರೆ ಎಂದು ಸುಳ್ಳು ಪ್ರತಿಪಾದನೆಯಾಗಿದೆ. ಇದೇ ಸುಳ್ಳನ್ನು ಟಿವಿ ವಿಕ್ರಮದ ನಿರೂಪಕಿ ಶ್ವೇತ ಕೂಡ ಹೇಳಿದ್ದು ಜನ ಸಾಮಾನ್ಯರ ದಾರಿ ತಪ್ಪಿಸುವ ಕೆಲಸಕ್ಕೆ ಮುಂದಾಗಿದ್ದಾರೆ.


ಇದನ್ನೂ ಓದಿ : Fact Check: ಪಾಕಿಸ್ತಾನ ಮೂಲದ ‘ಹಬ್ ಪವರ್ ಕಂಪನಿಯಿಂದ ಕಾಂಗ್ರೆಸ್ 10 ಕೋಟಿ ಪಡೆದಿದೆ ಎಂದು ಸುಳ್ಳು ಹರಡಿದ ಟಿವಿ ವಿಕ್ರಮ


ವಿಡಿಯೋ ನೋಡಿ : Fact Check: ಪಾಕಿಸ್ತಾನ ಮೂಲದ ‘ಹಬ್ ಪವರ್ ಕಂಪನಿಯಿಂದ ಕಾಂಗ್ರೆಸ್ 10 ಕೋಟಿ ಪಡೆದಿದೆ ಎಂದು ಸುಳ್ಳು ಹರಡಿದ ಟಿವಿ ವಿಕ್ರಮ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *