Fact Check: ಸಾಜಿದ್ ಅಂತ್ಯಕ್ರಿಯೆಯಲ್ಲಿ 30,000 ಕ್ಕೂ ಹೆಚ್ಚು ಮುಸ್ಲಿಮರು ಭಾಗವಹಿಸಿದ್ದರು ಎಂಬುದಕ್ಕೆ ಆಧಾರವಿಲ್ಲ

ಮಾರ್ಚ್‌ 20 ರಂದು ಉತ್ತರ ಪ್ರದೇಶದ ಬದೌನ್ ಬಳಿ ಇಬ್ಬರು ಮಕ್ಕಳ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಕೊಲೆ ನಡೆದ ಕೇವಲ ಎರಡು ಗಂಟೆ ವ್ಯಾಪ್ತಿಯಲ್ಲಿ ಆರೋಪಿ ಸಾಜಿದ್ ಮತ್ತು ಜಾವಿದ್ ಎಂಬ ಸಹೋದರರನ್ನು ಉತ್ತರ ಪ್ರದೇಶದ ಪೋಲೀಸರು ಎನ್‌ಕೌಂಟರ್‌ನ ಮೂಲಕ ಇಬ್ಬರು ಆರೋಪಿಗಳನ್ನು ಕೊಂದಿದ್ದಾರೆ. ಬಾಲಕರ ಮರಣೋತ್ತರ ಪರೀಕ್ಷೆಯ ನಂತರ ಹತ್ತಾರು ಬಾರಿ ಚಾಕುವಿನಿಂದ ದೇಹಕ್ಕೆ ಇರಿದು ಕೊಲ್ಲಲಾಗಿದೆ ಎಂದು ವರದಿಗಳು ಹೇಳುತ್ತಿವೆ.

ಹೀಗಾಗಲೇ ಅವರ ಅಂತ್ಯಕ್ರಿಯೆ ನಡೆದಿದ್ದು, “ನಿನ್ನೆ ಇಬ್ಬರು ಪುಟ್ಟ ಹಿಂದೂ ಮಕ್ಕಳನ್ನು ಬರ್ಬರವಾಗಿ ಕೊಂದ ಸಾಜಿದ್ ಅವರ ಅಂತ್ಯಕ್ರಿಯೆಯಲ್ಲಿ 30,000 ಕ್ಕೂ ಹೆಚ್ಚು ಮುಸ್ಲಿಮರು ಭಾಗವಹಿಸಿದ್ದರು. ಅವರಿಗೆ ಸಾಜಿದ್ ಅವರ ಹೀರೋ.” ಎಂಬ ಸಂದೇಶವೊಂದು ಸಾಜಿದ್ ಶವಸಂಸ್ಕಾರದ ಸಂದರ್ಭದ ಚಿತ್ರವೊಂದು ಎಲ್ಲೆಡೆ ವೈರಲ್ ಆಗುತ್ತಿದೆ. ಹಾಗಾದರೆ ನಿಜಕ್ಕೂ ಮೂವತ್ತು ಸಾವಿರದಷ್ಟು ಜನ ಸೇರಿದ್ದರೇ ಎಂದು ತಿಳಿಯೋಣ ಬನ್ನಿ.

ಈ ಘಟನೆ ನಡೆದ ಬಳಿಕ ಈ ಪ್ರಕರಣಕ್ಕೆ ಬೇರೆ ಬೇರೆ ಆಯಾಮಗಳು, ಉಪ ಕಥೆಗಳು ಹುಟ್ಟಿಕೊಂಡಿದ್ದು ಬಲಪಂಥೀಯ ಲೇಖಕ ಮತ್ತು ಸ್ವರಾಜ್ಯ ಮಾಧ್ಯಮದ ಸಂಪಾದಕ ಆನಂದ್ ರಂಗನಾಥನ್ “ಆರೋಪಿಗಳು ಮಕ್ಕಳ ಕತ್ತು ಸೀಳಿ ಕೊಂದ ಬಳಿಕ ಅವರ ರಕ್ತ ಕುಡಿದಿದ್ದಾರೆ” ಎಂದು ಪ್ರತಿಪಾದಿಸುತ್ತಿದ್ದಾರೆ. ಫ್ಯಾಕ್ಟ್‌ಚೆಕ್: ಸಾಜಿದ್ ಅವರ ಅಂತ್ಯಕ್ರಿಯೆಯಲ್ಲಿ ಮೂವತ್ತು ಸಾವಿರ ಜನ ಸೇರಿದ ಕುರಿತು ಯಾವ ಮಾಧ್ಯಮಗಳಲ್ಲಿಯೂ ವರದಿಯಾಗಿಲ್ಲ. ಕೇವಲ ಒಂದು ಪೋಟೋವಷ್ಟೇ ಎಲ್ಲೆಡೆ ವೈರಲ್ ಆಗಿದ್ದು ಅನೇಕ ಜನ ನೆರೆದಿರುವ ಯಾವುದೇ ಪೋಟೋ ಲಭ್ಯವಾಗಿಲ್ಲ. ಕೆಲ ಬಲಪಂಥೀಯ ಮಾಧ್ಯಮಗಳು ಮಂಬೈ ‌ಬಾಂಬ್ ದಾಳಿಯ ಭಯೋದ್ಪಾದಕ ಯಾಕೂಬ್ ಅಂತ್ಯಕ್ರಿಯೆಯ ಪೋಟೋಗಳನ್ನು ಸಾಜಿದ್ ಅಂತ್ಯಕ್ರಿಯೆಗೆ ಸಂಬಂಧಿಸಿದ್ದು ಎಂದು ತಪ್ಪಾಗಿ ಹಂಚಿಕೊಂಡಿದ್ದಾರೆ.

ಆಪ್ ಇಂಡಿಯಾ ಸಹ ಭಯೋತ್ಪಾದಕ ಯಾಕುಬ್ ಅವರ ಅಂತ್ಯಸಂಸ್ಕಾರದ ಸಂದರ್ಭದ ಪೋಟೋವನ್ನೇ ಬಳಸಿಕೊಂಡಿದೆ. ಮತ್ತು ತನ್ನ ವರದಿಯಲ್ಲಿ ವೈರಲ್ ಪೋಟೋ ಬಿಟ್ಟು ಮತ್ತೆ ಯಾವ ಪೋಟೋಗಳನ್ನು ಸಾಕ್ಷಿಗೆ ಒದಗಿಸಿಲ್ಲ. ಈ ಕುರಿತು ಯಾವುದೇ ವಿಡಿಯೋ ಸಹ ಲಭ್ಯವಾಗಿಲ್ಲ. ಸಾಜಿದ್ ಮಕ್ಕಳನ್ನು ಯಾಕೆ ಕೊಂದ ಎಂಬ ಕಾರಣ ಇದುವರೆಗೂ ತಿಳಿದುಬಂದಿಲ್ಲ. ಮಕ್ಕಳ ತಂದೆ ವಿನೋದ್ ಪ್ರಕಾರ ಇಬ್ಬರ ನಡುವೆ ಯಾವ ಜಗಳವೂ ಇರಲಿಲ್ಲ. ಆತನೇ ತನ್ನ ಹೆಂಡತಿ ಆಸ್ಪತ್ರೆಯಲ್ಲಿ ಇದ್ದಾಳೆ ಇನ್ನು ಕೆಲವೇ ಗಂಟೆಗಳಲ್ಲಿ ಡಿಲಿವರಿ ಆಗುವ ಸಾಧ್ಯತೆಯಿದೆ ಐದು ಸಾವಿರ ಹಣ ಸಹಾಯ ಮಾಡಿ ಎಂದು ಮನೆಗೆ ಬಂದಿದ್ದ. ನಂತರ ಆತನ ಹೆಂಡತಿ ಸಂಗೀತಳ ಬಳಿ ಹಣ ನೀಡಲು ಹೇಳಿದ್ದ ವಿನೋದ್. ಸಂಗೀತ ಅವರು ಬ್ಯೂಟಿಪಾರ್ಲರ್‌ ನಡೆಸುತ್ತಿದ್ದರು. ಆಕೆ ಹಣ ಮತ್ತು ಟೀ ತರಲು ಒಳಗೆ ಹೊದ ಸಂದರ್ಭದಲ್ಲಿ ಮಕ್ಕಳನ್ನು ಟೆರೆಸ್‌ಗೆ ಕರೆದುಕೊಂಡು ಹೋದ ಸಾಜಿದ್ ಇಬ್ಬರು ಮಕ್ಕಳನ್ನು ಚಾಕುವಿನಿಂದ ಹಿರಿದು ಕೊಂದಿದ್ದಾನೆ ಎನ್ನಲಾಗಿದೆ. ಕೊಲೆ ನಡೆದು ಎರಡು ಗಂಟೆಗಳ ಒಳಗೆ ಆತನನ್ನು ಬಂದಿಸಲು ಹೋದ ಪೋಲಿಸರ ಮೇಲೆ ದಾಳಿ ಮಾಡಿದ ಎಂಬ ಕಾರಣಕ್ಕಾಗಿ ಎನ್‌ಕೌಂಟರ್ ಮಾಡಲಾಗಿದೆ ಆಗಾಗಿ ಇನ್ನೂ ಕಾರಣ ಹಾಗೆಯೇ ಉಳಿದಿದೆ.

ಆದ್ದರಿಂದ ಸಧ್ಯ ವೈರಲ್ ಆಗುತ್ತಿರುವ ಹಿಂದೂ ಮಕ್ಕಳನ್ನು ಬರ್ಬರವಾಗಿ ಕೊಂದ ಸಾಜಿದ್ ಅವರ ಅಂತ್ಯಕ್ರಿಯೆಯಲ್ಲಿ 30,000 ಕ್ಕೂ ಹೆಚ್ಚು ಮುಸ್ಲಿಮರು ಭಾಗವಹಿಸಿದ್ದರು ಎಂಬುದು ಸುಳ್ಳು.


ಇದನ್ನು ಓದಿ: ಕೇರಳದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಪ್ರಚಾರದ ವೇಳೆ ಪಾಕಿಸ್ತಾನದ ಬಾವುಟ ಪ್ರದರ್ಶಿಸಲಾಗಿದೆ ಎಂಬುದು ಸುಳ್ಳು


ವಿಡಿಯೋ ನೋಡಿ: JNU ವಿದ್ಯಾರ್ಥಿ ಒಕ್ಕೂಟ ಚುನಾವಣೆಯಲ್ಲಿ ABVP ನಾಲ್ಕು ಸ್ಥಾನ ಗಳಿಸಿದೆ ಎಂದು ಸುದ್ದಿ ತಿರುಚಿದ ಕನ್ನಡ ಮಾಧ್ಯಮಗಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *